Urvil Patel: ಐಪಿಎಲ್ ಹರಾಜು ಬಳಿಕ ರಿವೀಲ್ ಆಯ್ತು ಉರ್ವಿಲ್ ಬ್ಯಾಟಿಂಗ್: ಫ್ರಾಂಚೈಸಿಗೆ ಉರಿ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗುಜರಾತ್ ತಂಡದ ಪರ ಉರ್ವಿಲ್ ಪಟೇಲ್ ಅಬ್ಬರಿಸುತ್ತಿದ್ದಾರೆ. ಇತ್ತೀಚೆಗೆ 28 ಎಸೆತಗಳಲ್ಲಿ ಉರ್ವಿಲ್ ಪಟೇಲ್ ಶತಕ ಬಾರಿಸಿ ಮಿಂಚಿದ್ದರು. ಇದೀಗ ಉತ್ತರಖಂಡ ವಿರುದ್ಧ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಉರ್ವಿಲ್ ಪಟೇಲ್ ಬಿರುಸಿನ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಐಪಿಎಲ್ ಫ್ರಾಂಚೈಸಿಗಳಿಗೆ ಹೊಟ್ಟೆ ಉರಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಈ ಬಾರಿ ಮೆಗಾ ಹರಾಜಿನಲ್ಲಿ ಉರ್ವಿಲ್ ಪಟೇಲ್ ಅವರನ್ನು ಯಾವುದೇ ಫ್ರಾಂಚೈಸಿಗಳು ಬಿಡ್ ಮಾಡಲು ಮುಂದಾಗಿರಲಿಲ್ಲ. ಹೀಗಾಗಿ ಅವರು ಯಾವುದೇ ತಂಡವನ್ನು ಸೇರದೆ ಅನ್‌ಸೋಲ್ಡ್ ಆಟಗಾರರ ಪಟ್ಟಿ ಸೇರಿದ್ದರು. ಉರ್ವಿಲ್ ಪಟೇಲ್ ಐಪಿಎಲ್ 2024ರಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿದ್ದರು. ಇದೀಗ ಟಿ20 ಕ್ರಿಕೆಟ್‌ನಲ್ಲಿ ಉರ್ವಿಲ್ ಪಟೇಲ್ ಅವರು ಎರಡು ವೇಗದ ಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇಂದೋರ್‌ನ ಎಮರಾಲ್ಡ್ ಹೈಸ್ಕೂಲ್ ಗ್ರೌಂಡ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಉತ್ತರಖಂಡ ಬ್ಯಾಟಿಂಗ್ ಮಾಡಬೇಕಾಯಿತು. ನಿಗದಿತ 20 ಓವರ್‌ಗಳಲ್ಲಿ ಉತ್ತರಖಂಡ 7 ವಿಕೆಟ್ ನಷ್ಟಕ್ಕೆ 182 ರನ್ ಕಲೆ ಹಾಕಿತು. ಉತ್ತರಖಂಡ ನೀಡಿದ 183 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ 35 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತು. ಗುಜರಾತ್ ಪರ ಉರ್ವಿಲ್ ಪಟೇಲ್ ಅದ್ಭುತ ಬ್ಯಾಟಿಂಗ್ ಮಾಡಿದರು. ಅವರು 41 ಎಸೆತಗಳಲ್ಲಿ 11 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳ ನೆರವಿನಿಂದ ಅಜೇಯ 115 ರನ್ ಗಳಿಸಿದರು. ಉರ್ವಿಲ್ ಪಟೇಲ್ ಅಬ್ಬರಕ್ಕೆ ಉತ್ತರಾಖಂಡ ಬೌಲರ್‌ಗಳು ಬೆಚ್ಚಿಬಿದ್ದಾರೆ.
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಉರ್ವಿಲ್ ಅವರನ್ನು ಗುಜರಾತ್ ಟೈಟಾನ್ಸ್ (ಜಿಟಿ) ಮೂಲ ಬೆಲೆಗೆ ಬಿಡ್ ಮಾಡಿತ್ತು. ಚೊಚ್ಚಲ ಐಪಿಎಲ್ ಆವೃತ್ತಿಯಲ್ಲೇ ಅವರು ಚಾಂಪಿಯನ್ ಪಟ್ಟಕ್ಕೇರಿದ್ದರು. ಐಪಿಎಲ್ 2022ರ ಚಾಂಪಿಯನ್ ಗುಜರಾತ್ ತಂಡದೊಂದಿಗೆ ಅವರು ಕಳೆದೆರಡು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಉರ್ವಿಲ್ ಪಟೇಲ್ ಅನ್‌ಸೋಲ್ಡ್ ಆಟಗಾರರಾದರು.
ಐಪಿಎಲ್ 2025ರಲ್ಲಿ ಅವಕಾಶ?
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿರುವ ಉರ್ವಿಲ್ ಅವರು ಫ್ರಾಂಚೈಸಿಗಳು ತಿರುಗಿ ನೋಡುವ ಅಮೋಘ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಅವರು ಐಪಿಎಲ್ 2025ರ ಟೂರ್ನಿಯನ್ನು ಆಡುವ ಅವಕಾಶವನ್ನು ಹೊಂದಿದ್ದಾತೆ. ಐಪಿಎಲ್‌ನ 10 ಫ್ರಾಂಚೈಸಿಗಳ ಯಾವುದೇ ಆಟಗಾರ ಗಾಯಗೊಂಡರೆ, ಅವರ ಬದಲಿಗೆ ಉರ್ವಿಲ್ ಅವರನ್ನು ಫ್ರಾಂಚೈಸ್ ಆಯ್ಕೆ ಮಾಡಬಹುದು. ಇಂತಹ ಸಂದರ್ಭದಲ್ಲಿ ಅವರು ಐಪಿಎಲ್ 2025ರ ಟೂರ್ನಿಯನ್ನು ಆಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications