ಟ್ವಿಟ್ಟರ್ ನಲ್ಲಿ ಧೋನಿ ಹುಟ್ಟುಹಬ್ಬಕ್ಕೆ ಕೌಂಟ್ ಡೌನ್
ಬೆಂಗಳೂರು, ಜು.01: ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲೆಸಿದರು ಎಂಬಂತೆ ಎಂಎಸ್ ಧೋನಿ ಹುಟ್ಟುಹಬ್ಬಕ್ಕೂ ಒಂದು ವಾರ ಮುಂಚಿತವಾಗಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಶುರು ಮಾಡಲಾಗಿದೆ. ಜೂ.30ರಿಂದ ಆರಂಭವಾದ ಈ ಟ್ರೆಂಡಿಂಗ್ ನಲ್ಲಿ HBD to MSD in 7 days ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಲಾಗಿದೆ.
ಎಂಎಸ್ ಧೋನಿ ಅವರ 34ನೇ ಹುಟ್ಟುಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಅಭಿಮಾನಿಗಳು ಧೋನಿಗೆ ಬಹು ಪರಾಕ್ ಎಂದು ಹೇಳಲು ಶುರು ಮಾಡಿದ್ದಾರೆ. ಮಂಗಳವಾರ ಜುಲೈ 7ರಂದು ಧೋನಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಈ ಬಾರಿ ಪತ್ನಿ ಸಾಕ್ಷಿ ಹಾಗೂ ಪುತ್ರಿ ಝೀವಾ ಜೊತೆಯಲ್ಲಿ ಸಂಭ್ರಮದಿಂದ ಕಾಲ ಕಳೆಯಲಿದ್ದಾರೆ. ತನ್ನೂರಿನಲ್ಲಿರುವ ಮನೆ ದೇವತೆ ಮಂದಿರಕ್ಕೆ ತೆರಳು ಯೋಜಿಸಿದ್ದಾರೆ.
ಜಿಂಬಾಬ್ವೆ ಪ್ರವಾಸಕ್ಕೆ ತೆರಳುವ ಭಾರತ ತಂಡಕ್ಕೆ ಧೋನಿ ಅವರನ್ನು ಆಯ್ಕೆ ಮಾಡದೆ ಬಿಸಿಸಿಐ ಅವರಿಗೆ ವಿಶ್ರಾಂತಿ ನೀಡಿದೆ. ಅಜಿಂಕ್ಯ ರಹಾನೆ ಅವರು ಟೀಂ ಇಂಡಿಯಾವನ್ನು 3 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳಲ್ಲಿ ಮುನ್ನಡೆಸಲಿದ್ದಾರೆ.

ಧೋನಿಗೆ ಬಿಸಿಸಿಐನಿಂದ ವಿಶ್ರಾಂತಿ ಸಿಕ್ಕಿದೆ
ಜಿಂಬಾಬ್ವೆ ಪ್ರವಾಸಕ್ಕೆ ತೆರಳುವ ಭಾರತ ತಂಡಕ್ಕೆ ಧೋನಿ ಅವರನ್ನು ಆಯ್ಕೆ ಮಾಡದೆ ಬಿಸಿಸಿಐ ಅವರಿಗೆ ವಿಶ್ರಾಂತಿ ನೀಡಿದೆ. ಅಜಿಂಕ್ಯ ರಹಾನೆ ಅವರು ಟೀಂ ಇಂಡಿಯಾವನ್ನು 3 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳಲ್ಲಿ ಮುನ್ನಡೆಸಲಿದ್ದಾರೆ.
ವಿಶ್ವದ ಶ್ರೇಷ್ಠ ನಾಯಕ ಧೋನಿ
ವಿಶ್ವದ ಶ್ರೇಷ್ಠ ನಾಯಕ ಧೋನಿ ಅವರ ಹುಟ್ಟುಹಬ್ಬಕ್ಕೆ 7 ದಿನ ಬಾಕಿ
ಹುಟ್ಟುಹಬ್ಬಕ್ಕಾಗಿ ನಾನು ಕಾಯುತ್ತಿದ್ದೇನೆ
ಹುಟ್ಟುಹಬ್ಬಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಅಭಿಮಾನಿಗಳಿಂದ ಟ್ವೀಟ್.
ಗಂಟೆ ನಿಮಿಷಗಳ ಲೆಕ್ಕಾಚಾರದ ಕೌಂಟ್ ಡೌನ್
ಧೋನಿ ಹುಟ್ಟುಹಬ್ಬಕ್ಕೆ ಗಂಟೆ ನಿಮಿಷಗಳ ಲೆಕ್ಕಾಚಾರದ ಕೌಂಟ್ ಡೌನ್ ಕೂಡಾ ಹಾಕಲಾಗುತ್ತಿದೆ.
ನಾನಂತೂ ಕಾತುರದಿಂದ ಕಾದಿದ್ದೇನೆ
ನಾನಂತೂ ಕಾತುರದಿಂದ ಕಾದಿದ್ದೇನೆ, ಸೂಪರ್ ಹೀಗೆ ಟ್ರೆಂಡಿಂಗ್ ಆಗಲಿ.
ನನ್ನ ಬರ್ಥ್ ಡೇಗೂ ನಾನು ಹೀಗೆ ಕಾದಿದ್ದಿಲ್ಲ
ನನ್ನ ಬರ್ಥ್ ಡೇಗೂ ನಾನು ಹೀಗೆ ಕಾದಿದ್ದಿಲ್ಲ ಎಂದು ಅಭಿಮಾನಿಗಳಿಂದ ಪ್ರತಿಕ್ರಿಯೆ.
ನಂ.7 ಮಹತ್ವ ಜಗತ್ತಿಗೆ ಸಾರಿದ ಧೋನಿ
07/07, ಲಕ್ಕಿ ನಂಬರ್ 7 ಧೋನಿ ಜರ್ಸಿ ನಂಬರ್ 7 ಸೂಪರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications