ವೈಭವ್ ಹೋರಾಟದ ಕಥೆ ಗೊತ್ತಾ? ಭಾರತದ ಫ್ಯೂಚರ್ ಸ್ಟಾರ್
ಸಾಮಾಜಿಕ ತಾಣಗಳನ್ನು ಓಪನ್ ಮಾಡಿದ್ರೆ ಸಾಕು ವೈಭವ್ ಸೂರ್ಯವಂಶಿ ಟ್ರೆಂಡ್ ಆಗುತ್ತಿದ್ದಾರೆ. ಯಾವುದೇ ನ್ಯೂಸ್ ಚಾನೆಲ್ ಹಚ್ಚಿದ್ರೂ ಇವರ ಗುಣಗಾನ ನಡೆಯುತ್ತಿದೆ. ಪೇಪರ್‌ಗಳು ಸಹ ಇವರ ಆಟಕ್ಕೆ ದೊಡ್ಡ ಮಹತ್ವವನ್ನು ನೀಡಿವೆ. ಕೇವಲ ಆಡಿದ ಮೂರೇ ಪಂದ್ಯಗಳಲ್ಲಿ ಮೂರಂಕಿ ಮುಟ್ಟಿದ ಬೀಹಾರ ಈ ಪೋರ ನಿಜಕ್ಕೂ ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ನವ ಉತ್ಸಾಹ ಮೂಡಿಸಿದ್ದಾರೆ. ವೈಭವ್ ಸೂರ್ಯವಂಶಿ ಅವರ ಹೋರಾಟದ ಕಥೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಸೋಮವಾರದ ಜೈಪುರದ ಸವಾಯಿ ಮಾನಸಿಂಗ್ ಸ್ಟೇಡಿಯಂನಲ್ಲಿ ವೈಭವ್ ಸೂರ್ಯವಂಶಿ ಅಮೋಘವಾಗಿ ಬ್ಯಾಟಿಂಗ್ ಮಾಡಿದರು. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ವೈಭವ್ ಸ್ಫೋಟಕ ಬ್ಯಾಟಿಂಗ್ ನಡೆಸಿ ನೆರೆದ ಅಭಿಮಾನಿಗಳ ಮನ ಗೆದ್ದರು. ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು. ವೈಭವ್ ಸೂರ್ಯವಂಶಿ ನಡೆದು ಬಂದ ದಾರಿಯ ಬಗ್ಗೆ ಐಪಿಎಲ್ ತನ್ನ ಅಧಿಕೃತ ಕಾಥೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ವೈಭವ್ ನೋವಿನ ಕಥೆಯನ್ನು ತೆರೆದಿಡುತ್ತದೆ. ಈ ಹಂತವನ್ನು ತಲುಪಲು ತಾನು ಮತ್ತು ತನ್ನ ಕುಟುಂಬ ಪಟ್ಟ ನೋವುಗಳನ್ನು ವೈಭವ್ ಸೂರ್ಯವಂಶಿ ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.
ತನ್ನ ಪೋಷಕರ ತ್ಯಾಗವೇ ಕಾರಣ
ವೈಭವ್ ಸಿಡಿಲಬ್ಬರದ ಬ್ಯಾಟಿಂಗ್ ಬಳಿಕ ಐಪಿಎಲ್ ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ 14 ವರ್ಷದ ಪೋರ ತನ್ನ ಪೋಷಕರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಾನು ಇಂದು ಈ ಹಂತಕ್ಕೆ ತಲುಪಿರುವಲ್ಲಿ ಅವರ ಪಾಲಕರ ಕೊಡುಗೆ ಅಪಾರ ಎಂದು ತಿಳಿಸಿದ್ದಾರೆ. ನಾನು ಪ್ರ್ಯಾಕ್ಟಿಸ್‌ಗೆ ಹೋಗುವ ಮುನ್ನವೇ ನನ್ನ ತಾಯಿ ರಾತ್ರಿ 2 ಗಂಟೆಗೆ ಎದ್ದು ಟಿಫಿನ್ ಮಾಡುತ್ತಾಳೆ. ರಾತ್ರಿ ಪಾಪಾ ಅವಳು ಮೂರು ಗಂಟೆ ಮಾತ್ರ ನಿದ್ದೇ ಮಾಡುತ್ತಿದ್ದಾಳೆ. ನನ್ನ ತಂದೆ ತಮ್ಮ ಕೆಲಸವನ್ನು ಬಿಟ್ಟು ನನ್ನ ಯಶಸ್ಸಿಗಾಗಿ ಟೊಂಕ ಕಟ್ಟಿದ್ದಾರೆ. ನನ್ನ ಮನೆಯನ್ನು ಮುನ್ನಡೆಸುವ ಜವಾಬ್ದಾರಿ ನನ್ನ ಅಣ್ಣನ ಮೇಲೆ ಬಿದ್ದಿದೆ. ನಾನು ಇಂದು ಯಾವುದೇ ಯಶಸ್ಸು ಕಂಡಿದ್ದರೂ ಅದಕ್ಕೆ ನನ್ನ ಹೆತ್ತವರ ತ್ಯಾಗವೇ ಕಾರಣ ಎಂದು ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಈ ಸಾಧನೆಯ ಮೆಟ್ಟಿಲು ಹತ್ತಲು ಹಲವು ಕಷ್ಟಗಳನ್ನು ಕಂಡಿದ್ದಾರೆ. ಅಂದಹಾಗೆ ವೈಭವ್ ಸೂರ್ಯವಂಶಿ ಅವರಿಗೆ ಈಗ 14 ವರ್ಷ. ಇವರ ತಮ್ಮ ಕ್ರಿಕೆಟ್‌ಗಾಗಿ ಬಟರ್ ಮಟನ್ ಹಾಗೂ ಫಿಜಾ ತಿನ್ನುವುದನ್ನೇ ಬಿಟ್ಟಿದ್ದಾರೆ. ಇವರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರು, ಹೆಚ್ಚು ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ತಮ್ಮನ್ನು ತಾವು ಫಿಟ್ ಆಗಿ ಉಳಿಯಲು ಶ್ರಮಿಸುತ್ತಿದ್ದಾರೆ. ಈಗಾಗಲೇ ಅಂಡರ್ 19 ಭಾರತ ತಂಡದ ಪರ ಆಡಿ ಸೈ ಎನಿಸಿಕೊಂಡಿರುವ, ರಾಷ್ಟ್ರೀಯ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications