ಧೋನಿ ಸಾಮರ್ಥ್ಯ ಪ್ರಶ್ನಿಸಿದ ಅಜಿತ್ ಗೆ ಟ್ವೀಟ್ ಗೂಸಾ!
ಬೆಂಗಳೂರು, ಅ.10: ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ ಮಾಜಿ ವೇಗಿ ಅಜಿತ್ ಅಗರ್ಕರ್ ಅವರ ವಿರುದ್ಧ ಫ್ಯಾನ್ಸ್ ತಿರುಗಿಬಿದ್ದಿದ್ದಾರೆ. ಏಕದಿನ ಕ್ರಿಕೆಟ್ ತಂಡಕ್ಕೆ ಧೋನಿ ನಾಯಕರಾಗಿ, ಆಟಗಾರರಾಗಿ ಉಳಿಯಬೇಕೆ? ಎಂದು ಅಜಿತ್ ಪ್ರಶ್ನಿಸಿದ್ದರು.
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಧೋನಿ ನಾಯಕತ್ವದ ಟಿ20 ತಂಡ 2-0 ಅಂತರದಲ್ಲಿ ಟ್ವೆಂಟಿ20 ಸರಣಿಯನ್ನು ಕಳೆದುಕೊಂಡ ಬೆನ್ನಲ್ಲೇ ಅಜಿತ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಎರಡು ಟಿ 20 ಪಂದ್ಯಗಳಲ್ಲಿ 34 ವರ್ಷ ವಯಸ್ಸಿನ ಧೋನಿ ಅವರು 20 ಹಾಗೂ 5 ರನ್ ಗಳಿಸಿದ್ದರು. [ಭಾರತ -ದಕ್ಷಿಣ ಆಫ್ರಿಕಾ ಸರಣಿ ಸಂಪೂರ್ಣ ಗೈಡ್]
ಈ ಬಗ್ಗೆ ಮಾತನಾಡಿದ ಅಜಿತ್, ಎಂಎಸ್ ಧೋನಿ ಅವರು ನಾಯಕನಾಗಿ, ಆಟಗಾರನಾಗಿ ಏಕದಿನ ಕ್ರಿಕೆಟ್ ಗೆ ಅಗತ್ಯವಿದೆಯೇ? ಎಂಬುದರ ಬಗ್ಗೆ ಆಯ್ಕೆದಾರರು ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭದ ಬಂದಿದೆ ಪ್ರತಿಕ್ರಿಯಿಸಿದ್ದಾರೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.[ಸೋಲಿಗಿಂತ ಪ್ರೇಕ್ಷಕರ ವರ್ತನೆಗೆ ಕಟು ಟೀಕೆ]
ಧೋನಿ ಬಗ್ಗೆ ಅಗರ್ಕರ್ ನೀಡಿದ ಹೇಳಿಕೆ ಹರಡುತ್ತಿದ್ದಂತೆ ಧೋನಿ ಅವರ ಅಭಿಮಾನಿಗಳು ರೊಚ್ಚಿಗೆದ್ದು ಸಾಮಾಜಿಕ ಜಾಲಾ ತಾಣಗಳಲ್ಲಿ ಅಜಿತ್ ಅಗರ್ಕರ್ ಅವರನ್ನು ಕಿಚಾಯಿಸುತ್ತಿದ್ದಾರೆ. ಅಜಿತ್ ಅವರಿಗೆ ತಲೆ ಕೆಟ್ಟಿರಬೇಕು, ಇದೆಲ್ಲ ಪ್ರಚಾರ ಪಡೆಯುವ ತಂತ್ರ ಎಂದು ಟೀಕಿಸಿದ್ದಾರೆ. [ಕ್ಯಾಪ್ಟನ್ ಧೋನಿ ವಿಶ್ವದಾಖಲೆ]
ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿ ಅಕ್ಟೋಬರ್ 11 ರಿಂದ ಕಾನ್ಪುರದಲ್ಲಿ ಆರಂಭಗೊಳ್ಳಲಿದೆ. ಸದ್ಯಕ್ಕೆ ಅಜಿತ್ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳನ್ನು ಓದಿ...

ಅಜಿತ್ ಹೇಳಿಕೆಗೆ ಪರ-ವಿರೋಧ ಟ್ವೀಟ್ಸ್
ಧೋನಿ ಬಗ್ಗೆ ಅಗರ್ಕರ್ ನೀಡಿದ ಹೇಳಿಕೆ ಹರಡುತ್ತಿದ್ದಂತೆ ಧೋನಿ ಅವರ ಅಭಿಮಾನಿಗಳು ರೊಚ್ಚಿಗೆದ್ದು ಸಾಮಾಜಿಕ ಜಾಲಾ ತಾಣಗಳಲ್ಲಿ ಅಜಿತ್ ಅಗರ್ಕರ್ ಅವರನ್ನು ಕಿಚಾಯಿಸುತ್ತಿದ್ದಾರೆ. ಅಜಿತ್ ಅವರಿಗೆ ತಲೆ ಕೆಟ್ಟಿರಬೇಕು, ಇದೆಲ್ಲ ಪ್ರಚಾರ ಪಡೆಯುವ ತಂತ್ರ ಎಂದು ಟೀಕಿಸಿದ್ದಾರೆ.
