ಕೊವಿಡ್‌ಗೆ ಮಾಜಿ ಕ್ರಿಕೆಟಿಗ ರಾಜೇಂದ್ರಸಿನ್ಹ್ ಜಡೇಜಾ ಬಲಿ

ದೇಶದಾದ್ಯಂತ ಕೊರೊನಾವೈರಸ್ ಎರಡನೇ ಅಲೆ ಜೋರಾಗಿದ್ದು ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕೆಲ ಕ್ರೀಡಾಪಟುಗಳು ಕೊರೊನಾಗೆ ಬಲಿಯಾಗಿದ್ದಾರೆ ಹಾಗೂ ಅನೇಕ ಕ್ರೀಡಾಪಟುಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ.
ಇದೀಗ ಕೊರೊನಾವೈರಸ್‌ಗೆ ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐನ ಅಧಿಕೃತ ತೀರ್ಪುಗಾರ ರಾಜೇಂದ್ರಸಿನ್ಹ್ ಜಡೇಜಾ ಬಲಿಯಾಗಿದ್ದಾರೆ. ರಾಜೇಂದ್ರಸಿನ್ಹ್ ಜಡೇಜಾ ಅವರಿಗೆ 66 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಕೊರೊನಾವೈರಸ್‌ನಿಂದ ಬಳಲುತ್ತಿದ್ದ ರಾಜೇಂದ್ರಸಿನ್ಹ್ ಜಡೇಜಾ ಭಾನುವಾರ (ಮೇ 16) ರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಅತ್ಯುತ್ತಮ ಬಲಗೈ ಮಧ್ಯಮ ವೇಗಿಯಾಗಿದ್ದ ರಾಜೇಂದ್ರಸಿನ್ಹ್ ಜಡೇಜಾ 50 ಫರ್ಸ್ಟ್ ಕ್ಲಾಸ್ ಪಂದ್ಯಗಳನ್ನಾಡಿ 134 ವಿಕೆಟ್ ಮತ್ತು 11 ಲಿಸ್ಟ್ ಎ ಪಂದ್ಯಗಳನ್ನಾಡಿ 14 ವಿಕೆಟ್‍ಗಳನ್ನು ಪಡೆದು ಮಿಂಚಿದ್ದರು. ಹಾಗೂ ರಾಜೇಂದ್ರಸಿನ್ಹ್ ಜಡೇಜಾ ಫರ್ಸ್ಟ್ ಕ್ಲಾಸ್ ಪಂದ್ಯಗಳಲ್ಲಿ 1536 ರನ್ ಹಾಗೂ ಲಿಸ್ಟ್ ಎ ಪಂದ್ಯಗಳಲ್ಲಿ 104 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ತೀರ್ಪುಗಾರನಾಗಿ 53 ಫರ್ಸ್ಟ್ ಕ್ಲಾಸ್ ಪಂದ್ಯಗಳು, 18 ಲಿಸ್ಟ್ ಎ ಪಂದ್ಯಗಳು ಹಾಗೂ 34 ಟಿ ಟ್ವೆಂಟಿ ಪಂದ್ಯಗಳಲ್ಲಿ ರಾಜೇಂದ್ರಸಿನ್ಹ್ ಜಡೇಜಾ ಕಾರ್ಯನಿರ್ವಹಿಸಿದ್ದರು.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನ ಆಯ್ಕೆಗಾರ, ಕೋಚ್ ಹಾಗೂ ತಂಡದ ವ್ಯವಸ್ಥಾಪಕನಾಗಿಯೂ ರಾಜೇಂದ್ರಸಿನ್ಹ್ ಜಡೇಜಾ ಸೇವೆಯನ್ನು ಸಲ್ಲಿಸಿದ್ದಾರೆ. ಕೊರೊನಾದಿಂದ ವಿಧಿವಶರಾಗಿರುವ ರಾಜೇಂದ್ರಸಿನ್ಹ್ ಜಡೇಜಾ ಅವರಿಗೆ ಬಿಸಿಸಿಐನ ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಹಾಗೂ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ ಜಯದೇವ್ ಶಾ ಕಂಬನಿ ಮಿಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications