Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಲಮೋ ಮೀಟ್ ಮಾಡಿರ್ಬೇಕು ಅದಕ್ಕೆ ಜಡೇಜ ಡ್ರಾಪ್ಡ್'

ಬೆಂಗಳೂರು, ಜೂ.24: ಟೀಂ ಇಂಡಿಯಾದ ಔಟ್ ಆಫ್ ಫಾರ್ಮ್ ರವೀಂದ್ರ ಜಡೇಜ ಅವರನ್ನು ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯವಾಡುತ್ತಿರುವ ತಂಡದಿಂದ ಕೈ ಬಿಟ್ಟಿರುವುದು ಈಗ ಹಾಸ್ಯಾಸ್ಪದ ವಿಷಯವಾಗಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಜಡೇಜ ಬಗ್ಗೆ ಟ್ವೀಟ್ ಗಳು ಹರಿದಾಡುತ್ತಿವೆ.

ಅತಿಥೇಯ ಬಾಂಗ್ಲಾದೇಶ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋತು ಸರಣಿ ಬಿಟ್ಟುಕೊಟ್ಟಿರುವ ಭಾರತ ಷೇರ್ ಇ ಬಾಂಗ್ಲಾ ಮೈದಾನದಲ್ಲಿ ಇಂದು ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಉಮೇಶ್ ಯಾದವ್ ಹಾಗೂ 26 ವರ್ಷದ ಜಡೇಜ ಬದಲಿಗೆ ಸ್ಟುವರ್ಟ್ ಬಿನ್ನಿಗೆ ಸ್ಥಾನ ಕಲ್ಪಿಸಲಾಗಿದೆ.

ಧೋನಿ ತನ್ನ ನೆಚ್ಚಿನ ಗೆಳೆಯ ರವೀಂದ್ರ ಜಡೇಜರನ್ನು ಕೈಬಿಟ್ಟಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅಚ್ಚರಿ ವ್ಯಕ್ತವಾಗಿದೆ. ಬಹುಶಃ ಲಲಿತ್ ಮೋದಿ ಅವರನ್ನು ಸಂಪರ್ಕಿಸಬೇಕು ಅದಕ್ಕೆ ಸ್ಥಾನ ಕಳೆದುಕೊಂಡಿದ್ದಾರೆ ಎಂಬ ಹಾಸ್ಯದ ಚಟಾಕಿಯನ್ನು ಹಾರಿಸಲಾಗಿದೆ. ಜಡೇಜ ಬದಲಿಗೆ ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್ ರನ್ನು ಆಡಿಸಲಾಗುತ್ತಿದೆ.

ಜಡೇಜ ಕಳಪೆ ಫಾರ್ಮ್ ಮುಂದುವರಿಕೆ

ಜಡೇಜ ಕಳಪೆ ಫಾರ್ಮ್ ಮುಂದುವರಿಕೆ

ಬಾಂಗ್ಲಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 32 ಹಾಗು 19 ರನ್ ಗಳಿಸಿದ ಜಡೇಜ ಅವರು ಎರಡು ಪಂದ್ಯಗಳಿಂದ ಒಂದು ವಿಕೆಟ್ ಪಡೆದಿಲ್ಲ. 121 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿರುವ ಜಡೇಜ 1,804 ರನ್ ಗಳಿಸಿದ್ದು, 144 ವಿಕೆಟ್ ಪಡೆದುಕೊಂಡಿದ್ದಾರೆ.

ಲಲಿತ್ ಮೋದಿ ಭೇಟೀ ಮಾಡಿದ್ರು ಅನಿಸುತ್ತೆ

ಲಲಿತ್ ಮೋದಿ ಭೇಟೀ ಮಾಡಿದ್ರು ಅನಿಸುತ್ತೆ ಅದಕ್ಕೆ ತಂಡದಿಂದ ಕಿತ್ತು ಹಾಕಲಾಗಿದೆ.

ಒಳ್ಳೆದಾಯ್ತು ಬಿಡಿ

ಒಳ್ಳೆದಾಯ್ತು ಬಿಡಿ ಈಗ ಹೇರ್ ಸ್ಟೈಲ್, ಗಡ್ಡದ ವಿನ್ಯಾಸ ಸರಿ ಪಡಿಸಿಕೊಳ್ಳಲು ಜಡೇಜಗೆ ಟೈಂ ಸಿಕ್ಕಿತು.

ಜಡೇಜ ಬೇರೆ ವೃತ್ತಿಗಳು ಕಾದಿವೆ

ಜಡೇಜ ಬೇರೆ ವೃತ್ತಿಗಳು ಕಾದಿವೆ, ರವೀಂದ್ರ ಜಡೇಜ ಚಿಂತೆ ಮಾಡ್ಬೇಡಿ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+