Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಗುತ್ತಿಗೆಯಿಂದ ಯುವಿ, ಗಂಭೀರ್ ಔಟ್, ರಾಹುಲ್ ಇನ್

ಮುಂಬೈ, ಡಿ.22: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಗುತ್ತಿಗೆ ಪಟ್ಟಿಯಿಂದ ಯುವರಾಜ್ ಸಿಂಗ್, ಗೌತಮ್ ಗಂಭೀರ್ ಅವರನ್ನು ಕೈಬಿಟ್ಟಿದೆ. 2014-15ರ ಗುತ್ತಿಗೆಗೆ ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ಹೊಸ ಸೇರ್ಪಡೆಯಾಗಿದ್ದಾರೆ.

ವಿಶ್ವಕಪ್ 30 ಜನರ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿರುವ ಯುವರಾಜ್ ಹಾಗೂ ಗಂಭೀರ್ ಇಬ್ಬರೂ ಬಿಸಿಸಿಐನ ಗುತ್ತಿಗೆ ಪಟ್ಟಿ(ಗ್ರೇಡ್ ಎ,ಬಿ, ಸಿ)ಯಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ಇಬ್ಬರು ಗ್ರೇಡ್ ಬಿ ಪಟ್ಟಿಯಲ್ಲಿದ್ದರು. ಕಳೆದ ಬಾರಿ ಬಿ ಪಟ್ಟಿಯಲ್ಲಿದ್ದ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿ ಗ್ರೇಡ್ ಎ ಸೇರಿದ್ದಾರೆ. [ಬಿಸಿಸಿಐಗೆ ಬಿಸಿ ಮುಟ್ಟಿಸಿದ ವಿಶ್ವಕಪ್ ವೀರ]

Yuvraj Singh

ಕಳೆದ ರಣಜಿ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಕೆಎಲ್ ರಾಹು ಅವರು ಗ್ರೇಡ್ ಸಿ ಪಟ್ಟಿ ಸೇರಿದ್ದಾರೆ. ಯುವ ಆಲ್ ರೌಂಡರ್ ಅಕ್ಷರ್ ಪಟೇಲ್, ಕೇರಳದ ಸಂಜು ಸಾಮ್ಸನ್ ಕೂಡಾ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಹೊಸ ಮುಖಗಳಾಗಿವೆ.

ಹಿರಿಯ ಆಟಗಾರರಾದ ವೀರೇಂದರ್ ಸೆಹ್ವಾಗ್, ಹರ್ಭಜನ್ ಸಿಂಗ್, ಜಹೀರ್ ಕಾನ್ ಅವರು ಬಿಸಿಸಿಐ ಗುತ್ತಿಗೆಯಿಂದ ಹೊರ ಬಿದ್ದಿದ್ದು, ಮತ್ತೊಮ್ಮೆ ಗುತ್ತಿಗೆ ಪಡೆದುಕೊಳ್ಳುವ ಅವಕಾಶ ಕನಸಿನ ಮಾತಾಗಿದೆ.

ಎ ಗ್ರೇಡ್ (5)
ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್(ಸಚಿನ್ ತೆಂಡೂಲ್ಕರ್ ನಿವೃತ್ತರಾದ ಸ್ಥಾನಕ್ಕೆ)
ಬಿ ಗ್ರೇಡ್ (11)
ಪ್ರಗ್ನಾನ್ ಓಜಾ, ಮುರಳಿ ವಿಜಯ್, ಚೇತೇಶ್ವರ್ ಪೂಜಾರಾ, ರವೀಂದ್ರ ಜಡೇಜ, ಇಶಾಂತ್ ಶರ್ಮ, ಶಿಖರ್ ಧವನ್, ಉಮೇಶ್ ಯಾದವ್, ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮಹಮ್ಮದ್ ಶಮಿ

KL Rahul

ಸಿ ಗ್ರೇಡ್(16)
ಅಮಿತ್ ಮಿಶ್ರಾ, ವರುಣ್ ಅರೋನ್, ವೃದ್ಧಿಮಾನ್ ಸಹಾ, ಸ್ಟುವರ್ಟ್ ಬಿನ್ನಿ, ಪಂಕಜ್ ಸಿಂಗ್, ಆರ್ ವಿನಯ್ ಕುಮಾರ್, ಮೋಹಿತ್ ಶರ್ಮ, ಧವಳ್ ಕುಲಕರ್ಣಿ, ಪರ್ವೇಜ್ ರಸೂಲ್, ಅಕ್ಷರ್ ಪಟೇಲ್, ಮನೋಜ್ ತಿವಾರಿ, ರಾಬಿನ್ ಉತ್ತಪ್ಪ, ಕರಣ್ ಶರ್ಮ, ಸಂಜು ಸಾಮ್ಸನ್, ಕುಲದೀಪ್ ಯಾದವ್ ಹಾಗೂ ಕೆಎಲ್ ರಾಹುಲ್

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+