ಅಜಿತ್ ಗೆ ಪ್ರಶ್ನಿಸುವ ಅರ್ಹತೆ, ಸಾಮರ್ಥ್ಯವಿದೆಯೆ?
ಅಜಿತ್ ಗೆ ಪ್ರಶ್ನಿಸುವ ಅರ್ಹತೆ, ಸಾಮರ್ಥ್ಯವಿದೆ, ಅಜಿತ್ ಮಾತ್ರ ಸತತ 7 ಡಕ್ ಹೊಡೆಯಲು ಸಾಧ್ಯ, ಮರೆಯಬೇಡಿ ಎಂದು ಕಿಚಾಯಿಸಿದ ಫ್ಯಾನ್ಸ್.
ಧೋನಿ ಪ್ರಶ್ನಿಸಿದ ಅಜಿತ್ ಮುಖವಾಡ ಕಳಚಿದಾಗ...
ಧೋನಿ ಪ್ರಶ್ನಿಸಿದ ಅಜಿತ್ ಮುಖವಾಡ ಕಳಚಿದಾಗ...ಕಂಡು ಬಂದಿದ್ದೇನು? ನೀವೇ ನೋಡಿ(ಚಿತ್ರದಲ್ಲಿ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್)
ಅಜಿತ್ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ
ಅಜಿತ್ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಅಜಿತ್ ಲಾರ್ಡ್ಸ್ ನಲ್ಲಿ ಶತಕ, ಏಕದಿನ ಕ್ರಿಕೆಟ್ ನಲ್ಲಿ ತ್ವರಿತವಾಗಿ ಅರ್ಧಶತಕ ಬಾರಿಸಿದ ಆಟಗಾರ.
ಲಯ ಕಂಡುಕೊಳ್ಳದ ಧೋನಿಗೇಕೆ ಮನ್ನಣೆ
ಲಯ ಕಂಡುಕೊಳ್ಳದ ಧೋನಿಗೇಕೆ ಮನ್ನಣೆ? ಅಜಿತ್ ಅವರ ಪ್ರಶ್ನೆ ಸರಿಯಾಗಿದೆ.
ಅಜಿತ್ ನಿಮ್ಮ ತಪ್ಪಿಗೆ ಕ್ಷಮೆಯಾಚಿಸಿ
ಅಜಿತ್ ನಿಮ್ಮ ತಪ್ಪಿಗೆ ಕ್ಷಮೆಯಾಚಿಸಿ, ಸುಮ್ಮನೆ ಜನರಿಂದ ಕಿಚಾಯಿಸಿಕೊಳ್ಳಬೇಡಿ.
ಪ್ರಚಾರ ಬೇಕಿದ್ದರೆ ಕೇಳಬೇಕಿತ್ತು ಮಿ. ಅಜಿತ್
ಪ್ರಚಾರ ಬೇಕಿದ್ದರೆ ಕೇಳಬೇಕಿತ್ತು ಮಿ. ಅಜಿತ್ ಅಗರ್ಕರ್, ಅದಕ್ಕಾಗಿ ಧೋನಿ ಹೆಸರು ಏಕೆ ಬೇಕಿತ್ತು?
ಯೋಗರಾಜ್ ಸಿಂಗ್ ಸ್ಥಾನ ತುಂಬಬಲ್ಲ ಅಜಿತ್
ಯೋಗರಾಜ್ ಸಿಂಗ್ ಸ್ಥಾನ ತುಂಬಬಲ್ಲ ಅಜಿತ್, ಸತತ 7 ಡಕ್ ಹೊಡೆದಿದ್ದು ನೆನಪಿಲ್ಲವೇ?
ಧೋನಿ ಬ್ಯಾಟಿಂಗ್ ಬಗ್ಗೆ ನಿಮಗೇನು ಗೊತ್ತು?
ಧೋನಿ ಬ್ಯಾಟಿಂಗ್ ಬಗ್ಗೆ ನಿಮಗೇನು ಗೊತ್ತು? ಬಾಂಗ್ಲಾ ಸರಣಿಯಲ್ಲಿ ನಂ.4ನೇ ಕ್ರಮಾಂಕದಲ್ಲಿ ಬಂದು 47 ಹಾಗೂ 69 ರನ್ ಗಳಿಸಿದ್ದಾರೆ. ಮೊದಲು ವಿಷಯ ತಿಳಿದುಕೊಳ್ಳಿ, ನಂತರ ಮಾತನಾಡಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications