38ರ ಹರೆಯದಲ್ಲೆ ಅಸುನೀಗಿದ ಸ್ಕಾಟ್ಲೆಂಡ್ ಕ್ರಿಕೆಟ್ ಮಾಜಿ ನಾಯಕ ಡಿ ಲ್ಯಾಂಗ್

ಎಡಿನ್‌ಬರ್ಗ್, ಏಪ್ರಿಲ್ 19: ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕಾನ್ ಡಿ ಲ್ಯಾಂಗ್ ಸಾವನ್ನಪ್ಪಿದ್ದಾರೆ. 38ರ ಹರೆಯದವರಾಗಿದ್ದ ಡಿ ಲ್ಯಾಂಗ್ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿ ಲ್ಯಾಂಗ್ ಮೃತರಾಗಿರುವ ವಿಚಾರವನ್ನು ಸ್ಕಾಟ್ಲೆಂಡ್ ಕ್ರಿಕೆಟ್ ಶುಕ್ರವಾರ (ಏಪ್ರಿಲ್ 19) ಖಾತರಿಪಡಿಸಿದೆ.
ನಾರ್ಥಾಂಪ್ಟನ್‌ಶೈರ್ ಮಾಜಿ ಆಲ್ ರೌಂಡರ್ ಆಟಗಾರರಾದ ಕಾನ್ ಡಿ ಲ್ಯಾಂಗ್ ಅವರು ಮಡದಿ ಕ್ಲೇರ್ ಮತ್ತು ಇಬ್ಬರು ಮಕ್ಕಳನ್ನು (ಡೈಸಿ, ರೋರಿ) ಅಗಲಿದ್ದಾರೆ. 16 ತಿಂಗಳ ಹಿಂದೆಯೇ ಡಿ ಲ್ಯಾಂಗ್‌ಗೆ ಬ್ರೇನ್ ಟ್ಯೂಮರ್ (ಮೆದುಳು ಕ್ಯಾನ್ಸರ್) ಇರುವುದು ಪತ್ತೆಯಾಗಿತ್ತು. ಅನಾರೋಗ್ಯ ಉಲ್ಬಣಿಸಿದ ಕಾರಣ ಅವರು 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಿಂದ ದೂರ ಉಳಿದಿದ್ದರು.
'ಸಣ್ಣ ಪ್ರಾಯದಲ್ಲೆ ಕಾನ್ ಸಾವನ್ನಪ್ಪಿರುವುದು ಬೇಸರ ಮೂಡಿಸಿದೆ. ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಇನ್ನಿತರ ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರವಾಗಿದೆ. ಅದು ಬರೀ ರಾಷ್ಟ್ರೀಯ ತಂಡದಲ್ಲಿದ್ದು ಅಷ್ಟೇ ಅಲ್ಲ; ಸ್ಥಳೀಯ ಕ್ರಿಕೆಟ್, ಕ್ಲಬ್ ಕ್ರಿಕೆಟ್‌ಗೂ ಆಟಗಾರರಾಗಿ, ಕೋಚ್ ಆಗಿ ಅವರು ಸ್ಫೂರ್ತಿಯಾಗಿದ್ದರು' ಎಂದು ಸ್ಕಾಟ್ಲೆಂಡ್ ಮುಖ್ಯಸ್ಥ ಟೋನಿ ಬ್ರಿಯಾನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications