Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಗ್‌ಬ್ಯಾಷ್‌ ಆಡಲು ಮುಂದಾದ ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಎಬಿಡಿ

AB de Villiers

ಮೆಲ್ಬೋರ್ನ್‌, ಏಪ್ರಿಲ್‌ 19: ಚೆಂಡನ್ನು ಕ್ರೀಡಾಂಗಣದ ದಶ ದಿಕ್ಕುಗಳ ದರ್ಶನ ಮಾಡಿಸಬಲ್ಲ ಬ್ಯಾಟ್ಸ್‌ಮನ್‌ ಮಿಸ್ಟರ್‌ 360 ಡಿಗ್ರಿ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಆಫ್ರಿಕಾದ ತಾರೆ ಎಬಿ ಡಿ'ವಿಲಿಯರ್ಸ್‌, ಆಸ್ಟ್ರೇಲಿಯಾದ ಬಹುದೊಡ್ಡ ಟಿ20 ಕ್ರಿಕೆಟ್‌ ಟೂರ್ನಿಯಾದ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ.

ಈಗಾಗಲೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ಪಾಕಿಸ್ತಾನ್‌ ಸೂಪರ್‌ ಲೀಗ್‌ಗಳಂತಹ ಟೂರ್ನಿಗಳಲ್ಲಿ ಅಬ್ಬರಿಸಿರುವ ಎಬಿಡಿ ಕಾಂಗರೂ ನೆಲದಲ್ಲಿ ತಮ್ಮ 360 ವಿಶ್ವರೂಪ ಅನಾವರಣ ಪಡಿಸುವ ಆಲೋಚನೆಯಲ್ಲಿದ್ದಾರೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 35 ವರ್ಷ ಬಲಗೈ ಬ್ಯಾಟ್ಸ್‌ಮನ್‌ ಇದೀಗ ಕೇವಲ ಫ್ರಾಂಚೈಸಿ ಆಧಾರಿತ ಕ್ಲಬ್‌ ಕ್ರಿಕೆಟ್‌ ಟೂರ್ನಿಗಳಲಷ್ಟೇ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಮುಂಬರುವ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಡಿ'ವಿಲಿಯರ್ಸ್‌ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ.

ಆದರೆ, ಯಾವ ತಂಡದ ಪರ ಆಡಲಿದ್ದಾರೆ ಎಂಬುದು ಖಾತ್ರಿಯಾಗಿಲ್ಲ. ಕೇವಲ ಎಬಿಡಿ ಅವರ ನಿರ್ವಾಹಕ ತಂಡ ಬಿಗ್‌ ಬ್ಯಾಷ್‌ ಲೀಗ್‌ ತಂಡಗಳನ್ನು ಸಂಪರ್ಕಿಸಿರುವುದಾಗಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ

ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್‌, 228 ಒಡಿಐ ಮತ್ತು 78 ಟಿ20-ಐ ಪಂದ್ಯಗಳನ್ನು ಆಡಿರುವ ಎಬಿಡಿ, ಕ್ರಮವಾಗಿ 8765, 7577 ಮತ್ತು 1672 ರನ್‌ಗಳನ್ನು ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 150ಕ್ಕೂ ಅಧಿಕ ಸ್ಟ್ರೈಕ್‌ ರೈಟ್‌ ಹೊಂದಿರುವ ವಿಲಿಯರ್ಸ್‌, ಬಿಗ್‌ಬ್ಯಾಷ್‌ನಲ್ಲಿ ಪಾಲ್ಗೊಳ್ಳುತ್ತಿರುವ ಜಾಗತಿಕ ಮಟ್ಟದ ಬಹುದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ.

AB de Villiers played for the Royal Challengers Bangalore

ಆರ್‌ಸಿಬಿ ಪರ ಅಬ್ಬರಿಸಿರುವ ಎಬಿಡಿ

ಪ್ರಸಕ್ತ, ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಎಬಿಡಿ, 8 ಪಂದ್ಯಗಳಿಂದ ಒಟ್ಟು 301 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಇನ್ನು ಒಟ್ಟು 149 ಐಪಿಎಲ್‌ ಪಂದ್ಯಗಳಲ್ಲಿ 3 ಶತಕಗಳು, 32 ಅರ್ಧಶಕಗಳನ್ನು ಒಳಗೊಂಡ 4260 ರನ್‌ಗಳನ್ನು ಸಿಡಿಸಿದ್ದಾರೆ.

Story first published: Friday, April 19, 2019, 16:53 [IST]
Other articles published on Apr 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+