Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂದು ಅಂಡರ್‌ 19 ವಿಶ್ವಕಪ್‌ ಗೆದ್ದ ತಂಡದ ಸದಸ್ಯ: ಇಂದು ಐಪಿಎಲ್‌ ಅಂಪೈರ್

ವೃತ್ತಿ ಎಂದ್ರೆನೇ ಹಾಗೆ. ಮನುಷ್ಯ ಯಾವ ವೃತ್ತಿಯಲ್ಲಿ ಬಹು ದಿನಗಳ ಕಾಲ ಇರುತ್ತಾನೋ, ಆ ವೃತ್ತಿಯಲ್ಲಿ ಆತ ಹೆಚ್ಚು ಬದುಕುತ್ತಾನೆ. ಯಾವ ವೃತ್ತಿಯಲ್ಲಿ ಒಬ್ಬ ಮನುಷ್ಯ ಹೆಚ್ಚು ದಿನ ಕಾಲ ಕಳೆಯುತ್ತಾನೆ. ಇನ್ನು ಕ್ರೀಡಾ ಪಟುಗಳು ತಮ್ಮ ವೃತ್ತಿಯಿಂದ ನಿವೃತ್ತರಾದ ಮೇಲೆ ಅವರ ಕ್ರೀಡೆಗೆ ಸಂಬಂಧಿಸಿದ ವೃತ್ತಿಯಲ್ಲಿ ಮುಂದುವರೆಯುತ್ತಾರೆ. ಹಾಗೆ ಕ್ರಿಕೆಟ್‌ ಆಟಗಾರರು ಸಹ ತಮ್ಮ ಕ್ರಿಕೆಟ್‌ ವೃತ್ತಿ ಮುಗಿದ ಬಳಿಕ ಇದೇ ಕ್ರೀಡೆಗೆ ಸಂಬಂಧಿಸಿದಂತೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ.

ಈಗ ನಾವು ಹೇಳಲು ಹೊರಟಿರುವ ಆಟಗಾರ ಸಹ ಹಾಗೆ.. ಭಾರತದ ಪರ ಅಂಡರ್ 19 ಕ್ರಿಕೆಟ್‌ ಆಡಿ ಸೈ ಎನಿಸಿಕೊಂಡಿದ್ದರು. ಇವರು ಅಂಡರ್‌ 19 ವಿಶ್ವಕಪ್‌ ವಿಜೇತ ತಂಡದ ಸದಸ್ಯರೂ ಹೌದು. ಆದ್ರೆ ಈಗ ಇವರು ತಮ್ಮ ಕ್ರಿಕೆಟ್‌ ವೃತ್ತಿಯಿಂದ ಹಿಂದೆ ಸರಿದಿದ್ದು, ಅಂಪೈರ್‌ ಮಾಡಲು ತೀರ್ಮಾನ ಮಾಡಿದ್ದಾರೆ. ಇವರು ಈ ಮೊದಲು ಈ ಲೀಗ್‌ನಲ್ಲಿ ಒಬ್ಬ ಆಟಗಾರನಾಗಿ ಮಿಂಚು ಹರಿಸಿದ್ದರು. ಇಷ್ಟೇ ಅಲ್ಲ 2008 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರು ಹೌದು.

Former U-19 World Cup Winner Tanmay Srivastava Set to Debut as Umpire in IPL 2025

ಹೌದು.. ಈ ಬಾರಿ ಐಪಿಎಲ್‌ನಲ್ಲಿ ತನ್ಮಯ್ ಶ್ರೀವಾಸ್ತವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಈ ಬಾರಿಯ ಐಪಿಎಲ್‌ನಲ್ಲಿ ಅಂಪೈರ್ ಆಗಿ ಪಾದಾರ್ಪಣೆ ಮಾಡಲಿದ್ದಾರೆ. ಇವರು ವಿರಾಟ್‌ ಕೊಹ್ಲಿ ಮುಂದಾಳತ್ವದ ಅಂಡರ್ 19 ವಿಶ್ವಕಪ್‌ ತಂಡ ದಕ್ಷಿಣ ಆಫ್ರಿಕಾವನ್ನು ಫೈನಲ್‌ನಲ್ಲಿ ಮಣಿಸಿದ್ದಾಗ ತಂಡದ ಭಾಗವಾಗಿದ್ದರು. ಅಲ್ಲದೆ ಇವರು ಎಡಗೈ ಆಟಗಾರ. ಇವರನ್ನು ಅದೇ ವರ್ಷ ಪಂಜಾಬ್ ತಂಡ ಖರೀದಿ ಮಾಡಿತ್ತು.

ಅಂಪೈರ್‌ ಆಗಿ ಮಿಂಚಲಿರುವ ಮಾಜಿ ಆಟಗಾರ

ತನ್ಮಯ್ ಶ್ರೀವಾಸ್ತವ ಒಬ್ಬ ಆಟಗಾರನಾಗಿ ಕ್ರಿಕೆಟ್‌ ಅಂಗಳದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ತಮ್ಮ 30 ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದರು. ಪಂಜಾಬ್‌ ಪರ ಇವರು ಎರಡು ಆವೃತ್ತಿಗಳಲ್ಲಿ ಬ್ಯಾಟ್ ಮಾಡಿದ್ದಾರೆ. ಆದ್ರೆ ಹೇಳಿಕೊಳ್ಳುವ ಸಾಧನೆಯನ್ನು ಏನು ಮಾಡಲಿಲ್ಲ. ಆಡಿದ 7 ಪಂದ್ಯಗಳ 3 ಇನಿಂಗ್ಸ್‌ಗಳಲ್ಲಿ ಕೇವಲ 8 ರನ್‌ ಸಿಡಿಸಿದ್ದರು. ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಡೆಕ್ಕನ್ ಚಾರ್ಜರ್ಸ್‌ನ ಭಾಗವಾಗಿದ್ದರು. ಆದ್ರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಲಿಲ್ಲ.

Former U-19 World Cup Winner Tanmay Srivastava Set to Debut as Umpire in IPL 2025

ತನ್ಮಯ್ ಶ್ರೀವಾಸ್ತವ ನಿವೃತ್ತರಾದ ಬಳಿಕ ಅಂಪೈರಿಂಗ್‌ನತ್ತ ಚಿತ್ತ ನೆಟ್ಟರು. ಬಿಸಿಸಿಐ ಲೆವೆಲ್ 2 ಅಂಪೈರ್ ಕೋರ್ಸ್ ಅನ್ನು ಸಹ ಪಾಸು ಮಾಡಿದರು. ಈಗ ಅವರು ಐಪಿಎಲ್ 2025 ರಲ್ಲಿ ಅಂಪೈರ್ ಆಗಿ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ತನ್ಮಯ್ ಶ್ರೀವಾಸ್ತವ 90 ಪ್ರಥಮ ದರ್ಜೆ ಪಂದ್ಯಗಳಲ್ಲಿ 34.39 ಸರಾಸರಿಯಲ್ಲಿ ಒಟ್ಟು 4918 ರನ್ ಸಿಡಿಸಿದ್ದು, ಇದರಲ್ಲಿ 10 ಶತಕ, 27 ಅರ್ಧಶತಕಗಳು ಸೇರಿವೆ.

Story first published: Wednesday, March 19, 2025, 14:41 [IST]
Other articles published on Mar 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+