For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್ ನಿವೃತ್ತಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರಿಕಿ ಪಾಂಟಿಂಗ್

Fromer Australian Legend Ricky Ponting Made A Bold Statement About David Warners Retirement

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆಯೂ ಅವರು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಡೇವಿಡ್ ವಾರ್ನರ್ 2ನೇ ಟೆಸ್ಟ್‌ನಲ್ಲಿ ಗಾಯಗೊಂಡ ನಂತರ ಉಳಿದ ಪಂದ್ಯಗಳಿಂದ ಹೊರಗುಳಿದರು ಮತ್ತು ತವರಿಗೆ ವಾಪಸ್ ತೆರಳಿದರು.

ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ತಂಡದಲ್ಲಿ ಅವರಿಗೆ ಸ್ಥಾನ ಸಿಗುವ ಬಗ್ಗೆ ಊಹಾಪೋಹಗಳು ಶುರುವಾದವು. ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ನಂತರ ಅವರು ಮತ್ತೆ ಫಾರ್ಮ್ ಕಳೆದುಕೊಂಡರು. ಭಾರತದ ವಿರುದ್ಧದ ಸರಣಿಯಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ 1, 10 ಮತ್ತು 15 ರನ್ ಗಳಿಸಿದರು.

ಡೇವಿಡ್ ವಾರ್ನರ್ ನಿವೃತ್ತಿ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ನಡುವೆಯೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಮುಖ್ಯವಾದ ಹೇಳಿಕೆ ನೀಡಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ವಾರ್ನರ್‌ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Fromer Australian Legend Ricky Ponting Made A Bold Statement About David Warners Retirement

ನಿವೃತ್ತಿಗೆ ಮುನ್ನ ಅವರಿಗೆ ಒಂದು ಅವಕಾಶ ಕೊಡಿ

"ರಿಕಿ ಪಾಂಟಿಂಗ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಪಾಂಟಿಂಗ್ ಐಸಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾರತದ ವಿರುದ್ಧ ಸರಣಿಯಲ್ಲಿನ ಪ್ರದರ್ಶನವನ್ನು ಪರಿಗಣಿಸಿ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆಶಸ್ ಸರಣಿಗಾಗಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.

"ಇಂಗ್ಲೆಂಡ್‌ನಲ್ಲಿ ಡೇವಿಡ್ ವಾರ್ನರ್ ಉತ್ತಮವಾದ ದಾಖಲೆಯನ್ನೇನು ಹೊಂದಿಲ್ಲ, ಇದು ಅವರನ್ನು ತಂಡದಿಂದ ಹೊರಗಿಡುವಂತೆ ಮಾಡುವ ಸಾಧ್ಯತೆ ಇದೆ. ಆದರೆ ಇದು ಅವರ ಕ್ರಿಕೆಟ್ ಜೀವನದ ಅಂತ್ಯ ಎಂದು ನಾನು ಭಾವಿಸುವುದಿಲ್ಲ, ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಅವರನ್ನು ಆಡಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಪಾಂಟಿಂಗ್ ಹೇಳಿದ್ದಾರೆ.

"ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಾರ್ನರ್ ಉತ್ತಮ ಪ್ರದರ್ಶನ ನೀಡಿದರೆ ಆಶಸ್ ಸರಣಿಯಲ್ಲಿ ಮುಂದುವರೆಸಬೇಕು" ಎಂದು ಪಾಂಟಿಂಗ್ ಒತ್ತಾಯಿಸಿದ್ದಾರೆ.

Fromer Australian Legend Ricky Ponting Made A Bold Statement About David Warners Retirement

ಸಿಡ್ನಿ ಟೆಸ್ಟ್‌ ನಂತರ ನಿವೃತ್ತಿಯಾಗಬೇಕಿತ್ತು

ಡೇವಿಡ್ ವಾರ್ನರ್ ನಿವೃತ್ತಿಯಾಗುವ ಬಗ್ಗೆ ಚಿಂತಿಸಿದ್ದರೆ ಕಳೆದ ಜನವರಿಯಲ್ಲಿ ನಡೆದ ಸಿಡ್ನಿ ಟೆಸ್ಟ್‌ ಅತ್ಯುತ್ತಮ ಸಮಯವಾಗಿತ್ತು ಎಂದು ಪಾಂಟಿಂಗ್ ಹೇಳಿದರು. "ಮೆಲ್ಬೋರ್ನ್‌ನಲ್ಲಿ ಅವರು ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 200 ರನ್ ಗಳಿಸಿದ್ದರು, ತವರಿನ ಪ್ರೇಕ್ಷಕರ ಮುಂದೆ ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯವಾಗಿತ್ತು" ಎಂದು ತಿಳಿಸಿದರು.

ಡೇವಿಡ್‌ ವಾರ್ನರ್ ಮತ್ತೆ ಮುಂದಿನ ವರ್ಷ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದರೆ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ನಿವೃತ್ತಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Story first published: Monday, March 6, 2023, 8:56 [IST]
Other articles published on Mar 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+