For Quick Alerts
ALLOW NOTIFICATIONS  
For Daily Alerts
 

Zeeshan Ansari: ತಂದೆ ಟೇಲರ್‌, ಮನೆಯಲ್ಲಿ 19 ಸದಸ್ಯರು: ಐಪಿಎಲ್‌ನಲ್ಲಿ ಮಿಂಚುತ್ತಿರುವ ಲಕ್ನೋ ಸ್ಪಿನ್ನರ್

ಐಪಿಎಲ್‌ ಆರಂಭವಾದರೆ ಎಲ್ಲರ ಕಣ್ಣುಗಳು ತಮ್ಮ ತಮ್ಮ ನೆಚ್ಚಿನ ಸ್ಟಾರ್ ಆಟಗಾರರ ಮೇಲೆ ನೆಟ್ಟಿರುತ್ತವೆ. ಇದೇ ವೇಳೆ ಕೆಲವು ಯುವ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಗಮನ ಸೆಳೆದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಹಲವು ಟೀಮ್ ಇಂಡಿಯಾದ ಆಟಗಾರರು ನಿರಾಸೆಯನ್ನು ಅನುಭವಿಸಿದ್ದಾರೆ. ಇನ್ನು ಕೆಲವು ಯುವ ಆಟಗಾರರು ತಮ್ಮ ಸ್ಥಿರ ಪ್ರದರ್ಶನದಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿಯೂ ಹಲವು ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಇದರಲ್ಲಿ ಎದ್ದು ಕಾಣುವ ಆಟಗಾರ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸ್ಪಿನ್ ಬೌಲರ್ ಜೀಶನ್ ಅನ್ಸಾರಿ.

ಜೀಶನ್ ಅನ್ಸಾರಿ ಅವರನ್ನು ಸನ್‌ರೈಸರ್ಸ್‌ ತಂಡ ಸರಿಯಾಗಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಸ್ಪಿನ್ ಬೌಲರ್‌ ಜೀಶನ್ ಅನ್ಸಾರಿ ಸ್ಟಾರ್ ಆಟಗಾರರಿಗೆ ಖೆಡ್ಡಾ ತೋಡಿ ಅಬ್ಬರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಜೀಶನ್ ಅನ್ಸಾರಿ ಕೆಎಲ್ ರಾಹುಲ್‌, ಫಾಫ್‌ ಡುಪ್ಲೇಸಿಸ್, ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡಿದರು. ಈ ಐಪಿಎಲ್‌ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳಲ್ಲಿ ಜೀಶನ್ ಅನ್ಸಾರಿಗೆ ಅಗ್ರ ಸ್ಥಾನ. ಮೈದಾನದಲ್ಲಿ ಇವರು ವಿಕೆಟ್‌ ಬೇಟೆ ನಡೆಸುತ್ತಾ ಇದ್ದಂತೆ ಇವರ ಬಗ್ಗೆ ಹುಡುಕಾಟ ಹೆಚ್ಚಾಗಿದೆ. ಹೀಗಾಗಿ ಅವರ ಬಗ್ಗೆ ಪರಿಚರ ಇಲ್ಲಿದೆ.

From Lucknow s Tailor Shop to IPL Stardom Zeeshan Ansari Shines for Sunrisers Hyderabad

ಜೀಶನ್ ಅನ್ಸಾರಿ ಉತ್ತರ ಪ್ರದೇಶ ಮೂಲದ ಆಟಗಾರ. ಮಧ್ಯಮ ಕುಟುಂಬದಲ್ಲಿ ಬೆಳೆದ ಪ್ರತಿಭೆ. ಇವರ ತಂದೆ ನಯೀಮ್ ಅನ್ಸಾರಿ ಲಕ್ನೋದಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದಾರೆ. ಇವರ ಮನೆಯಲ್ಲಿ ಒಟ್ಟು 19 ಜನ ಸದಸ್ಯರಿದ್ದಾರೆ. ಯುಪಿ ಲೀಗ್‌ನಲ್ಲಿ ಅದ್ಭುತ್ ಪ್ರದರ್ಶನ ನೀಡಿದ್ದರು. ಆದರೂ ಇವರಿಗೆ ರಾಜ್ಯ ತಂಡದ ಪರ ಸೈಯದ್ ಮುಷ್ತಾಕ್‌ ಅಲಿ ಟೂರ್ನಿಯಲ್ಲೂ ಆಡುವ ಅವಕಾಶ ಸಿಗಲಿಲ್ಲ. ಇವರು ವಿಕೆಟ್‌ ಪಡೆಯುವ ಸ್ಪಿನ್ ಬೌಲರ್ ಎಂದು ಪರಿಗಣಿಸಲಾಗುತ್ತಿದೆ.

ಯುಪಿ ಲೀಗ್‌ನಲ್ಲಿ ಕಮಾಲ್‌

ಜೀಶನ್ ಅನ್ಸಾರಿ 2016 ರಲ್ಲಿ ಅಂಡರ್-19 ವಿಶ್ವಕಪ್ ತಂಡದ ಸದಸ್ಯ. ಇವರು ರಿಷಭ್‌ ಪಂತ್, ಇಶಾನ್‌ ಕಿಶನ್‌, ಸರ್ಫರಾಜ್ ಖಾನ್‌, ಅವರೊಂದಿಗೆ ಕಿರಿಯರ ವಿಶ್ವಕಪ್‌ ಆಡಿದ ಅನುಭವಿ. ಇವರು ಉತ್ತರ ಪ್ರದೇಶ ಪರ ಐದು ಫಸ್ಟ್‌ ಕ್ಲಾಸ್ ಮ್ಯಾಚ್ಆಡಿದ್ದು, 17 ವಿಕೆಟ್‌ ಪಡೆದಿದ್ದಾರೆ. ಐಪಿಎಲ್‌ ಮೆಗಾ ಹರಾಜಿನಲ್ಲಿ ಹೈದರಾಬಾದ್ ತಂಡ ಇವರಿಗೆ 40 ಲಕ್ಷ ರೂ. ನೀಡಿ ಖರೀದಿ ಮಾಡಿದೆ. ಇವರು ಯುಪಿ ಲೀಗ್‌ನಲ್ಲಿ 24 ವಿಕೆಟ್‌ಗಳನ್ನು ಪಡೆದು ಸುದ್ದಿಯಲ್ಲಿದ್ದರು.

ಐಪಿಎಲ್‌ ಸಾಧನೆ

ಜೀಶನ್ ಅನ್ಸಾರಿ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರು ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಭರವಸೆಯ ಮೂಡಿಸಿರುವ ಆಟಗಾರ. ಇವರ ಮೇಲೆ ಪ್ಯಾಟ್‌ ಕಮಿನ್ಸ್‌ ಅವರಿಗೆ ಈ ಯುವ ಬೌಲರ್‌ ಮೇಲೆ ಅಪಾರ ನಂಬಿಕೆ ಇದೆ.

Story first published: Monday, April 7, 2025, 21:02 [IST]
Other articles published on Apr 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+