ಅಚ್ಚರಿಯಾದರೂ ನಿಜ!: 2018 ಮತ್ತು 2022ರ ಏಷ್ಯಾಕಪ್ ಟೂರ್ನಿಯ 4 ಕಾಕತಾಳೀಯ ಘಟನೆಗಳು!

ಏಷ್ಯಾ ಕಪ್ ಟೂರ್ನಿ ಶನಿವಾರ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಕದನದೊಂದಿಗೆ ಆರಂಭವಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿನ್(ಎಸಿಸಿ) ಆಯೋಜನೆ ಮಾಡುವ ಈ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಲು ಏಷ್ಯಾದ ತಂಡಗಳು ಹಾತೊರೆಯುತ್ತಿದೆ. ಪ್ರತಿ ಎರಡು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಈ ಟೂರ್ನಿಯನ್ನು ಆಯೋಜಿಸಲಾಗುತ್ತೊದ್ದು ಆರಂಬದಲ್ಲಲಿ ಇದು ಏಷಕಿನ ಮಾದರಿಯಲ್ಲಿ ಮಾತ್ರವೇ ಆಡಿಲಾಗುತ್ತಿತ್ತು. ಆದರೆ ಈಗ ಟಿ20 ಮಾದರಿಯಲ್ಲಿಯೂ ಟೂರ್ನಿ ಆಯೋಜನೆಗೊಳ್ಳುತ್ತಿದೆ.
ಸದ್ಯ 2022ರ ಆವೃತ್ತಿ ಯುಎಇನಲ್ಲಿ ನಡೆಯುತ್ತಿದ್ದು ತಂಗಳು ಈ ಟೂರ್ನಿಯಲ್ಲಿ ಮುಖಾಮುಖಿಯಾಗಿದೆ. ಇದಕ್ಕೂ ಹಿಂದೆ 2018ರಲ್ಲಿ ಈ ಟೂರ್ನಿ ನಡೆದಿದ್ದು ಭಾರತ ಚಾಂಪಿಯನ್ ಆಗಿತ್ತು. ಆದರೆ ಅಚ್ಚರಿ ಪಡೆವ ರೀತಿ ಕಳೆದ ಏಷ್ಯಾ ಕಪ್ ಆವೃತ್ತಿಗೂ ಈ ಬಾರಿಯ ಆವೃತ್ತಿಗೂ ಕೆಲ ಕುತೂಹಲಕಾರಿ ಸಾಮ್ಯತೆಗಳು ಕಂಡುಬರುತ್ತಿವೆ. ಅಂಥಾ ನಾಲ್ಕು ಸಾಮ್ಯತೆಗಳ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

ಆತಿಥ್ಯಕ್ಕೆ ಬೇರೆ ಬೇರೆ ದೇಶಗಳು ಹಕ್ಕು ಹೊಂದಿದ್ದರೂ ಯುಎಇನಲ್ಲಿ ಆಯೋಜನೆ
2018ರಲ್ಲಿ ಏಷ್ಯಾ ಕಪ್ ಟೂರ್ನಿಯ ಆತಿಥ್ಯದ ಹಕ್ಕು ಭಾರತದ ಬಳಿಯಿತ್ತು. ಆದರೆ ಭಾರತ ಪಾಕಿಸ್ತಾನದ ನಡುವಿನ ರಾಜಕೀಯದ ಕಾರಣದಿಂದಾಗಿ ಭಾರತದಲ್ಲಿ ಈ ಟೂರ್ನಿ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಯುಎಇನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಇನ್ನು ಈ ಬಾರಿ ಟೂರ್ನಿ ಆಯೋಜನೆಯ ಹಕ್ಕನ್ನು ಶ್ರೀಲಂಕಾ ವಹಿಸಿಕೊಂಡಿತ್ತು. ಆದರೆ ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಹಾಗೂ ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಆಯೋಜಿಸಲು ಸಾಧ್ಯವಾಗದೆ ಯುಎಇನಲ್ಲಿ ಆಯೋಜನೆಯಾಗುತ್ತಿದೆ.

2018 ಮತ್ತು 2022ರಲ್ಲಿ ಒಂದೇ ರೀತಿಯಿದೆ ಗುಂಪುಗಳು
ಆರು ತಂಡಗಳು ಭಾಗವಹಿಸುವ ಈ ಟೂರ್ನಿಯನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಗುತ್ತದೆ. 2018ರಲ್ಲಿ ಒಂದು ಗುಂಪಿನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳಿದೆ. ಮತ್ತೊಂದರಲ್ಲಿ ಭಾರತ, ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡಗಳು ಇದ್ದವು. 2022ರಲ್ಲಿಯೂ ಇದೇ ತಂಡಗಳು ಈ ಗುಂಪುಗಳಲ್ಲಿದೆ.

ಭಾರತ ತಂಡಕ್ಕೆ ರೋಹಿತ್ ನಾಯಕತ್ವ
2018ರ ಸಂದರ್ಭದಲ್ಲಿ ಭಾರತ ತಂಡದ ಪೂರ್ಣ ಪ್ರಮಾಣದ ನಾಯಕತ್ವ ವಿರಾಟ್ ಕೊಹ್ಲಿ ಅವರ ಬಳಿಯಿತ್ತು. ಆದರೆ ಏಷ್ಯಾ ಕಪ್ ಟೂರ್ನಿಯಿಮದ ಕೊಹ್ಲಿ ಹೊರಗುಳಿದಿದ್ದರು. ಹೀಗಾಗಿ ಉಪ ನಾಯಕ ರೋಹಿತ್ ಶರ್ಮಾ ಕಳೆದ ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ರೋಹಿತ್ ಶರ್ಮಾ ಭಾರತ ತಂಡದ ಪೂರ್ಣಕಾಲಿಕ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
Asia Cup 2022 IND vs PAK: ಈ ಸಾಧನೆ ಮಾಡಿದ ಏಕೈಕ ಭಾರತೀಯನಾಗಲಿದ್ದಾರೆ ವಿರಾಟ್ ಕೊಹ್ಲಿ

ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾಗೆ ಸೋಲು
2018ಕ್ಕೂ ಮುನ್ನ ಅಫ್ಘಾನಿಸ್ತಾನ ತಂಡದ ವಿರುದ್ಧ ಏಕದಿನ ಮಾದರಿಯಲ್ಲಿ ಶ್ರೀಲಂಕಾ ಒಂದು ಬಾರಿಯೂ ಸೋಲು ಅನುಭವಿಸಿರಲಿಲ್ಲ. ಆದರೆ ಕಳೆದ ಏಷ್ಯಾ ಕಪ್‌ನಲ್ಲಿ ಈ ಎರಡು ತಮಡಗಳು ಮುಖಾಮುಖಿಯಾದ ಮೊದಲ ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡ 91 ರನ್‌ಗಳ ಅಂತರದಿಂದ ಶ್ರೀಲಂಕಾ ತಂಡವನ್ನು ಮಣಿಸಿ ಈ ಸೋಲಿನ ಸರಪಳಿಯನ್ನು ಕಡಿದುಕೊಂಡಿತ್ತು. ನಾಲ್ಕು ವರ್ಷಗಳ ನಂತರ ಶನಿವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಅಫ್ಘಾನಿಸ್ತಾನ 8 ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಟಿ20 ಮಾದರಿಯಲ್ಲಿಯೂ ಶ್ರೀಲಂಕಾ ವಿರುದ್ಧ ಮೊದಲ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications