T20 World Cup 2024: ಯುವರಾಜ್ ಸಿಂಗ್, ಕ್ರಿಸ್ ಗೇಲ್ ಬಳಿಕ ಪಾಕ್ ಮಾಜಿ ನಾಯಕ ರಾಯಭಾರಿಯಾಗಿ ಆಯ್ಕೆ
ಮೇ 24 ಶುಕ್ರವಾರ, ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ದೇಶಗಳ ಆತಿಥ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್ 2024ಕ್ಕೆ ಐಸಿಸಿ ಸಂಪೂರ್ಣ ಸಿದ್ಧಗೊಂಡಿದೆ. ಈ ಮೆಗಾ ಟೂರ್ನಿ ಜೂನ್ 2 ರಿಂದ 29 ರವರೆಗೆ ನಡೆಯಲಿದ್ದು, 20 ತಂಡಗಳು ಭಾಗವಹಿಸಲಿವೆ.
ಟೂರ್ನಿಯ ವೇಳೆ ಅಮೆರಿಕದ ಲಾಡರ್ ಹಿಲ್, ಡಲ್ಲಾಸ್ ಮತ್ತು ನ್ಯೂಯಾರ್ಕ್ ಸ್ಟೇಡಿಯಂಗಳಲ್ಲಿ 16 ಪಂದ್ಯಗಳು ನಡೆಯಲಿವೆ. ಜೂನ್ 9 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಬ್ಲಾಕ್‌ಬಸ್ಟರ್ ಪಂದ್ಯ ಸೇರಿದಂತೆ 8 ಪಂದ್ಯಗಳು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿವೆ.

ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ನಡೆಸಲಾಗುತ್ತಿದೆ. ಇದಕ್ಕೂ ಮೊದಲು ಈ ಟೂರ್ನಿಗೆ ರಾಯಭಾರಿಗಳಾಗಿ ಟೀಮ್ ಇಂಡಿಯಾ ಮಾಜಿ ಆಟಗಾರ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಮತ್ತು ಅತ್ಯಂತ ವೇಗದ ವ್ಯಕ್ತಿ ಉಸೇನ್ ಬೋಲ್ಟ್ ಅವರನ್ನು ಘೋಷಿಸಲಾಗಿತ್ತು.
ಆದರೆ ಇದೀಗಾ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ಟಿ20 ವಿಶ್ವಕಪ್‌ಗೆ ರಾಯಭಾರಿಯಾಗಿ ಘೋಷಣೆ ಮಾಡಲಾಗಿದೆ. ಪಾಕ್ ಪರ ಬಲಗೈ ಬ್ಯಾಟರ್ ಶಾಹಿದ್ ಅಫ್ರಿದಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂಡಿಸಿದ್ದರು.
2007ರ ಉದ್ಘಾಟನಾ ಟೂರ್ನಿಯಲ್ಲಿ ಪಾಕ್ ಫೈನಲ್ ತಲುಪಿತ್ತು. ಆದರೆ ಟೀಮ್ ಇಂಡಿಯಾ ಎದುರು ಸೋತಿತ್ತು. ಬಳಿಕ ತಮ್ಮ ತಂಡವನ್ನು 2009ರಲ್ಲಿ ಚಾಂಪಿಯನ್ ಮಾಡುವಲ್ಲಿ ಶಾಹಿದ್ ಅಫ್ರಿದಿ ಪ್ರಮುಖ ಪಾತ್ರ ವಹಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಮತ್ತು ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಆಲ್‌ರೌಂಡರ್ ಪ್ರದರ್ಶನಕ್ಕಾಗಿ ಅಫ್ರಿದಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಆಟಗಾರರಾಗಿದ್ದರು.
ಸಂತಸ ವ್ಯಕ್ತಪಡಿಸಿದ ಆಫ್ರಿದಿ
ಶಾಹಿದ್ ಆಫ್ರಿದಿ ಟಿ20 ವಿಶ್ವಕಪ್‌ನಲ್ಲಿ ತನ್ನ ನೆನಪುಗಳನ್ನು ಮೆಲುಕು ಹಾಕಿದ್ದು, ಟೂರ್ನಿಯಲ್ಲಿ ರಾಯಭಾರಿಯಾಗಿ ಸೇರಲು ಹರ್ಷ ವ್ಯಕ್ತಪಡಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಉದ್ಘಾಟನಾ ಆವೃತ್ತಿ ಆಟಗಾರನಾಗುವುದರಿಂದ ಹಿಡಿದು 2009ರಲ್ಲಿ ಟ್ರೋಫಿ ಎತ್ತುವವರೆಗೆ, ನನ್ನ ವೃತ್ತಿಜೀವನದ ಕೆಲವು ನೆಚ್ಚಿನ ಘಟನೆಗಳು ಈ ವೇದಿಕೆಯಲ್ಲಿವೆ.
ಇತ್ತೀಚಿನ ವರ್ಷಗಳಲ್ಲಿ ಟಿ20 ವಿಶ್ವಕಪ್ ಅದ್ಭುತವಾಗಿದೆ. ಈ ಆವೃತ್ತಿಯ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ. ನಾವು ಹಿಂದೆಂದಿಗಿಂತಲೂ ಹೆಚ್ಚು ತಂಡಗಳ ಪಂದ್ಯಗಳನ್ನು ನೋಡುತ್ತೇವೆ ಎಂದು ಹೇಳಿದ್ದಾರೆ.
ಭಾರತ vs ಪಾಕ್ ಪಂದಕ್ಕಾಗಿ ಉತ್ಸುಕರಾಗಿರುವ ಶಾಹಿದ್ ಅಫ್ರಿದಿ
ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ವೀಕ್ಷಿಸಲು ನಾನು ವಿಶೇಷವಾಗಿ ಉತ್ಸುಕನಾಗಿದ್ದೇನೆ. ಇದು ಆಟದ ಶ್ರೇಷ್ಠ ಪೈಪೋಟಿಗಳಲ್ಲಿ ಒಂದಾಗಿದೆ. ಎರಡು ಶ್ರೇಷ್ಠ ತಂಡಗಳ ನಡುವಿನ ಈ ಸ್ಮರಣೀಯ ಪಂದ್ಯಕ್ಕೆ ನ್ಯೂಯಾರ್ಕ್ ಪರಿಪೂರ್ಣ ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ.
2024ರ ಟಿ20 ವಿಶ್ವಕಪ್ ರಾಯಭಾರಿಗಳು
1) ಯುವರಾಜ್ ಸಿಂಗ್
2) ಕ್ರಿಸ್ ಗೇಲ್
3) ಉಸೇನ್ ಬೋಲ್ಟ್
4) ಶಾಹಿದ್ ಅಫ್ರಿದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications