ಐಪಿಎಲ್ ಇತಿಹಾಸದ ಟಾಪ್ 10 ಬೆಸ್ಟ್ ಎಕಾನಮಿ ಹೊಂದಿರುವ ಬೌಲರ್‌ಗಳ ಪಟ್ಟಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಲೀಗ್ ಹಂತದ ಪಂದ್ಯಗಳು ಸಹ ಮುಕ್ತಾಯವಾಗಲಿವೆ. ಟಿ20 ಫಾರ್ಮೆಟ್‌ನಲ್ಲಿ ಬ್ಯಾಟರ್‌ಗಳ ಅಬ್ಬರ ಜೋರಾಗಿರುತ್ತದೆ. ಈ ಲೀಗ್‌ನಲ್ಲಿ ಬೌಲರ್‌ಗಳ ಹೆಚ್ಚಾಗಿ ದಂಡನೆಗೆ ಒಳಗಾಗುತ್ತಾರೆ. ಈ ವರದಿಯಲ್ಲಿ ಐಪಿಎಲ್ ಇತಿಹಾಸದಲ್ಲಿ ಬೆಸ್ಟ್ ಎಕಾನಮಿ ಹೊಂದಿರುವ ಬೌಲರ್‌ಗಳು ಯಾರು? ಎಂಬ ಬಗ್ಗೆ ವರದಿ ಇಲ್ಲಿದೆ.
ಒಬ್ಬ ಬೌಲರ್ ತಾನು ಬೌಲಿಂಗ್ ಮಾಡುವಾಗ ಪ್ರತಿ ಓವರ್‌ಗೆ ಸರಾಸರಿ ಎಷ್ಟು ರನ್ ನೀಡುತ್ತಾನೆ ಎಂಬುದರ ಲೆಕ್ಕಾಚಾರವೇ ಎಕಾನಮಿ ಆಗಿದೆ. ಬ್ಯಾಟರ್‌ಗಳ ಮೇಲಾಟದಲ್ಲಿ ಬೌಲರ್‌ಗಳು ಜಿಪುಣತನವನ್ನು ಸಹ ಪ್ರದರ್ಶಿಸಿದ್ದಾರೆ. ಈ ಪಟ್ಟಿಯಲ್ಲಿ ಆರ್‌ಸಿಬಿ ಬೌಲರ್‌ಗಳು ಎದ್ದು ಕಾಣುತ್ತಾರೆ.

ಅನಿಲ್ ಕುಂಬ್ಳೆ
ಐಪಿಎಲ್ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಭಾರತದ ದಿಗ್ಗಜ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ ಅವರ ಹೆಸರು ಬೆಸ್ಟ್ ಎಕಾನಮಿ ಹೊಂದಿರುವ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇವರು ಆರ್‌ಸಿಬಿ ಜೆರ್ಸಿಯಲ್ಲಿ ಮಿಂಚು ಹರಿಸಿದ ಆಟಗಾರ. ಇವರು ಆಡಿದ 42 ಪಂದ್ಯಗಳಲ್ಲಿ ಕೇವಲ 6.58 ಎಕಾನಮಿ ಹೊಂದಿದ್ದು, ರನ್ ನೀಡುವಲ್ಲಿ ಜಿಪುಣತನವನ್ನು ಪ್ರದರ್ಶಿಸಿದ್ದಾರೆ. ಈಗಲೂ ಈ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ.
ಮುತ್ತಯ್ಯ ಮುರುಳಿಧರನ್
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೂ ಸ್ಪಿನ್ ಬೌಲರ್ ಎದ್ದು ಕಾಣುತ್ತಾರೆ. ಶ್ರೀಲಂಕಾದ ದಿಗ್ಗಜ ಸ್ಪಿನ್ ಬೌಲರ್ ಮುತ್ತಯ್ಯ ಮುರುಳಿಧರನ್ ಆರ್‌ಸಿಬಿ ಪರ ಆಡುವಾಗ ಬಿಗುವಿನ ದಾಳಿ ನಡೆಸಿ ರನ್‌ಗಳಿಗೆ ಕಡಿವಾಣ ಹಾಕಿದ್ದರು. ಇವರು ಆಡಿದ 66 ಪಂದ್ಯಗಳಲ್ಲಿ 6.68ರ ಎಕಾನಮಿಯಲ್ಲಿ ರನ್‌ಗಳನ್ನು ನೀಡಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ನೆದರ್‌ಲ್ಯಾಂಡ್ ರೋಲೋಫ್ ವ್ಯಾನ್ ಡೆರ್ ಮೆರ್ವೆ ಅವರಿಗೆ ಸಲ್ಲುತ್ತದೆ. ಇವರು 6.74 ಎಕಾನಮಿಯಲ್ಲಿ ರನ್ ನೀಡಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ಪರ ಜಯಂತ್ ಯಾದವ್, ಹರ್ಭಜನ್ ಸಿಂಗ್, ಆರ್.ಅಶ್ವಿನ್ ಅವರ ಹೆಸರುಗಳು ಸಹ ಸೇರಿವೆ.
ಐಪಿಎಲ್ ಇತಿಹಾಸದಲ್ಲಿ ಬೆಸ್ಟ್ ಎಕಾನಮಿ ಹೊಂದಿರುವ ಬೌಲರ್ಸ್
ಅನಿಲ್ ಕುಂಬ್ಳೆ (ಆರ್‌ಸಿಬಿ), 42 ಪಂದ್ಯ, 6.58 ಎಕಾನಮಿ
ಮುತ್ತಯ್ಯ ಮುರುಳಿಧರನ್, (ಆರ್‌ಸಿಬಿ), 66 ಪಂದ್ಯ, 6.68 ಎಕಾನಮಿ
ರೋಲೋಫ್ ವ್ಯಾನ್ ಡೆರ್ ಮೆರ್ವೆ (ಡಿಸಿ), 21 ಪಂದ್ಯ, 6.74 ಎಕಾನಮಿ
ಸುನಿಲ್ ನರೈನ್ (ಕೆಕೆಆರ್), 200 ಪಂದ್ಯ, 6.79 ಎಕಾನಮಿ
ಜಯಂತ್ ಯಾದವ್ (ಜಿಟಿ), 20 ಪಂದ್ಯ, 6.85 ಎಕಾನಮಿ
ಡೇಲ್ ಸ್ಟೇನ್ (ಆರ್‌ಸಿಬಿ), 95 ಪಂದ್ಯ, 6.92 ಎಕಾನಮಿ
ಹರ್ಭಜನ್ ಸಿಂಗ್ (ಕೆಕೆಆರ್), 163 ಪಂದ್ಯ, 7.08 ಎಕಾನಮಿ
ಲಸಿತ ಮಲಿಂಗ್ (ಎಂಐ), 122 ಪಂದ್ಯ, 7.14 ಎಕಾನಮಿ
ಆರ್.ಅಶ್ವಿನ್ (ಸಿಎಸ್‌ಕೆ), 221 ಪಂದ್ಯ, 7.20 ಎಕಾನಮಿ
ರಶೀದ್ ಖಾನ್ (ಜಿಟಿ), 149 ಪಂದ್ಯ, 7.21 ಎಕಾನಮಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications