IND vs SA Test: ಶಾರ್ದೂಲರನ್ನು ಕೈಬಿಡಿ, ಅಶ್ವಿನ್, ಜಡೇಜಾಗೆ ಸ್ಥಾನ ನೀಡಿ ಎಂದ ಮಾಜಿ ಪ್ಲೇಯರ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಸರಣಿಯ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಬುಧವಾರದಿಂದ (ಜನವರಿ 3) ಕೇಪ್ ಟೌನ್‌ನಲ್ಲಿ ನಡೆಯಲಿದೆ. ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಈ ಟೆಸ್ಟ್‌ಗೆ ಸಂಬಂಧಿಸಿದಂತೆ ತಮ್ಮ ಮನದ ಮಾತನ್ನು ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಫಿಟ್ ಆಗಿದ್ದು, ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು. ಈ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿರುವ ಕೃಷ್ಣಮಾಚಾರಿ ಶ್ರೀಕಾಂತ್, ಆರ್ ಅಶ್ವಿನ್ ಅವರನ್ನು ಕೂಡ ಆಡುವ ಹನ್ನೊಂದರಲ್ಲಿ ಆಡಬೇಕೆಂದು ಹೇಳಿದ್ದಾರೆ.

ಜಡೇಜಾ ಅವರ ಬೆನ್ನಿನ ಗಾಯದಿಂದಾಗಿ ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಅವರ ಸ್ಥಾನದಲ್ಲಿ ಆರ್ ಅಶ್ವಿನ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಜಡೇಜಾ ಅಭ್ಯಾಸಕ್ಕೆ ಮರಳಿದ್ದು, ಎರಡನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆಯಿದೆ.
ತಂಡದಲ್ಲಿ ಅಶ್ವಿನ್ ಬೇಕು
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 4 ವೇಗದ ಬೌಲರ್‌ಗಳೊಂದಿಗೆ ಮೈದಾನಕ್ಕೆ ಇಳಿಯಿತು. ಆದರೆ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್, ಎರಡನೇ ಟೆಸ್ಟ್‌ನಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಭಾರತ ತಂಡದ ಮ್ಯಾನೇಜ್ಮೆಂಟ್ ಅಶ್ವಿನ್‌ಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

ಈ ಆಫ್ ಸ್ಪಿನ್ನರ್ ಜಡೇಜಾ ಅವರೊಂದಿಗೆ ಬಿಗಿಯಾಗಿ ಬೌಲಿಂಗ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳನ್ನು ಸದೆಬಡಿಯಬಹುದು ಎಂದು ಶ್ರೀಕಾಂತ್ ಹೇಳುತ್ತಾರೆ.
ಶಾರ್ದೂಲ್‌ಗಿಂತ ಅಶ್ವಿನ್ ಬೆಸ್ಟ್
ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, 'ನಾನು ಇನ್ನೂ ಅಶ್ವಿನ್ ಆಡುವ ಹನ್ನೊಂದರ ಬಳಗದಲ್ಲಿ ಆಡಲು ಬಯಸುತ್ತೇನೆ. ನನ್ನ ಪ್ರಕಾರ ಶಾರ್ದೂಲ್‌ಗಿಂತ ಅಶ್ವಿನ್ ಉತ್ತಮ ಪ್ಲೇಯರ್. ಶಾರ್ದೂಲ್ ಬದಲಿಗೆ ಅಶ್ವಿನ್‌ನಲ್ಲಿ ಆಡಿದರೆ ತಂಡಕ್ಕೆ ಉತ್ತಮ. 5 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗದಿದ್ದರೂ, ಕನಿಷ್ಠ ಕೆಲವು ವಿಕೆಟ್‌ಗಳನ್ನು ಕಬಳಿಸಬಹುದು. ಬಹುಶಃ ಅವರು ಜಡೇಜಾ ಅವರೊಂದಿಗೆ ಬಿಗಿಯಾಗಿ ಬೌಲಿಂಗ್ ಮಾಡಬಹುದು. ಅಶ್ವಿನ್ ಮತ್ತು ಜಡೇಜಾ ಜೋಡಿ 4-5 ವಿಕೆಟ್‌ಗಳನ್ನು ಒಟ್ಟಿಗೆ ಪಡೆಯಬಲ್ಲರು ಎಂದಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಶಾರ್ದೂಲ್ ಠಾಕೂರ್ 19 ಓವರ್‌ಗಳಲ್ಲಿ 101 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರೆ, ಚೊಚ್ಚಲ ಆಟಗಾರ ಪ್ರಸಿದ್ಧ್ ಕೃಷ್ಣ 20 ಓವರ್‌ಗಳಲ್ಲಿ 93 ರನ್ ನೀಡಿ 1 ವಿಕೆಟ್ ಪಡೆದರು. ಈ ಇಬ್ಬರೂ ಬೌಲರ್‌ಗಳು ತಮ್ಮ ಲೈನ್ ಮತ್ತು ಲೆಂಗ್ತ್ ಅನ್ನು ಮರೆತಿದ್ದರು. ಚೆಂಡನ್ನು ಎಲ್ಲಿ ಹಾಕಬೇಕೆಂದು ಅವರಿಗೆ ಅರ್ಥವಾಗಲಿಲ್ಲ ಎಂದು ತಿಳಿಸಿದ್ದಾರೆ.
ಪ್ರಸಿದ್ಧಗೆ ಅವಕಾಶ ನೀಡಿ
ಪ್ರಸಿದ್ಧ್ ಕೃಷ್ಣ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಡುವ ಬಗ್ಗೆ ಮಾತನಾಡಿರುವ ಶ್ರೀಕಾಂತ್, ಒಂದು ಪಂದ್ಯದ ನಂತರ ಯಾವುದೇ ಆಟಗಾರನನ್ನು ಕೈಬಿಡುವುದು ಸರಿಯಲ್ಲ.
ನೀವು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಲು ಬಯಸಿದರೆ, ನಿಮಗೆ ಸ್ಪಿನ್ನರ್‌ಗಳ ರೂಪದಲ್ಲಿ ಉತ್ತಮ ಆಯ್ಕೆ ಇದೆ. ಸ್ಪಿನ್ನರ್‌ಗಳು ಅವರ ಆಟಕ್ಕೆ ನಿಯಂತ್ರಣ ಹಾಕಬಲ್ಲರು. ನೀವು ಈ ರೀತಿಯ ಕೆಲವು ಪ್ರಯೋಗಗಳನ್ನು ಮಾಡಬಹುದು. ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು, ಪ್ರಸಿದ್ಧ್ ಕೃಷ್ಣ ಅವರಿಗೆ ಹೊರಗಿಟ್ಟರೆ ಅವರಿಗೆ ಅನ್ಯಾಯವಾಗುತ್ತದೆ. ಅವರು ಒಂದೇ ಒಂದು ಟೆಸ್ಟ್ ಆಡಿದ್ದಾರೆ. ಶಾರ್ದೂಲ್ ಠಾಕೂರ್ ಈ ಹನ್ನೊಂದರಲ್ಲಿ ಹೊಂದಿಕೊಳ್ಳುವುದಿಲ್ಲ ಎಂದಿದ್ದಾರೆ.
2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 0-1 ಅಂತರದಲ್ಲಿ ಹಿಂದುಳಿದಿದೆ. ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಹನ್ನೊಂದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.
ಕೇಪ್‌ಟೌನ್‌ನಲ್ಲಿ ಭಾರತ ತಂಡಕ್ಕೆ ಇದುವರೆಗೆ ಒಂದೇ ಒಂದು ಟೆಸ್ಟ್‌ನಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಟೀಮ್ ಇಂಡಿಯಾ ಗೆಲುವಿನ ಆಸೆ ಫಲಿಸುತ್ತದಾ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications