'ಮೈಸೂರು ಎಕ್ಸ್‌ಪ್ರೆಸ್' ಜಾವಗಲ್ ಶ್ರೀನಾಥ್‌ರ ಬೆಸ್ಟ್ ವಿಕೆಟ್ ಸಾಧನೆಗಳು

ಬೆಂಗಳೂರು, ಆಗಸ್ಟ್ 31: ಶನಿವಾರ ಆಗಸ್ಟ್ 31ಕ್ಕೆ ಭಾರತದ ಮಾಜಿ ಕ್ರಿಕೆಟರ್, ಕರ್ನಾಟಕದ ಜಾವಗಲ್ ಶ್ರೀನಾಥ್ 50ರ ಹರೆಯಕ್ಕೆ ಕಾಲಿರಿಸಿದ್ದಾರೆ. ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ, ಗ್ರೇಟ್‌ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರಂತೆ ಮೈಸೂರು ಎಕ್ಸ್‌ಪ್ರೆಸ್ ಶ್ರೀನಾಥ್ ಕೂಡ ಕರ್ನಾಟಕದತ್ತ ವಿಶ್ವ ಕ್ರಿಕೆಟ್ ತಿರುಗಿ ನೋಡುವಂತೆ ಮಾಡಿದ್ದವರು.
ಏಕದಿನದಲ್ಲಿ ಟೀಮ್ ಇಂಡಿಯಾ ಪರ 300 ವಿಕೆಟ್ ಮೈಲಿಗಲ್ಲು ಸ್ಥಾಪಿಸಿದ ಮೊದಲ ಕ್ರಿಕೆಟರ್ ಜಾವಗಲ್ ಶ್ರೀನಾಥ್. ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಸಾಧನೆ ಮೊದಲು ಮಾಡಿದ್ದು ಮಾಜಿ ನಾಯಕ ಕಪಿಲ್‌ದೇವ್. ಇದೇ ಸಾಧನೆಗಾಗಿ ಶ್ರೀನಾಥ್‌ಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಏಕದಿನದಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯರಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದರೆ (337 ವಿಕೆಟ್‌ಗಳು), ಶ್ರೀನಾಥ್ ದ್ವಿತೀಯ ಸ್ಥಾನ (315 ವಿಕೆಟ್‌ಗಳು) ಪಡೆದುಕೊಂಡಿದ್ದಾರೆ.

13 ವಿಕೆಟ್‌ಗಳು
ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಒಂದರಲ್ಲಿ ಜಾವಗಲ್ ಶ್ರೀನಾಥ್ ಭರ್ಜರಿ 13 ವಿಕೆಟ್ ಕೆಡವಿದ್ದರು. ಈ ಪಂದ್ಯ 1999ರಂದು ಕೋಲ್ಕತ್ತಾದಲ್ಲಿ ನಡೆದಿತ್ತು. ಆಗ ಪಾಕ್ ಮೊದಲ ಇನ್ನಿಂಗ್ಸ್‌ನಲ್ಲಿ 46ಕ್ಕೆ 5, ದ್ವಿತೀಯ ಇನ್ನಿಂಗ್ಸ್‌ನಲ್ಲಿ 86 ರನ್‌ಗೆ 8 ವಿಕೆಟ್ ಪಡೆದಿದ್ದರು. ಆದರೂ ಈ ಪಂದ್ಯವನ್ನು ಭಾರತ 46 ರನ್‌ಗಳಿಂದ ಸೋತಿತ್ತು.

21ಕ್ಕೆ 6 ವಿಕೆಟ್‌ಗಳು
1996ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡ, ಅಹ್ಮದಾಬಾದ್‌ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶ್ರೀನಾಥ್ 21 ರನ್‌ಗೆ 6 ವಿಕೆಟ್ ಪಡೆದಿದ್ದರು. ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲೂ ಶ್ರೀನಾಥ್‌ಗೆ 2 ವಿಕೆಟ್‌ಗಳು ಲಭಿಸಿದ್ದವು. ಭಾರತ 64 ರನ್‌ಗಳಿಂದ ಪಂದ್ಯ ಗೆದ್ದಿತ್ತು.

ಅದ್ಭುತ ಬೌಲಿಂಗ್
ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವೊಂದರಲ್ಲಿ 24 ರನ್‌ಗೆ 5 ವಿಕೆಟ್ ಸಾಧನೆ ಜಾವಗಲ್ ಶ್ರೀನಾಥ್ ಹೆಸರಿನಲ್ಲಿದೆ. 1993ರಲ್ಲಿ ಕಾನ್ಪುರದಲ್ಲಿ ನಡೆದಿದ್ದ ಈ ಮೊದಲ ಏಕದಿನ ಪಂದ್ಯದಲ್ಲಿ ಮೈಸೂರು ಎಕ್ಸ್‌ಪ್ರೆಸ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯ 7 ವಿಕೆಟ್‌ಗಳಿಂದ ಭಾರತದ ವಶವಾಗಿತ್ತು.

23ಕ್ಕೆ 4 ವಿಕೆಟ್‌ಗಳು
2002ರಲ್ಲಿ ಆಕ್ಲೆಂಡ್ ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವಿದು. ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಜಾವಗಲ್ ಶ್ರೀನಾಥ್ 23 ರನ್ ನೀಡಿ 4 ವಿಕೆಟ್ ಉರುಳಿಸಿದ್ದರು. ಆದರೆ ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದಾಗಿ ಭಾರತ ಈ ಪಂದ್ಯವನ್ನು 3 ವಿಕೆಟ್‌ಗಳಿಂದ ಕಳೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications