For Quick Alerts
ALLOW NOTIFICATIONS  
For Daily Alerts
 

RCB ಮೇಲೆ ಕಣ್ಣಿಟ್ಟಿದೆ ಜಗತ್ತಿನ ಶ್ರೀಮಂತ ಸ್ಪೋರ್ಟ್ಸ್ ಕ್ಲಬ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ ಗೆದ್ದು ಇತಿಹಾಸ ನಿರ್ಮಿಸಿ ಸುದ್ದಿಯಾಗಿದೆ. ಇದೇ ವೇಳೆ ಆರ್‌ಸಿಬಿ ತಂಡದ ಬಗ್ಗೆ ಮತ್ತೊಂದು ಬಿಗ್ ಅಪ್‌ಡೇಟ್‌ ಹೊರ ಬಂದಿದೆ. ಈ ಸುದ್ದಿ ಬರೀ ಕ್ರಿಕೆಟ್‌ ಅಭಿಮಾನಿಗಳಿಗೆ ಅಷ್ಟೇ ಅಲ್ಲಾ, ಫುಟ್ಬಾಲ್ ಅಭಿಮಾನಿಗಳಿಗೂ ಖುಷಿ ನೀಡಿದೆ.

ಆರ್‌ಸಿಬಿ ತಂಡ ಮಾರಾಟಕ್ಕೆ ಇರುವ ಸುದ್ದಿ ನಿಮಗೆಲ್ಲಾ ತಿಳಿದಿದೆ. ಈ ತಂಡವನ್ನು ಕೊಂಡು ಕೊಳ್ಳಲು ದೇಶ ವಿದೇಶದ ಖ್ಯಾತನಾಮರು ತಮ್ಮ ಹಕ್ಕುಗಳನ್ನು ಮಂಡಿಸುತ್ತಿದ್ದಾರೆ. ಈ ಸಾಲಿಗೆ ಈಗ ಮತ್ತೊಂದು ದೊಡ್ಡ ಹೆಸರು ಸೇರ್ಪಡೆಯಾಗಿದೆ. ಬೆಂಗಳೂರು ತಂಡವನ್ನು ಖರೀದಿಸಲು ಮ್ಯಾಂಚೆಸ್ಟರ್ ಯುನೈಟೆಡ್‌ನ ಸಹ-ಮಾಲೀಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಅವ್ರಾಮ್ ಗ್ಲೇಜರ್ 1.8 ಬಿಲಿಯನ್ ಡಾಲರ್‌ಗಳ ಬೃಹತ್ ಬಿಡ್ ಸಲ್ಲಿಸಿದ್ದಾರೆ. ಈ ಮೂಲಕ ಇವರು ಆರ್‌ಸಿಬಿ ತಂಡವನ್ನು ಖರೀದಿಸುವಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

From Old Trafford to Chinnaswamy

ಆರ್‌ಸಿಬಿ ತಂಡ ನೀಡುತ್ತಿರುವ ಸ್ಥಿರ ಪ್ರದರ್ಶನ ತಂಡದ ಮೌಲ್ಯವನ್ನು ಗಗನದೆತ್ತರಕ್ಕೆ ಕೊಂಡೊಯ್ದಿದೆ. ಅದರಲ್ಲೂ 18ನೇ ಆವೃತ್ತಿಯ ಐಪಿಎಲ್‌ ಚಾಂಪಿಯನ್ ಪಟ್ಟ ಹಾಗೂ ಇತ್ತೀಚಿಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಮೇಲೆ ಇದರ ಮೌಲ್ಯ ವೃದ್ಧಿಸಿದೆ. ಈ ಸಾಲಿನ ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ಮಾರಾಟ ಮಾಡಬಹುದು ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಯುನೈಟೆಡ್ ಸ್ಪಿರಿಟ್ಸ್ ಮೂಲಕ ಡಿಯಾಜಿಯೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿರುವ ಆರ್‌ಸಿಬಿ, ಈ ಬಾರಿ ಬೇರೆ ಫ್ರಾಂಚೈಸಿ ಕೈಗೆ ಹೋಗುವುದು ದಟ್ಟವಾಗಿದೆ.

ಈ ತಂಡವನ್ನು ಖರೀದಿಸಲು ಗ್ಲೇಜರ್ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕ್ರಿಕೆಟ್‌ ಒಲವು

ಗ್ಲೇಜರ್ಸ್ ಕುಟುಂಬಕ್ಕೆ ಕ್ರಿಕೆಟ್‌ ಮೇಲೆ ಪ್ರೀತಿ. ಇವರು ILT20 ಲೀಗ್‌ನಲ್ಲಿ ಡೆಸರ್ಟ್ ವೈಪರ್ಸ್ ತಂಡದ ಮಾಲೀಕತ್ವ ಪಡೆದಿದ್ದರು. ಅಲ್ಲದೆ 2021ರಲ್ಲಿ ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವಾಗಲು ಇವರು ಚಿತ್ತ ನೆಟ್ಟಿದ್ದರು. ಆಗ ಅವರು ರಾಜಸ್ಥಾನ ರಾಯಲ್ಸ್‌ ತಂಡದ ಮೇಲೆ ಕಣ್ಣು ನೆಟ್ಟಿದ್ದರು. ಅಲ್ಲದೆ ಲಕ್ನೋ ಸೂಪರ್ ಜೈಂಟ್ಸ್‌ಗಾಗಿ 940 ಮಿಲಿಯನ್ ಡಾಲರ್‌ ಪಾವತಿಸಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲವುಗಳನ್ನು ನೋಡಿದಾಗ ಗ್ಲೇಜರ್ಸ್ ಆರ್‌ಸಿಬಿ ತಂಡವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಬೇಕಾದ ಸಿದ್ಧತೆಗಳನ್ನು ತೆರೆಯ ಮರೆಯಲ್ಲಿ ನಡೆಸಿದೆ. ಈ ಸಂಭಾವ್ಯ ಒಪ್ಪಂದವು ಐಪಿಎಲ್‌ನ ಸ್ವರೂಪವನ್ನೇ ಬದಲಿಸಬಲ್ಲದು. ಅಲ್ಲದೆ ಆರ್‌ಸಿಬಿ ತಂಡದ ವ್ಯಾಪ್ತಿ ಹೆಚ್ಚಾಗುತ್ತದೆ.

Story first published: Monday, February 9, 2026, 8:05 [IST]
Other articles published on Feb 9, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+