ಕೊಹ್ಲಿ 71ನೇ ಶತಕ ಬಾರಿಸುವುದರ ಕುರಿತು ಭವಿಷ್ಯ ನುಡಿದ ಸಲ್ಮಾನ್ ಬಟ್

ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದಾಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ವಿರಾಟ್ ಕೊಹ್ಲಿಯೇ ಅತ್ಯುತ್ತಮ ಆಟಗಾರ, ಕೇನ್ ವಿಲಿಯಮ್ಸನ್ ಜೊತೆ ಅತ್ಯುನ್ನತ ಆಟಗಾರ ವಿರಾಟ್ ಕೊಹ್ಲಿಯನ್ನು ಹೋಲಿಕೆ ಮಾಡಬಾರದು ಎಂದು ತಿರುಗೇಟು ನೀಡಿದ್ದರು.
ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿ ಕುರಿತು ಸಲ್ಮಾನ್ ಬಟ್ ಮಾತನಾಡಿದ್ದು ವಿರಾಟ್ ಕೊಹ್ಲಿ ತಮ್ಮ ಮುಂದಿನ ಶತಕವನ್ನು ಯಾವಾಗ ಬಾರಿಸಬಹುದು ಎಂಬುದನ್ನು ಊಹಿಸಿದ್ದಾರೆ, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಲಿದ್ದಾರೆ ಎಂದಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ 70 ಶತಕಗಳನ್ನು ಸಿಡಿಸಿದ್ದು 71ನೇ ಶತಕವನ್ನು ಯಾವಾಗ ಬಾರಿಸಲಿದ್ದಾರೆ ಎಂದು ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ನವೆಂಬರ್ 2019ರ ನಂತರ ವಿರಾಟ್ ಕೊಹ್ಲಿ ಶತಕ ಬಾರಿಸುವಲ್ಲಿ ಸಫಲರಾಗಿಲ್ಲ, ಹೀಗಾಗಿ ಕೊಹ್ಲಿ ಶತಕದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.
'ವಿರಾಟ್ ಕೊಹ್ಲಿ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಮುರಿದಿದ್ದಾರೆ, ಈ ವಯಸ್ಸಿಗೆ ಕೊಹ್ಲಿ ಇಂಥ ಸಾಧನೆಯನ್ನು ಮಾಡುತ್ತಾರೆ ಎಂದು ಯಾರಾದರೂ ಊಹಿಸಿದ್ದರೇ? ವಿರಾಟ್ ಕೊಹ್ಲಿ ಈಗಾಗಲೇ ಅಸಾಧ್ಯವೆಂದು ಹೇಳಲಾಗುತ್ತಿದ್ದ ಹಲವಾರು ಮೈಲಿಗಲ್ಲುಗಳನ್ನು ಮುಟ್ಟಿದ್ದಾರೆ. ಈಗಾಗಲೇ 70 ಶತಕಗಳನ್ನು ವೇಗವಾಗಿ ಸಿಡಿಸಿರುವ ವಿರಾಟ್ ಕೊಹ್ಲಿ ತಮ್ಮ ಮುಂದಿನ ಶತಕವನ್ನು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸಿಡಿಸಲಿದ್ದಾರೆ' ಎಂದು ಸಲ್ಮಾನ್ ಬಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications