For Quick Alerts
ALLOW NOTIFICATIONS  
For Daily Alerts
 

ಅಂದು ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಜೈಲು: ಇಂದು ಅಂಡರ್ 14 ತಂಡಕ್ಕೆ ಕೋಚ್

2013ರ ಐಪಿಎಲ್‌ ಕ್ರಿಕೆಟ್‌ ಅಭಿಮಾನಿಗಳಲ್ಲಿ ಮಾಸದೆ ಉಳಿದಿರುವ ಆವೃತ್ತಿ. ಈ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ತಳುಕು ಹಾಕಿಕೊಂಡಿತ್ತು. ಇದು ಐಪಿಎಲ್‌ ಹಾಗೂ ಭಾರತೀ ಕ್ರಿಕೆಟ್‌ಗೆ ಕಪ್ಪು ಚುಕ್ಕೆ ಇದ್ದಂತಾಗಿದೆ. ಸ್ಟಾಟ್ ಫಿಕ್ಸಿಂಗ್‌ನಲ್ಲಿ ಮೂವರು ಆಟಗಾರರ ಕ್ರಿಕೆಟ್‌ ಜೀವಕ್ಕೆ ಫುಲ್ ಸ್ಟಾಪ್ ಇಟ್ಟಿತ್ತು. ಈಗ ಈ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಶಿಕ್ಷೆಗೆ ಒಳಗಾಗಿದ್ದ ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಸ್ಪಿನ್ ಬೌಲರ್ ಅಂಕಿತ್ ಚವಾಣ್‌ ತಮ್ಮ ಎರಡನೇ ಇನಿಂಗ್ಸ್‌ ಆರಂಭಿಸಲು ಸಜ್ಜಾಗಿದ್ದಾರೆ. ಹಾಗಿದ್ದರೆ ಇವರು ಮಾಡುತ್ತಿರುವ ಕೆಲಸ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಐಪಿಎಲ್ ಆರಂಭದ ಕೆಲವು ವರ್ಷ ಸ್ಪಿನ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ಅಂಕಿತ್ ಚವಾಣ್ ಈಗ ಮತ್ತೆ ಕ್ರಿಕೆಟ್‌ ರಂಗಕ್ಕೆ ಕಾಲಿಟ್ಟಿದ್ದಾರೆ. ಈಗ ಇವರು ಕೋಚ್‌ ಹುದ್ದೆಯನ್ನು ಅಲಂಕರಿಸಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಚವಾಣ್ ಅವರನ್ನು ತನ್ನ ಅಂಡರ್ -14 ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

From Spot-Fixing Scandal to Under-14 Coach Ankeet Chavan s Second Innings in Cricket

ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಸಿಕ್ಕು ಹಾಕಿಕೊಂಡ ಅಂಕಿತ್ ಅವರ ವಿರುದ್ಧ ಬಿಸಿಸಿಐ 2013ರಲ್ಲಿ ಜೀವಮಾನವಿಡೀ ನಿಷೇಧ ಹೇರಿತ್ತು. ಆ ಬಳಿಕ 2021ರಲ್ಲಿ ಈ ನಿಷೇಧವನ್ನು 7 ವರ್ಷಗಳಿಗೆ ಇಳಿಸಲಾಯಿತು. ಬಳಿಕ ಇವರು ಕ್ಲಬ್‌ ಕ್ರಿಕೆಟ್‌ಗೆ ಮರಳಿ ಕೋಚಿಂಗ್ ಲೆವೆಲ್-1 ಕೋಚಿಂಗ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೆ. ಈಗ ಎಂಸಿಎ ಇವರ ಅನುಭವಕ್ಕೆ ಮಣೆ ಹಾಕಿ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಅಲ್ಲದೆ ಮುಂಬೈ ಅಂಡರ್ 14 ತಂಡದ ಕೋಚ್ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಅಂಕಿತ್ ಹೇಳಿದ್ದೇನು?

ಇದು ನನ್ನ ಜೀವನದ ಎರಡನೇ ಇನಿಂಗ್ಸ್‌. ಈ ಜವಾಬ್ದಾರಿಯನ್ನು ನಿಭಾಯಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟ ಎಂಸಿಎಗೆ ನಾನು ಕೃತಜ್ಞ. ಕೋಚಿಂಗ್ ನನ್ನ ಹಾರ್ಟ್‌ಗೆ ಹತ್ತಿರವಾಗಿದೆ. ಅಲ್ಲದೆ 14 ವರ್ಷದೊಳಗಿನ ಪ್ರತಿಭೆಗಳಿಗೆ ಅನುಭವ ಧಾರೆ ಎರೆಯಲಿದ್ದೇನೆ ಎಂದು ಅಂಕಿತ್ ಚವಾಣ್ 'ಇಂಡಿಯನ್ ಎಕ್ಸ್‌ಪ್ರೆಸ್' ಗೆ ತಿಳಿಸಿದ್ದಾರೆ.

From Spot-Fixing Scandal to Under-14 Coach Ankeet Chavan s Second Innings in Cricket

ಮುಂಬೈ ಕ್ರಿಕೆಟ್‌ ಆಸೋಸಿಯೇಷನ್‌ ಮುಂದಿನ ದೇಶೀಯ ಋತುವಿಗೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ. ಈ ವೇಳೆ ರಣಜಿ ಟ್ರೋಫಿ ತಂಡದ ಕೋಚ್ ಓಂಕಾರ್ ಸಾಲ್ವಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಇವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಈ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಭಾರತದ ಮಾಜಿ ಆಟಗಾರ ಸಂದೀಪ್ ಪಾಟೀಲ್ ಅವರನ್ನು ಮತ್ತೆ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ.

Story first published: Thursday, July 3, 2025, 15:05 [IST]
Other articles published on Jul 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+