ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಆಡಲು ಗಂಗೂಲಿ ಅವಕಾಶ ನೀಡಲಿಲ್ಲ: ಹರ್ಷಲ್ ಗಿಬ್ಸ್
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಹರ್ಷಲ್ ಗಿಬ್ಸ್ ಯಾಕೆ ಆಡುತ್ತಿಲ್ಲ ಎನ್ನುವ ವಿಚಾರವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನನಗೆ ಸಿಕ್ಕ ಅವಕಾಶವನ್ನು ತಪ್ಪಿಸಿದರು ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನ ಬೆಂಬಲಿತ ಕಾಶ್ಮೀರ ಪ್ರೀಮಿಯರ್ ಲೀಗ್ (ಕೆಪಿಎಲ್) ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ಸೌರವ್ ಗಂಗೂಲಿ ನನಗೆ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಆಡಲು ಅವಕಾಶ ನೀಡಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಹರ್ಷಲ್ ಗಿಬ್ಸ್ ಹೇಳಿದರು.
ಕಳೆದ ಆಗಸ್ಟ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿ ಬಿಸಿಸಿಐನ ವಿರೋಧದ ಹೊರತಾಗಿಯೂ ಕೆಪಿಎಲ್‌ನಲ್ಲಿ ಗಿಬ್ಸ್ ಆತಿಥ್ಯ ವಹಿಸಿದ್ದರು. ಭಾರತದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಕೆಲಸದಿಂದ ನಿಷೇಧ ಹೇರುವುದಾಗಿ ಭಾರತೀಯ ಮಂಡಳಿಯು ಬೆದರಿಕೆ ಹಾಕುತ್ತಿದೆ ಎಂದು ಹರ್ಷಲ್ ಗಿಬ್ಸ್ ಆರೋಪಿಸಿದ್ದಾರೆ.
ಶನಿವಾರದಿಂದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಆರಂಭವಾಗಿದೆ. ಭಾನುವಾರ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಹರ್ಷಲ್ ಗಿಬ್ಸ್ ತಾವು ಯಾಕೆ ಆಡುತ್ತಿಲ್ಲ ಎನ್ನುವ ಕಾರಣವನ್ನು ತಿಳಿಸಿದ್ದಾರೆ. "ಕಳೆದ ವರ್ಷ ನಾನು ಕಾಶ್ಮೀರ ಲೀಗ್‌ಗೆ ಹೋಗಿದ್ದರಿಂದ ಗಂಗೂಲಿ ನನಗೆ ಆಡಲು ಅವಕಾಶ ನೀಡಲಿಲ್ಲ" ಎಂದು ಹೇಳಿದ್ದಾರೆ.

ವಿಶೇಷ ಪಂದ್ಯಕ್ಕೂ ಗಿಬ್ಸ್‌ಗಿಲ್ಲ ಅವಕಾಶ
ಇನ್ನೂ ವಿಶೇಷ ಎಂದರೆ ಸ್ವಾತಂತ್ಯ್ರದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಮಹಾರಾಜಾಸ್ ಮತ್ತು ವರ್ಲ್ಡ್ ಲೆಜೆಂಡ್ಸ್ ನಡುವೆ ವಿಶೇಷ ಚಾರಿಟಿ ಪಂದ್ಯ ಆಯೋಜನೆಯಾಗಿದೆ. ಈ ಪಂದ್ಯದಲ್ಲಿ ವರ್ಲ್ಡ್ ಲೆಜೆಂಡ್ಸ್ ತಂಡದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಹರ್ಷಲ್ ಗಿಬ್ಸ್ ಕೂಡ ಆಡಬೇಕಿತ್ತು, ಆದರೆ ಈಗ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ. ಸೆಪ್ಟೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಬಿಸಿಸಿಐ ಮತ್ತು ಭಾರತದ ಆಕ್ಷೇಪಣೆಗಳ ಹೊರತಾಗಿಯೂ ಹರ್ಷಲ್ ಗಿಬ್ಸ್ ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಆಡಿದರು. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಮುಂಬರುವ ಋತುವಿನ ವಿಶೇಷ ಪಂದ್ಯಕ್ಕಾಗಿ ವರ್ಲ್ಡ್ ಜೈಂಟ್ಸ್ ತಂಡದಲ್ಲಿ ಹರ್ಷಲ್ ಗಿಬ್ಸ್ ಬದಲಿಗೆ ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್‌ಗೆ ಅವಕಾಶ ನೀಡಲಾಯಿತು.
ಕರ್ನಾಟಕ ಕ್ರಿಕೆಟಿಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಭಾರತೀಯ ಬ್ಯಾಟರ್ ವೇದಾ ಕೃಷ್ಣಮೂರ್ತಿ

ಪಂದ್ಯ ಆಡುವುದಿಲ್ಲ ಎಂದ ಗಂಗೂಲಿ
ಈ ಪಂದ್ಯದಲ್ಲಿ ಭಾರತೀಯ ಮಹಾರಾಜಾಸ್ ತಂಡದ ನಾಯಕತ್ವ ವಹಿಸಬೇಕಾಗಿದ್ದ ಸೌರವ್ ಗಂಗೂಲಿ ನಂತರ ವಿವಿಧ ಕೆಲಸದ ಕಾರಣ ನೀಡಿ ಪಂದ್ಯದಲ್ಲಿ ಭಾಗವಹಿಸುವುರಿಂದ ಹಿಂದೆ ಸರಿದರು. ಆದರೂ ಸೆಪ್ಟೆಂಬರ್ 16ರಂದು ಪಂದ್ಯದ ಸಮಯದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹಾಜರಿರುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟು 8 ತಂಡಗಳು ಭಾಗಿ
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2022 ಸೆಪ್ಟೆಂಬರ್ 10, 2022 ರಂದು ಪ್ರಾರಂಭವಾಗಿದೆ. ಫೈನಲ್ ಪಂದ್ಯವು ಅಕ್ಟೋಬರ್ 1, 2022 ರಂದು ನಡೆಯಲಿದೆ. ಪಂದ್ಯಾವಳಿಯಲ್ಲಿ ಭಾರತ, ಇಂಗ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಸೇರಿ ಒಟ್ಟು 8 ದೇಶಗಳು ಭಾಗವಹಿಸಿವೆ.
ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಗಿಬ್ಸ್, 90 ಟೆಸ್ಟ್, 248 ಏಕದಿನ ಮತ್ತು 23 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದ ಕಾರಣದಿಂದಾಗಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಪಂದ್ಯಾವಳಿಯಲ್ಲಿ ಜಾಂಟಿ ರೋಡ್ಸ್ ನೇತೃತ್ವದ ತಂಡದಲ್ಲಿ ಹರ್ಷಲ್ ಗಿಬ್ಸ್ ಆಡುತ್ತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications