Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೌರಾಷ್ಟ್ರ ಕ್ರಿಕೆಟ್‌ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಜಿತು ಶಾ ನಿಧನ

Former Saurashtra opener Jitu Shah passes away

ರಾಜ್‌ಕೋಟ್‌, ಫೆಬ್ರವರಿ 28: ಸೌರಾಷ್ಟ್ರ ಕ್ರಿಕೆಟ್‌ ತಂಡದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಜಿತು ಶಾ ಅವರು ಗುರುವಾರ (ಫೆಬ್ರವರಿ 27) ನಿಧರಾಗಿದ್ದಾರೆ. 76 ವರ್ಷ ವಯಸ್ಸಾಗಿದ್ದ ಶಾ, ಬ್ರೇನ್ ಸ್ಟ್ರೋಕ್‌ (ಮೆದುಳಿನ ಪಾರ್ಶ್ವವಾಯು)ನಿಂದಾಗಿ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.

ರಣಜಿ ಟ್ರೋಫಿ ಟೂರ್ನಿಯಲ್ಲಿ 1965ರಿಂದ 1974ರ ವರೆಗೆ ಸೌರಾಷ್ಟ್ರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಜಿತು ಶಾ, 19 ಪಂದ್ಯ (35 ಇನ್ನಿಂಗ್ಸ್‌)ಗಳಲ್ಲಿ 576 ರನ್ ಗಳಿಸಿದ್ದರು. ಅಹಮದಾಬಾದಿನಲ್ಲಿ ಜಿತು ಸಾವನ್ನಪ್ಪಿರುವ ವಿಚಾರವನ್ನು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಖಾತರಿಪಡಿಸಿದೆ.

ಬೌಲಿಂಗ್ ಕೂಡ ಎಸೆಯುತ್ತಿದ್ದ ಜಿತು ಶಾ, 19 ಪಂದ್ಯಗಳಲ್ಲಿ 7 ವಿಕೆಟ್‌ ಪಡೆದಿದ್ದಾರೆ. 68 ರನ್ನಿಗೆ 3 ವಿಕೆಟ್‌ ಪಡೆದಿದ್ದು ಶಾ ಅವರ ಬೆಸ್ಟ್ ಬೌಲಿಂಗ್ ಫಿಗರ್ ಎನಿಸಿದೆ. ಸಾವನ್ನಪ್ಪಿರುವ ಮಾಜಿ ಆಟಗಾರನಿಗೆ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ.

Story first published: Friday, February 28, 2020, 10:51 [IST]
Other articles published on Feb 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+