ಬೆಂಗಳೂರಲ್ಲಿ ಚಿಕಿತ್ಸೆ ಪಡೆದಿದ್ದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಇನ್ನಿಲ್ಲ
ಬೆಂಗಳೂರು, ಜುಲೈ 28: ವರ್ಣಬೇಧ ನೀತಿಯಿಂದ ನಿಷೇಧಕ್ಕೆ ಒಳಗಾಗಿ ಮರುಹುಟ್ಟು ಪಡೆದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕರಾಗಿದ್ದ ಮಾಜಿ ಕ್ರಿಕೆಟರ್ ಕ್ಲೈವ್ ರೈಸ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರೈಸ್ ಅವರು ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಅನಾರೋಗ್ಯ ದಿಂದ ಬಳಲುತ್ತಿದ್ದ 66 ವರ್ಷ ವಯಸ್ಸಿನ ಕ್ಲೈವ್ ರೈಸ್ ಅವರು ಮಂಗಳವಾರ ಕೇಪ್ ಟೌನ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮೆದುಳಿನಲ್ಲಿ ಗೆಡ್ಡೆ ಉಂಟಾಗಿ ತೀಚ್ರ ನೋವು ಅನುಭವಿಸುತ್ತಿದ್ದ ರೈಸ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಈ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ಬಂದಿದ್ದರು.
2015ರ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಸೈಬರ್ ನೈಫ್ ರೊಬಾಟಿಕ್ ರೇಡಿಯೋ ಸರ್ಜರಿಗೆ ಒಳಪಟ್ಟಿದ್ದರು. ಚಿಕಿತ್ಸೆ ಖರ್ಚು ವೆಚ್ಚ ಸರಿದೂಗಿಸಲು ತಮ್ಮ ಬಳಿ ಇದ್ದ ಬಿಎಂಡಬ್ಲ್ಯೂ ಐಷಾರಾಮಿ ಕಾರನ್ನು ಮಾರಾಟ ಮಾಡಬೇಕಾಯಿತು.
ಈ ಬಗ್ಗೆ ದಿ ಹಿಂದೂ ಪತ್ರಿಕೆಗೆ ಪ್ರತಿಕ್ರಿಯಿಸಿದ್ದ ರೈಸ್ "Can't doesn't exist, the word 'can' does. And if you've got to sell your BMW to come here and do the treatment, then do it." ಎಂದಿದ್ದರು.

ಸಾಯಲು ನನಗೆ ಈಗಲೇ ಅವಸರವಿಲ್ಲ
ನನಗೆ ಬಂದಿರುವ ಕಾಯಿಲೆ ಇದ್ದವರು ಹೆಚ್ಚು ದಿನ ಬದುಕುವುದಿಲ್ಲ ಎಂದು ತಿಳಿದು ಬಂದಿದೆ. ಅದರೆ, ನನಗೇನು ಅವಸರವಿಲ್ಲ. ಸೈಬರ್ ಚಾಕು ಹಿಡಿದುಕೊಂಡು ಮೆದುಳಿನಲ್ಲಿರುವ ಕ್ಯಾನ್ಸರ್ ಕೋಶಗಳನ್ನು ಕತ್ತರಿಸುವುದರ ಬಗ್ಗೆ ಅರಿವಿದೆ ಎಂದು ರೈಸ್ ಹೇಳಿದ್ದರು.
ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ರೈಸ್
ಭಾರತ ಪ್ರವಾಸದ ವೇಳೆ ಕ್ಲೈವ್ ರೈಸ್ ನಡೆದುಕೊಂಡ ರೀತಿ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ನಿಷೇಧದ ನಂತರ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ರೈಸ್.
ಶ್ರೇಷ್ಠ ಆಲ್ ರೌಂಡರ್ ಎಂದ ಹರ್ಷ ಭೋಗ್ಲೆ
ರೈಸ್ ಅವರನ್ನು ಶ್ರೇಷ್ಠ ಆಲ್ ರೌಂಡರ್ ಎಂದು ಕರೆದ ಕಾಮೆಂಟೆಟರ್ ಹರ್ಷ ಭೋಗ್ಲೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಟ್ವೀಟ್
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿ ರೈಸ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.
ಪ್ರಥಮ ದರ್ಜೆಯಲ್ಲಿ ಉತ್ತಮ ದಾಖಲೆ
ಪ್ರಥಮ ದರ್ಜೆಯಲ್ಲಿ ಉತ್ತಮ ದಾಖಲೆ ಹೊಂದಿರುವ ಕ್ಲೈವ್ ರೈಸ್ ಅವರು 482 ಪಂದ್ಯಗಳನ್ನಾಡಿ 25,000 ರನ್ ಹಾಗೂ 930 ವಿಕೆಟ್ ಪಡೆದುಕೊಂಡರು. ಕ್ಲೈವ್ ರೈಸ್ ಅವರ ಮಿತ್ರ, ಮಾಜಿ ಕ್ರಿಕೆಟರ್ ಪ್ಯಾಟ್ ಸಿಮ್ಕಾಕ್ಸ್ ಪ್ರತಿಕ್ರಿಯೆ ಟ್ವೀಟ್ ನಲ್ಲಿದೆ.
42ನೇ ವಯಸ್ಸಿನಲ್ಲಿ ತಂಡದ ನಾಯಕ
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಕ್ಲೈವ್ ರೈಸ್ ಅವರು 42ನೇ ವಯಸ್ಸಿನಲ್ಲಿ ತಂಡದ ನಾಯಕನಾಗಿ 1991-92 ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ಆ ಸರಣಿಯಲ್ಲಿ 3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು.
ಕ್ಲೈವ್ ರೈಸ್ ನೆನಪು ಮಾಡಿಕೊಂಡ ಫ್ಯಾನ್ಸ್
ಕ್ಲೈವ್ ರೈಸ್ ನೆನಪು ಮಾಡಿಕೊಂಡ ಫ್ಯಾನ್ಸ್, ಟ್ವಿಟ್ಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications