For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ಗೆದ್ದ ತಂಡದ ಆಲ್‌ರೌಂಡರ್‌ ಶಿವಂ ದುಬೆ ರೈಲಿನಲ್ಲಿ ಪ್ರಯಾಣ

ಭಾರತದಲ್ಲಿ ಕ್ರಿಕೆಟ್‌ ಆಟಗಾರರು ಎಲ್ಲಿ ಹೋದರೂ ಸಹ ಅಭಿಮಾನಿಗಳನ್ನು ಅವರನ್ನು ಮುತ್ತಿಕೊಳ್ಳುತ್ತಾರೆ. ಈ ಆಟಗಾರರ ಸಾಮಾನ್ಯರಂತೆ ಜೀವನ ನಡೆಸುವುದು ತುಸು ಕಷ್ಟ. ಇಂತಹ ಸಮಯದಲ್ಲಿ ಆಟಗಾರರು ಸಾಮಾನ್ಯ ಜನರಂತೆ ಜೀವನ ನಡೆಸಲು ಇಷ್ಟ ಪಡುತ್ತಾರೆ. ಆದರೆ ಅಭಿಮಾನಿಗಳು ಅವರನ್ನು ಸಾಮಾನ್ಯರಂತೆ ಇರಲು ಬಿಡುವುದಿಲ್ಲ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕ್ರಿಕೆಟ್ ಆಟಗಾರರು ಸಹ ಸಾಮಾನ್ಯ ಜನರಂತೆ ಜೀವನ ನಡೆಸಬೇಕಾಗುತ್ತದೆ. ಇಂತಹದ್ದೇ ಒಂದು ಅನಿವಾರ್ಯ ಪ್ರಸಂಗ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರನಿಗೂ ಇತ್ತೀಚಿಗೆ ಬಂದಿತ್ತು. ಆ ಪ್ಲೇಯರ್ ಯಾರು ಆತ ಪಟ್ಟ ಕಷ್ಟ ಏನು ಎಂಬ ಬಗ್ಗೆ ವಿವರ ಇಲ್ಲಿದೆ.

ಮಾರ್ಚ್ 8 ರಂದು ಭಾನುವಾರ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಟಿ20 ವಿಶ್ವಕಪ್‌ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 96 ರನ್‌ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ಆಟಗಾರರು ಹೋಟೆಲ್‌ನಲ್ಲಿ ಪಾರ್ಟಿ ಮಾಡಿದರು. ಬಳಿಕ ಬೆಳಗ್ಗೆ ಹಲವು ಆಟಗಾರರು ತಮ್ಮ ತಮ್ಮ ತವರಿನತ್ತ ಪ್ರಯಾಣ ಬೆಳೆಸಿದರು. ಹಲವು ಆಟಗಾರರು ವಿಮಾನ ನಿಲ್ದಾಣದತ್ತ ಮುಖ ಮಾಡಿದರೆ, ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಒಬ್ಬರೇ ರೈಲು ನಿಲ್ದಾಣದತ್ತ ನಡೆದರು. ಇದಕ್ಕೆ ಕಾರಣ ಏನು ಎಂಬುದನ್ನು ಅವರೇ ಬಹಿರಂಗ ಪಡಿಸಿದ್ದಾರೆ.

World Cup

ಅಹಮದಾಬಾದ್‌ನಿಂದ ಮುಂಬೈಗೆ 3 ಎಸಿ ಟ್ರೈನ್‌ನಲ್ಲಿ ಪ್ರಯಾಣ ಬೆಳೆಸಿದ ಆಟಗಾರ ಶಿವಂ ದುಬೆ. ಟಿ20 ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶಿವಂ ದುಬೆ ಭಾರೀ ಫೇಮಸ್ ಆಗಿದ್ದರು. ಇವರ ಬಿಗ್ ಹಿಟ್ಟಿಂಗ್ ಸಿಕ್ಸರ್‌ಗಳಿಗೆ ಅಭಿಮಾನಿಗಳು ಮನ ಸೋತಿದ್ದರು. ಇವರನ್ನು ರೈಲಿನಲ್ಲಿ ಅಭಿಮಾನಿಗಳು ಗುರುತು ಹಿಡಿಯುತ್ತಾರೆ ಎಂಬ ಭಯ ಅವರಲ್ಲೂ ಇತ್ತು. ಹೀಗಾಗಿ ಅವರು ಮಾಸ್ಟರ್‌ ಪ್ಲ್ಯಾನ್ ಮಾಡಿಕೊಂಡಿದ್ದರು.

ಒಂದು ಕಾಲ್‌ ಬದಲಿಸಿದ ಇಶಾನ್‌ ಕಿಶನ್‌ ಅದೃಷ್ಟಒಂದು ಕಾಲ್‌ ಬದಲಿಸಿದ ಇಶಾನ್‌ ಕಿಶನ್‌ ಅದೃಷ್ಟ

ರೈಲಿನಲ್ಲಿ ಶಿವಂ ದುಬೆ ಪ್ರಯಾಣ

ಪಾರ್ಟಿ ಎಲ್ಲವೂ ಮುಕ್ತಾಯವಾಗುತ್ತಿದ್ದಂತೆ ಶಿವಂ ದುಬೆ, ಬ್ಯಾಗ್‌ ಪ್ಯಾಕ್ ಮಾಡಿಕೊಂಡು ಮುಂಬೈಗೆ ಹೋಗಲು ತಯಾರಿ ನಡೆಸಿದರು. ಈ ವೇಳೆ ಮೊದಲು ಅವರು ವಿಮಾನದಲ್ಲಿ ಟಿಕೆಟ್ ಸಿಗಬಹುದಾ ಎಂದು ಪರಿಶೀಲಿಸಿದ್ದಾರೆ. ಆದರೆ ವಿಮಾನದಲ್ಲಿ ಟಿಕೆಟ್‌ ಖಾಲಿ ಇಲ್ಲದಿದ್ದರಿಂದ ಅವರು, ಮೊದಲು ಕಾರಿನಲ್ಲಿ ಪ್ರಯಾಣಿಸಲು ಬಯಸಿದ್ದರು. ಆದರೆ ತುಂಬಾ ದುರದ ಪ್ರಯಾಣ ಹಾಗೂ ರೈಲಿನಲ್ಲಿ ಹೋದರೆ ಬೇಗ ಹೋಗುತ್ತೇವೆ ಎಂದು ಟ್ರೈನ್‌ ಟಿಕೆಟ್‌ ಬುಕ್ ಮಾಡಿದ್ದಾರೆ. 3 ಎಸಿ ಟಿಕೆಟ್‌ ಬುಕ್‌ ಮಾಡಿಕೊಂಡರು ಅಹಮದಾಬಾದ್‌ನಿಂದ ಬೆಳಗ್ಗೆ 5.10ಕ್ಕೆ ಟ್ರೈನ್ ಹತ್ತಿದ್ದಾರೆ.

ಅವರಲ್ಲಾ ಇವರು

ಇತ್ತೀಚಿಗಷ್ಟೇ ವಿಶ್ವಕಪ್‌ ಮುಗಿದಿದ್ದರಿಂದ ಶಿವಂ ದುಬೆ ಅವರನ್ನು ಜನ ಗುರುತು ಹಿಡಿಯಬಹುದು ಎಂದು ತಿಳಿದು, ಅವರು ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್ ಹಾಕಿಕೊಂಡು ಟ್ರೈನ್ ಏರಿದ್ದಾರೆ. ಟಿಕೆಟ್‌ ಪರೀಕ್ಷಕರು ಬಂದ ಬಳಿಕ ಪ್ರಯಾಣಿಕರ ಪಟ್ಟಿಯಲ್ಲಿ ಶಿವಂ ದುಬೆ ಹೆಸರನ್ನು ನೋಡಿ ಇವರು ಕ್ರಿಕೆಟ್ ಆಟಗಾರ ಶಿವಂ ದುಬೆ ಎಂದು ಕೇಳಿದ್ದಾರೆ. ತಕ್ಷಣವೇ ಕೆಳ ಸೀಟ್‌ನಲ್ಲಿ ಕುಳಿತಿದ್ದ ಅಂಜುಮ್‌ ಖಾನ್‌, ಇಲ್ಲ ಇಲ್ಲ. ಅವರು ಇಲ್ಲಿಗೆ ಏಕೆ ಬರುತ್ತಾರೆ? ರೈಲಿನಲ್ಲಿ ಏಕೆ ಪ್ರಯಾಣ ಬೆಳೆಸುತ್ತಾರೆ? ಇವರು ಬೇರೆಯವರು ಎಂದಿದ್ದಾರೆ. ಇದನ್ನು ನಂಬಿದ ಟಿಕೆಟ್ ಪರೀಕ್ಷಕ ಸಹ ಮುನ್ನಡೆದಿದ್ದಾರೆ.

ಟಿ20 ವಿಶ್ವಕಪ್ ಬಹುಮಾನ ಮೊತ್ತ ಘೋಷಣೆ: ಚಾಂಪಿಯನ್‌ ಭಾರತದ 24.25 ಕೋಟಿ ರೂಟಿ20 ವಿಶ್ವಕಪ್ ಬಹುಮಾನ ಮೊತ್ತ ಘೋಷಣೆ: ಚಾಂಪಿಯನ್‌ ಭಾರತದ 24.25 ಕೋಟಿ ರೂ

ಈ ಪ್ರಯಾಣದ ಬಗ್ಗೆ ಶಿವಂ ದುಬೆ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿದ್ದಾರೆ. ವಿಮಾನಗಳು ಸಿಗದೇ ಇದ್ದಾಗ ಅನಿವಾರ್ಯವಾಗಿ ರೈಲಿನಲ್ಲಿ ಪ್ರಯಾಣ ಬೆಳೆಸ ಬೇಕಾಯಿತು. ನಾವು ರಸ್ತೆಯ ಮೂಲಕ ಮೊದಲು ಪ್ರಯಾಣಿಸಲು ಬಯಸಿದ್ದೆವು. ಆದರೆ ರೈಲಿನಲ್ಲಿ ಪ್ರಯಾಣಿಸಿದರೆ ಬೇಗ ಹೋಗುತ್ತೇವೆ ಎಂದು ನಾವು ಟಿಕೆಟ್ ಬುಕ್ ಮಾಡಿದೆವು ಎಂದು ಶಿವಂ ದುಬೆ ತಿಳಿಸಿದ್ದಾರೆ.

Story first published: Thursday, March 12, 2026, 10:51 [IST]
Other articles published on Mar 12, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+