For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಮಾಜಿ ಆಲ್ ರೌಂಡರ್ ದಿಲ್ಹರಾಗೆ 8 ವರ್ಷಗಳ ನಿಷೇಧ

Former Sri Lanka all-rounder Dilhara Lokuhettige handed 8 year ban

ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ದಿಲ್ಹರಾ ಲೋಕುಹೆಟ್ಟಿಜ್‌ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 8 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ದಿಲ್ಹರಾ ತಪ್ಪೆಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ನಿಷೇಧಿಸಲಾಗಿದೆ (ಚಿತ್ರಕೃಪೆ: ಐಸಿಸಿ).

ಐಸಿಸಿ ಭ್ರಷ್ಟಾಚಾರ ನಿಗ್ರಹ ನ್ಯಾಯಮಂಡಳಿಯ ತನಿಖೆಯ ವೇಳೆ ದಿಲ್ಹರಾ ಲೋಕುಹೆಟ್ಟಿಜ್ ಅವರು ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದಿತ್ತು. ಹೀಗಾಗಿ 40ರ ಹರೆಯದ ದಿಲ್ಹರಾಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ 8 ವರ್ಷಗಳ ನಿಷೇಧ ಹೇರಲಾಗಿದೆ.

ವಿಚಾರಣೆಯ ವೇಳೆ ದಿಲ್ಹರಾ ಅವರು ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ಆರ್ಟಿಕಲ್ 2.1.1, ಆರ್ಟಿಕಲ್ 2.1.4 ಮತ್ತು ಆರ್ಟಿಕಲ್ 2.4.4 ನಿಯಮಗಳನ್ನು ಉಲ್ಲಂಘಿಸಿರುವು ಸಾಭೀತಾಗಿದೆ. ಅಂದರೆ ಈ ನಿಯಮಗಳು ಮ್ಯಾಚ್ ಫಿಕ್ಸಿಂಗ್‌ಗೆ ಪ್ರಭಾವ ಬೀರೋದು, ಭ್ರಾಷ್ಟಾಚಾರ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳೋದು, ಭ್ರಷ್ಟಾಚಾರದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದೆ.

ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದ ದಿಲ್ಹರಾ, ಶ್ರೀಲಂಕಾ ರಾಷ್ಟ್ರೀಯ ತಂಡದ ಪರ 9 ಏಕದಿನ ಪಂದ್ಯಗಳಲ್ಲಿ 83 ರನ್, 6 ವಿಕೆಟ್‌, 2 ಟಿ20ಐ ಪಂದ್ಯಗಳಲ್ಲಿ 18 ರನ್, 2 ವಿಕೆಟ್ ದಾಖಲೆ ಹೊಂದಿದ್ದಾರೆ. 2005ರಲ್ಲಿ ಭಾರತದ ವಿರುದ್ಧವೇ ದಿಲ್ಹರಾ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

Story first published: Monday, April 19, 2021, 17:12 [IST]
Other articles published on Apr 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+