Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಈ ಸಾಧನೆಯನ್ನು ಕೇವಲ 4 ಬೌಲರ್‌ಗಳು ಮಾತ್ರ ಮಾಡಿದ್ದಾರೆ

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದ. ಈ ಶ್ರೀಮಂತ ಲೀಗ್‌ನಲ್ಲಿ ಭಾಗವಹಿಸಲು ಹಲವು ಸ್ಟಾರ್ ಆಟಗಾರರು ಸಿದ್ಧರಾಗಿದ್ದಾರೆ. ಈಗಾಗಲೇ ಆಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಆಟಗಾರರು ಸಹ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 17 ಆವೃತ್ತಿಯ ಐಪಿಎಲ್‌ಗಳು ತೆರೆಯ ಮರೆಗೆ ಸರಿದಿವೆ. ಈಗ 18ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ವೇಳೆ ಕೇವಲ ನಾಲ್ಕು ಬೌಲರ್‌ಗಳು ಮಾಡಲು ಸಾಧ್ಯವಾದ ಒಂದು ದಾಖಲೆಯ ಬಗ್ಗೆ ಇಲ್ಲಿದೆ ವರದಿ.

ಐಪಿಎಲ್ ಇತಿಹಾಸದಲ್ಲಿ ಅದೆಷ್ಟೋ ಬೌಲರ್‌ಗಳು ಐದು ವಿಕೆಟ್‌ ಪಡೆದು ಬೀಗಿದ್ದಾರೆ. ಈ ವೇಳೆ ಐಪಿಎಲ್‌ನಲ್ಲಿ ಕನಿಷ್ಠ ಎರಡು ಬಾರಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ ಬೌಲರ್‌ಗಳ ಬಗ್ಗೆ ವರದಿ ಇಲ್ಲಿದೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ಕು ಬೌಲರ್‌ಗಳು ಇದ್ದು ಇದ್ರಲ್ಲಿ ಮೂರು ಭಾರತೀಯರು ಇರುವುದೇ ವಿಶೇಷ.

Four Bowlers Who Have Taken Five Wickets Twice in IPL History Three Are Indians

ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ, ನಾಲ್ಕು ಬಾರಿ ಇನಿಂಗ್ಸ್‌ ಒಂದ್ರಲ್ಲಿ 5 ವಿಕೆಟ್‌ ಸಾಧನೆ ಮಾಡಿದ್ದಾರೆ. ಅದ್ರಲ್ಲಿ ಎದ್ದು ಕಾಣುವ ಹೆಸರು ಆಸ್ಟ್ರೇಲಿಯಾದ ಜೇಮ್ಸ್ ಫಾಕ್ನರ್‌. ಇವರು 2011 ರಿಂದ 2017ರಲ್ಲಿ ಐಪಿಎಲ್‌ನಲ್ಲಿ ಆಡಿ ಈ ಸಾಧನೆ ಮಾಡಿದ್ದಾರೆ. ಈ ಅವಧಿಯಲ್ಲಿ, ಅವರು ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದ ಸಾಧನೆಯನ್ನೂ ಮಾಡಿದ್ದಾರೆ. ಜೇಮ್ಸ್ ಫಾಕ್ನರ್ 60 ಐಪಿಎಲ್ ಪಂದ್ಯಗಳಲ್ಲಿ 59 ವಿಕೆಟ್‌ಗಳನ್ನು ಪಡೆದಿದ್ದಾರೆ.

Take a Poll

ಮೂರು ಭಾರತೀಯ ಬೌಲರ್‌ಗಳಿಂದ ಸಾಧನೆ

ಇನ್ನು ಇದೇ ಸಾಧನೆಯನ್ನು ಭಾರತೀಯ ಬೌಲರ್‌ಗಳು ಸಹ ಮಾಡಿದ್ದಾರೆ. 2010 ರಿಂದ ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ವೇಗದ ಬೌಲರ್ ಜಯದೇವ್ ಉನದ್ಕಟ್‌, ಈ ವರೆಗೆ 105 ಐಪಿಎಲ್‌ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 99 ವಿಕೆಟ್‌ ಪಡೆದಿದ್ದಾರೆ. ಇವರಿಗೆ ಐಪಿಎಲ್‌ನಲ್ಲಿ ವಿಕೆಟ್‌ಗಳ ಶತಕ ಬಾರಿಸಲು ಇನ್ನೊಂದು ವಿಕೆಟ್‌ ಬೇಕು. ಇವರು ಸಹ ಐಪಿಎಲ್‌ನಲ್ಲಿ 2 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಆರ್‌ಸಿಬಿ ತಂಡ ಸೇರಿರುವ ಭುವನೇಶ್ವರ್ ಕುಮಾರ್ ಕೂಡ ಐಪಿಎಲ್‌ನಲ್ಲಿ ಇದುವರೆಗೆ ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಇದುವರೆಗೆ 176 ಪಂದ್ಯಗಳಲ್ಲಿ ಭುವಿ 181 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಸಹ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇವರು 2013ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇಲ್ಲಿಯವರೆಗೆ ಬುಮ್ರಾ 133 ಪಂದ್ಯಗಳನ್ನು ಆಡಿದ್ದು, 165 ವಿಕೆಟ್‌ ಕಬಳಿಸಿದ್ದಾರೆ. ಇವರು ಸಹ ಐಪಿಎಲ್‌ನಲ್ಲಿ ಎರಡು ಬಾರಿ ಐದು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಬುಮ್ರಾ ಇನ್ನು ಗಾಯದಿಂದ ಫಿಟ್ ಆಗಿರದ ಕಾರಣ ಇವರು ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಆಟಗಾರರು ತಮ್ಮ ತಮ್ಮ ತಂಡದ ಪರ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Story first published: Tuesday, March 18, 2025, 20:00 [IST]
Other articles published on Mar 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+