ಹ್ಯೂಸ್ ಗೆ ಟ್ವಿಟ್ಟರ್ ನಲ್ಲಿ ಗೌರವ ಸೂಚಿಸಿದ ಮೋದಿ, ಸಚಿನ್
ಮಾಕ್ಸ್ ವಿಲ್ಲೆ, ಡಿ. 3: ವಿವಿಧ ದೇಶದ ಪ್ರಧಾನಿಗಳು, ಹೆಸರಾಂತ ಕ್ರಿಕೆಟಿಗರು, ಅಭಿಮಾನಿಗಳು ಅಕಾಲಿಕ ಮರಣ ಹೊಂದಿದ ಕ್ರಿಕೆಟ್ ಆಟಗಾರ ಫಿಲಿಪ್ ಹ್ಯೂಸ್ ಗೆ ಬುಧವಾರ ಅಂತಿಮ ನಮನ ಸಲ್ಲಿಸಿದರು.
ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ಲಕ್ಷಾಂತರ ಜನ ಗೌರವ ಸೂಚಿಸಿದ್ದಾರೆ. ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್, 'ಕ್ರಿಕೆಟಿಗೆ ಇದೊಂದು ಕೆಟ್ಟ ದಿನ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 'ಹ್ಯೂಸ್ ನೀವು ಪ್ರಪಂಚದ ಜನರ ಮನಸ್ಸಿನಲ್ಲಿ ಚಿರಸ್ಥಾಯಿ' ಎಂದು ಟ್ವೀಟ್ ಮಾಡಿದ್ದಾರೆ. ಫಿಲಿಪ್ ಹ್ಯೂಸ್ ಅಂತಿಮ ಯಾತ್ರೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು, ಭಾರತ ತಂಡದ ಆಟಗಾರರು ಪಾಲ್ಗೊಂಡಿದ್ದರು. [ಚಿತ್ರಗಳಲ್ಲಿ: ಫಿಲ್ ಹ್ಯೂಸ್ ಗೆ ಅಂತಿಮ ವಿದಾಯ]

ಶೇಫಿಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ತಲೆಗೆ ಪೆಟ್ಟು ತಿಂದು ಗಾಯಗೊಂಡಿದ್ದ ಫಿಲಿಫ್ ಹ್ಯೂಸ್ ಅವರು ನ.27ರಂದು ಸಿಡ್ನಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮಾರಕ ಬೌನ್ಸರ್ ಅವರ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು. ಬುಧವಾರ ನಡೆದ ಅಂತ್ಯಕ್ರಿಯೆ ಸಮಾರಂಭವನ್ನು ಆಸ್ಟ್ರೇಲಿಯಾ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications