For Quick Alerts
ALLOW NOTIFICATIONS  
For Daily Alerts
 

Moises Henriques: RCB ಮಾಜಿ ಆಲ್‌ರೌಂಡರ್‌ ನಿವೃತ್ತಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿರುವ ಅನುಭವ ಹೊಂದಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಮೋಸೆಸ್ ಹೆನ್ರಿಕ್ಸ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು 38 ವರ್ಷದಲ್ಲಿ ಈ ನಿರ್ಧಾರವನ್ನು ಕೈ ಗೊಂಡಿದ್ದಾರೆ. ಇವರು 2013ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ ಹಿರಿಮೆ ಹೊಂದಿದ್ದಾರೆ. ಅಲ್ಲದೆ ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಆಡಿ ಸೈ ಎನಿಸಿಕೊಂಡಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಮೊಯ್ಸೆಸ್ ಹೆನ್ರಿಕ್ಸ್ ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ. ಈ ವರ್ಷದ ಕ್ರಿಸ್‌ಮಸ್‌ಗೆ ಮೊದಲು ನಾನು ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಆಡುವುದನ್ನು ನಿಲ್ಲಿಸಬೇಕೆಂದು ನಿರ್ಧರಿಸಿದ್ದೆ. ಇಷ್ಟು ದಿನ ಕ್ರಿಕೆಟ್ ಆಡುವುದು ಮತ್ತು ನಾಯಕತ್ವ ವಹಿಸುವುದು ಗೌರವದ ಸಂಗತಿ. ಈ ವಯಸ್ಸಿನಲ್ಲೂ ನಾನು ಫಿಟ್ ಆಗಿದ್ದೇನೆ ಮತ್ತು ನನ್ನ ದೇಹವು ನನಗೆ ಬೆಂಬಲ ನೀಡುತ್ತಿದೆ' ಎಂದು ಹೇಳಿದರು. ಆದರೆ ದೀರ್ಘ ಸ್ವರೂಪದ ಪಂದ್ಯದಲ್ಲಿ, ನನ್ನ ತಂಡವನ್ನು ಗೆಲ್ಲಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದಿದ್ದಾರೆ.

Former RCB All-Rounder Moises Henriques Announces Retirement from Cricket

ಮೊಯಿಸಸ್ ಹೆನ್ರಿಕ್ಸ್ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ನಾಲ್ಕು ಟೆಸ್ಟ್, 16 ಏಕದಿನ ಮತ್ತು 24 ಟಿ20 ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾದರು. ಇವರು ಎಂಟು ಇನ್ನಿಂಗ್ಸ್‌ಗಳಲ್ಲಿ 23.43 ಸರಾಸರಿಯಲ್ಲಿ 164 ರನ್‌ ಸಿಡಿಸಿದ್ದಾರೆ. ಇನ್ನು 15 ಏಕದಿನ ಪಂದ್ಯಗಳಲ್ಲಿ 117 ರನ್‌ ಕಲೆ ಹಾಕಿದ್ದು, 21 ಟಿ20 ಪಂದ್ಯಗಳಲ್ಲಿ 355 ರನ್‌ಗಳನ್ನು ಗಳಿದ್ದಾರೆ. ಆದರೆ ಸಿಡ್ನಿ ಸಿಕ್ಸರ್‌ ಜೊತೆಗೆ ಇನ್ನು ಒಂದು ವರ್ಷದ ಒಪ್ಪಂದ ಇರುವುದರಿಂದ ಇವರು ಬಿಗ್ ಬ್ಯಾಷ್‌ ಲೀಗ್‌ನಲ್ಲಿ ಆಡುವುದನ್ನು ಕಾಣಬಹುದಾಗಿದೆ.

ಮೋಸೆಸ್ ಹೆನ್ರಿಕ್ಸ್ ಐಪಿಎಲ್‌ ಸಾಧನೆ

ಮೋಸೆಸ್ ಹೆನ್ರಿಕ್ಸ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌, ಡೆಲ್ಲಿ ಡೇರ್‌ಡೆವಿಲ್ಸ್‌, ಮುಂಬೈ ಇಂಡಿಯನ್ಸ್, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಪರ ಇವರು ಐಪಿಎಲ್‌ನಲ್ಲಿ ಆಡಿದ್ದಾರೆ. 2013ರಲ್ಲಿ ಇವರು ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಆ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಲ್ಲಿ ಮೋಸೆಸ್ ಹೆನ್ರಿಕ್ಸ್ 165 ರನ್‌ ಸಿಡಿಸಿದ್ದಾರೆ. ಅಲ್ಲದೆ 7 ವಿಕೆಟ್‌ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‌ ಸಾಧನೆಯನ್ನು ನೋಡುವುದಾದರೆ ಇವರು 62 ಪಂದ್ಯಗಳಲ್ಲಿ 27.78ರ ಸರಸಾರಿಯಲ್ಲಿ ಒಂದು ಸಾವಿರ ರನ್‌ ಕಲೆ ಹಾಕಿದ್ದಾರೆ. ಅಲ್ಲದೆ 42 ವಿಕೆಟ್‌ ಪಡೆದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

Former RCB All-Rounder Moises Henriques Announces Retirement from Cricket

ಮೋಸೆಸ್ ಹೆನ್ರಿಕ್ಸ್ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶ ನೀಡಿದ್ದಾರೆ. ಇವರು ಆಡಿದ 131 ಲೀಸ್ಟ್ ಎ ಪಂದ್ಯಗಳಲ್ಲಿ 37,84ರ ಸರಾಸರಿಯಲ್ಲಿ 6830 ರನ್‌ ಸಿಡಿಸಿದ್ದಾರೆ. ಈ ವೇಳೆ 13 ಶತಕಗಳು ಇವರ ಬ್ಯಾಟ್‌ನಿಂದ ಹೊರ ಬಂದಿವೆ. ಇನ್ನು 30ರ ಸರಾರಿಯಲ್ಲಿ 127 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

Story first published: Friday, March 28, 2025, 10:37 [IST]
Other articles published on Mar 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+