ಪೆಪ್ಸಿ ಬದಲಿಗೆ ವಿವೋ ಐಪಿಎಲ್: ಬಿಸಿಸಿಐ ನಿರ್ಣಯಗಳ ಡೀಟೈಲ್ಸ್
ಮುಂಬೈ, ಅ.18: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ನಡೆದ ಕಾರ್ಯಕಾರಿ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಭವಿಷ್ಯ, ಪೆಪ್ಸಿ ಬದಲಿಗೆ ಐಪಿಎಲ್ ಪ್ರಾಯೋಜಕತ್ವ ಯಾರಿಗೆ ನೀಡಬೇಕು? ಆಟಗಾರರ ಸಂಭಾವನೆ ಪಟ್ಟಿ ಪ್ರಮುಖವಾಗಿದೆ.
2016ರಲ್ಲಿ ನಡೆಯಲಿರುವ ಐಪಿಎಲ್ 9ರಲ್ಲಿ ಪೆಪ್ಸಿ ಬದಲಿಗೆ ಚೀನಾ ಮೂಲದ ಸ್ಮಾರ್ಟ್ ಫೋನ್ ಉತ್ಪಾದನಾ ಸಂಸ್ಥೆ ವಿವೋ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿದೆ. ಮುಂದಿನ ಹತ್ತು ದಿನಗಳಲ್ಲಿ ಮೆಸರ್ಸ್ ವಿವೋ ಮೊಬೈಲ್ಸ್ ಸಂಸ್ಥೆ ಬ್ಯಾಂಕ್ ಗ್ಯಾರಂಟಿ ನೀಡಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ. [ಐಪಿಎಲ್ 9: ಚೆನ್ನೈ, ರಾಜಸ್ಥಾನ ಬದಲಿಗೆ ಹೊಸ 2 ತಂಡ!]

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಪ್ರಾಯೋಜಕತ್ವಕ್ಕೂ ವಿವೋ ಮೊಬೈಲ್ ಟೆಂಡರ್ ಹಾಕಿತ್ತು. ಅದರೆ, ಕೊನೆಗಳಿಗೆಯಲ್ಲಿ ಪೇಟಿಎಂ ಪಾಲಾಯಿತು. [ಗಾಂಧಿ-ಮಂಡೇಲಾ ಕ್ರಿಕೆಟ್ ಸರಣಿ ಫುಲ್ ಗೈಡ್]
ಮುಂದಿನ ಎರಡು ವರ್ಷಕ್ಕೆ ವಿವೋ ಸಂಸ್ಥೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ನೀಡಲಿದೆ. ಪೆಪ್ಸಿ ಕೋ ಸಂಸ್ಥೆಗೆ ನೀಡಲಾಗಿದ್ದ ನಿಯಮಗಳು ವಿವೋ ಸಂಸ್ಥೆಗೂ ಅನ್ವಯವಾಗಲಿದೆ ಎಂದು ಬಿಸಿಸಿಐ ಹೇಳಿದೆ. ಬಿಸಿಸಿಐ ಕಾರ್ಯಕಾರಿ ಸಭೆಯ ನಿರ್ಣಯಗಳು ಇಂತಿವೆ:
* ಮುಂದಿನ ಕಾರ್ಯಕಾರಿ ಸಭೆ ನವೆಂಬರ್ 9, 2015ರಂದು ಮುಂಬೈನಲ್ಲಿ ನಡೆಯಲಿದೆ.
* 2016ರ ಐಪಿಎಲ್ 9ರಲ್ಲಿ ಚೆನ್ನೈ, ರಾಜಸ್ಥಾನ ತಂಡಗಳ ಬದಲಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಗೊಳ್ಳಲಿವೆ. ಹೀಗಾಗಿ ಐಪಿಎಲ್ ನಲ್ಲಿ ಎಂದಿನಂತೆ 8 ತಂಡಗಳು ಸ್ಪರ್ಧಿಸಲಿವೆ.
* ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಲೋಧಾ ಸಮಿತಿ ನೀಡಿದ ಆದೇಶ ಹಾಗೂ ನಿರ್ದೇಶನವನ್ನು ಸಂಪೂರ್ಣವಾಗಿ ಪಾಲಿಸಲಾಗಿದೆ.
* ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಖಜಾಂಚಿ ಕಚೇರಿ ಶೀಘ್ರದಲ್ಲೆ ಆರಂಭಿಸಲಾಗುತ್ತದೆ.
* ಮೆಸರ್ಸ್ ಪಿಬಿ ವಿಜಯರಾಘವನ್ ಅಂಡ್ ಕಂಪನಿಯ ಬದಲಿಗೆ ಮೆಸರ್ಸ್ ಗೋಖಲೆ ಅಂಡ್ ಸಾಥೆ ಸಂಸ್ಥೆಯನ್ನು ಬಿಸಿಸಿಐ ಆಂತರಿಕ ಆಡಿಟರ್ಸ್ ಆಗಿ ನೇಮಿಸಲಾಗಿದೆ.
* ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸ್ಥಾಪನೆಗಾಗಿ ಕರ್ನಾಟಕದ ಕೆಐಎಡಿಬಿ ಮಂಜೂರು ಮಾಡಿರುವ ಭೂಮಿಯನ್ನು ಪರಿಶೀಲಿಸಲು ಬಿಸಿಸಿಐ ಸಮಿತಿ ರಚನೆ. ಎನ್ ಸಿಎ ಚೇರ್ಮನ್ ಪಾಂಡೋವೆ, ರಾಜೀವ್ ಶುಕ್ಲಾ, ಅನಿರುಧ್ ಚೌಧರಿ, ಅಮಿತಾಬ್ ಚೌಧರಿ ಅವರು ಒಂದು ತಿಂಗಳಲ್ಲಿ ವರದಿ ಸಲ್ಲಿಸಲಿದ್ದಾರೆ.
* ಆಟಗಾರರ ದಿರಿಸು, ಶೂ ಇನ್ನಿತರ ಸಾಮಾಗ್ರಿಗಳ ಪ್ರಾಯೋಜಕತ್ವ ವಹಿಸಿಕೊಂಡಿರುವ ನೈಕಿ ಜೊತೆಗಿನ ಒಪ್ಪಂದ ಮುಂದುವರಿಕೆ.
* ಬಿಸಿಸಿಐ ವೆಬ್ ಸೈಟ್ ನಲ್ಲಿ ಅಟಗಾರರು, ಅಂಪೈರ್ ಗೆ ನೀಡುವ ತಿಂಗಳ ಸಂಭಾವನೆ, ಮಾಜಿ ಆಟಗಾರರಿಗೆ ವೈದ್ಯಕೀಯ ವೆಚ್ಚ ಬಗ್ಗೆ ಮಾಹಿತಿ.
* ಬಿಸಿಸಿಐ ನೀಡುವ ಎಲ್ಲಾ ವೇತನ, ಸಂಭಾವನೆಗಳ ಮೊತ್ತ 25 ಲಕ್ಷ ರು ಗಿಂತ ಅಧಿಕವಾಗಿದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications