ಸೋಲಿಗೆ ಕುಂಟು ನೆಪ ಕೊಟ್ಟ ರವಿ ಶಾಸ್ತ್ರಿ ವಿರುದ್ಧ ಫ್ಯಾನ್ಸ್ ಗರಂ
ಬೆಂಗಳೂರು, ಅ.27: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಸರಣಿ ಸೋಲಿಗೆ ಕುಂಟು ನೆಪ ಹುಡುಕುತ್ತಿರುವ ತಂಡದ ನಿರ್ದೇಶಕ ರವಿಶಾಸ್ತ್ರಿ ವಿರುದ್ಧ ಅವರ ಮಾಜಿ ಕ್ರಿಕೆಟರ್ಸ್ ಹಾಗೂ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಮುಂಬೈಯಲ್ಲಿ ಕೊನೆಯ ಏಕದಿನ ಪಂದ್ಯ ಸೋಲಲು ಪಿಚ್ ನ ಕ್ಯೂರೇಟರ್ ಸುಧೀರ್ ನಾಯಕ್ ಕಾರಣ ಎಂದಿರುವ ಶಾಸ್ತ್ರಿ ಅವರನ್ನು ಟ್ವಿಟ್ಟರ್ ನ ತರಾಟೆಗೆ ತೆಗೆದುಕೊಳ್ಳಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಭಾನುವಾರ (ಅಕ್ಟೋಬರ್ 25) ದ ಕಳಪೆ ಆಟವನ್ನು ಮರೆ ಮಾಚಿರುವ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಅವರು ವಾಂಖೆಡೆ ಸ್ಟೇಡಿಯಂನ ಪಿಚ್ ನದ್ದೇ ಪ್ರಾಬ್ಲಂ ಎಂದಿದ್ದಾರೆ. ಶಾಸ್ತ್ರಿ ಹಾಡಿದ ರಾಗಕ್ಕೆ ಕೋಚ್ ಭರತ್ ಅರುಣ್ ದನಿಗೂಡಿಸಿದ್ದಾರೆ. ['ಸೆಂಚುರಿಯನ್' ಭುವನೇಶ್ವರ್ ಕಾಲೆಳೆದ ಟ್ವಿಟ್ಟರ್]
ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 438/4 ಸ್ಕೋರ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಟೀಂ ಇಂಡಿಯಾ 36 ಓವರ್ ಗಳಲ್ಲಿ 224 ಸ್ಕೋರಿಗೆ ಆಲೌಟ್ ಆಗಿ ಸರಣಿಯನ್ನು 2-3ರಲ್ಲಿ ಕಳೆದುಕೊಂಡಿದೆ.
ಭಾರತ ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಪಿಚ್ ಸರಿಯಾಗಿ ವರ್ತಿಸಿಲ್ಲ ಎಂದು ಪಿಚ್ ಕ್ಯೂರೇಟರ್ ಸುಧೀರ್ ನಾಯರ್ ಅವರನ್ನು ರವಿಶಾಸ್ತ್ರಿ ಟೀಕಿಸಿದ್ದಾರೆ. ಇಷ್ಟೇ ಆಲ್ಲದೆ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಗೆ ಈ ಬಗ್ಗೆ ಲಿಖಿತ ದೂರು ನೀಡಿದ್ದಾರೆ. [ಜಯದ ಜೊತೆಗೆ ಕೊಹ್ಲಿ ದಾಖಲೆ ಮುರಿದ ಆಮ್ಲಾ]
ಸುಧೀರ್ ಅವರನ್ನು ನಿಂದಿಸಿರುವ ರವಿಶಾಸ್ತ್ರಿಗೆ ತಲೆಕೆಟ್ಟಿರಬೇಕು, ಅವರು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಶಾಸ್ತ್ರಿ ವಿರುಧ ಬಂದಿರುವ ಟ್ವೀಟ್ಸ್ ಇಲ್ಲಿದೆ ನೋಡಿ...

ರವಿಶಾಸ್ತ್ರಿ ಹೇಳಿಕೆ ದುರಾದೃಷ್ಟಕರ ಎಂದ ಎಂಸಿಎ
ರವಿಶಾಸ್ತ್ರಿ ಹೇಳಿಕೆ ದುರಾದೃಷ್ಟಕರ ಪಂದ್ಯದ ನಂತರ ಇಬ್ಬರ ನಡುವೆ ಬಿಸಿ ಬಿಸಿ ಮಾತುಕತೆ ನಡೆದಿರುವ ವಿಷಯವೂ ತಿಳಿದು ಬಂದಿದೆ ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಎಂಸಿಎ ಜಂಟಿ ಕಾರ್ಯದರ್ಶಿ ಉನ್ಮೇಶ್ ಖಾನ್ವಿಲ್ಕರ್ ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ್ದಾರೆ.
ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಿ
ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಿ, ದಕ್ಷಿಣ ಆಫ್ರಿಕಾ ತಂಡ ಟಿ20 ಹಾಗೂ ಏಕದಿನ ಕ್ರಿಕೆಟ್ ನಲ್ಲಿ ನಮ್ಮ ತಂಡಕ್ಕಿಂತ ಚೆನ್ನಾಗಿ ಆಡಿದ್ದನ್ನು ಒಪ್ಪಿಕೊಳ್ಳಿ.
ಇದೊಳ್ಳೆ ತಮಾಷೆ ಹೇಳಿಕೆ ಎಂದ ಟ್ವೀಟ್
ಸೋಲಿಗೆ ಕ್ಯೂರೇಟರ್ ನಿಂದಿಸುವುದೂ ಒಂದೇ, ಕೊಹ್ಲಿ ಆಡಲಿಲ್ಲ ಎಂದರೆ ಅನುಷ್ಕಾಗೆ ಬೈಯುವುದೂ ಒಂದೆ.
ರವಿಶಾಸ್ತ್ರಿ ರಾಜೀನಾಮೆ ನೀಡಿ ಮನೆಗೆ ಹೋಗಲಿ
ರವಿಶಾಸ್ತ್ರಿ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಕಿಡಿಕಾರಿದ ಫ್ಯಾನ್ಸ್.
ರವಿಶಾಸ್ತ್ರಿ, ಗವಾಸ್ಕಾರ್ ಇಬ್ಬರು ವೇಸ್ಟ್
ರವಿಶಾಸ್ತ್ರಿ, ಗವಾಸ್ಕಾರ್ ಇಬ್ಬರು ವೇಸ್ಟ್, ಆಡುವಾಗ ಇಬ್ಬರೂ ನಮ್ಮ ಹೀರೋಗಳಾಗಿದ್ರು ಈಗ ಬಿಸಿಸಿಐ ದಾಸರಾಗಿದ್ದಾರೆ.
ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಪ್ರತಿಕ್ರಿಯೆ
ಟೀಂ ಇಂಡಿಯಾ ಸರಿಯಾಗಿ ಆಡಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗದೆ ಖಿನ್ನತೆಯಿಂದ ಈ ರೀತಿ ಶಾಸ್ತ್ರಿ ಅವರು ಹೇಳುವುದು ಸರಿಯಲ್ಲ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.
ಸಂಜಯ್ ಮಂಜ್ರೇಕರ್ ಟ್ವೀಟ್
ಸಂಜಯ್ ಮಂಜ್ರೇಕರ್ ಟ್ವೀಟ್ ಮಾಡಿ, ಹಿರಿಯ ಸಿಬ್ಬಂದಿ ಸುಧೀರ್ ನಾಯಕ್ ಅವರಿಗೆ ಅಗೌರವ ತೋರಿಸಿರುವುದು ಸರಿ ಇಲ್ಲ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications