ದುಬೈ, ಜು. 06: ಟೆಸ್ಟ್, ಏಕದಿನ ಮತ್ತು ಟಿ-20 ಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯಿಂದಲೇ ಐಸಿಸಿ ಅನ್ವಯ ಮಾಡಿದೆ.
ಇದು ಸಂಪೂರ್ಣ ತಿದ್ದುಪಡಿಯಲ್ಲ, ಪ್ಲೇಯಿಂಗ್ ಕಂಡಿಷನ್ ಆಧಾರದಲ್ಲಿ ತೆಗೆದುಕೊಂಡ ಬದಲಾವಣೆ ಎಂದು ಐಸಿಸಿ ತಿಳಿಸಿದೆ. ಅಲ್ಲದೇ ಐಸಿಸಿಯ ಹೊಸ್ ಕೋಡ್ ಆಫ್ ಕಂಡಕ್ಟ್ ಗಳು ಜುಲೈ 8 ರಿಂದ ಅನ್ವಯವಾಗಲಿದೆ. ಜಿಂಬಾಬ್ವೆ ವಿರುದ್ಧ ಜುಲೈ 10 ರಿಂದ ಆರಂಭವಾಗಲಿರುವ ಸರಣಿಯಲ್ಲಿ ಭಾರತ ಹೊಸ ನಿಯಮಾವಳಿ ಅನುಸಾರ ಆಡಲಿದೆ.[ಏಕದಿನ ಕ್ರಿಕೆಟ್ ಬದಲಾವಣೆ ಮೇಲೆ ನೋಟ]

ಐಸಿಸಿ ತೆಗೆದುಕೊಂಡ ಹೊಸ ಬದಲಾವಣೆಗಳು
ಏಕದಿನ ಕ್ಷೇತ್ರ ರಕ್ಷಣೆ ವಿಭಾಗ
* 1 ರಿಂದ 10 ಓವರ್ ಅವಧಿಯಲ್ಲಿ ಕ್ಲೋಸ್ ಕ್ಯಾಚರ್ಸ್ ಗಳು ಕಡ್ಡಾಯವಲ್ಲ
* ಬ್ಯಾಟಿಂಗ್ ಪವರ್ ಪ್ಲೇ ರದ್ದು.
* ಕೊನೆಯ 10 ಓವರ್‌ಗಳಲ್ಲಿ 5 ಕ್ಷೇತ್ರರಕ್ಷಕರಿಗೆ ಅವಕಾಶ.[ಲಂಚ ಪ್ರಕರಣ: ರೈನಾ, ಜಡೇಜ, ಬ್ರಾವೋಗೆ ಕ್ಲೀನ್ ಚಿಟ್!]
* ಏಕದಿನ - ಇಂಟರ್ವಲ್
ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ಅವಧಿಗೆ ಮುನ್ನ ಆಲೌಟ್ ಆಗಿರುತ್ತದೆ. ಚೇಸಿಂಗ್ ತಂಡ ಬ್ಯಾಟಿಂಗ್ ಮಾಡುತ್ತಿದ್ದು ಗೆಲುವಿನ ಸಮೀಪ ಬಂದಿರುತ್ತದೆ. ಈ ವೇಳೆ ಮೊದಲ ಅವಧಿ ಮುಕ್ತಾಯಕ್ಕೆ ಬಂದಾಗ ಚೇಸಿಂಗ್ ತಂಡದ ನಾಯಕ ಇನ್ನು ನಾಲ್ಕು ಓವರ್ ಅಥವಾ 15 ನಿಮಿಷ ಆಟ ಮುಂದುವರಿಸಯವಂತೆ ಅಂಪೈರ್ ಗಳನ್ನು ಕೇಳಿಕೊಳ್ಳಬಹುದು. ಒಂದು ವೇಳೆ ಆ ಅವಧಿಯಲ್ಲಿಯೂ ಪಂದ್ಯ ಮುಗಿಯದಿದ್ದರೆ ಮಧ್ಯಂತರದ ಅವಧಿ ಅಂದರೆ 45 ನಿಮಿಷಗಳ ನಂತರ ಆಟ ಆರಂಭವಾಗುವುದು.
* ಎಲ್ಲ ನೋ ಬಾಲ್ ಗಳಿಗೂ ಫ್ರೀ ಹಿಟ್ (3 ಪ್ರಕಾರಗಳಿಗೂ ಅನ್ವಯ)
ಎಲ್ಲ ಬಗೆಯ ನೋಬಾಲ್ ಗಳಿಗೂ ಫ್ರೀ ಹಿಟ್ ಅವಕಾಶ ಕಲ್ಪಿಸಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಫೀಲ್ಡರ್ ಗಳು ಹೊರಗಿದ್ದರೆ ಸಹ ಫ್ರೀ ಹಿಟ್ ಅವಕಾಶ ಸಿಗುತ್ತದೆ.
* ಫೀಲ್ಡರ್ ಅಥವಾ ವಿಕೆಟ್ ಕೀಪರ್ (3 ಪ್ರಕಾರಗಳಿಗೂ ಅನ್ವಯ)
ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ ಮನ್ ಚೆಂಡು ಎಸೆಯುವ ಸಂದರ್ಭ ಯಾವ ಬಗೆಯ ಚಲನ ವಲನ ಮಾಡುತ್ತಾನೆಯೋ ಅದಕ್ಕೆ ಅನುಗಯಣವಾಗಿ ವಿಕೆಟ್ ಕೀಪರ್ ಸಹ ಸ್ಥಾನ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
* ನಾನ್ ಸ್ಟ್ರೈಕ್ ರ್ ರನೌಟ್ (3 ಪ್ರಕಾರಗಳಿಗೂ ಅನ್ವಯ)
ಬೌಲಿಂಗ್ ಮಾಡಲು ಓಡಿಬಂದ ಬೌಲರ್ ತನ್ನ ಕೈ ಯನ್ನು ತಿರುಗಿಸದೇ ನಾನ್ ಸ್ಟ್ರೈಕ್ ರ್ ರನೌಟ್ ಗೆ ಯತ್ನ ಮಾಡಬಹುದು. ಬಹುತೇಕ ಸಂದರ್ಭಗಳಲ್ಲಿ ಚೆಂಡು ಎಸೆಯುವ ಮುನ್ನವೇ ನಾನ್ ಸ್ಟ್ರೈಕ್ ರ್ ಕ್ರೀಸ್ ಬಿಟ್ಟು ತೆರಳಿರುತ್ತಾನೆ. ಇದಕ್ಕೆ ಕಡಿವಾಣ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ನಿಯಮ ಉಲ್ಲಂಘನೆ ಲೆಕ್ಕ (3 ಪ್ರಕಾರಗಳಿಗೂ ಅನ್ವಯ)
ಕೆಳಗೆ ನೀಡಿರುವ ಹಲವಾರು ಸಂಗತಿಗಳನ್ನು ಪಂದ್ಯದ ನಿಯಮ ಉಲ್ಲಂಘನೆ ಎಂದೇ ಅಂಪೈರ್ ಗಳು ಭಾವಿಸಬಹುದು
* ಬೌಲರ್ ಬೇಕಂತಲೇ ಓವರ್ ನಲ್ಲಿ ನಿಗದಿಗಿಂತ ಹೆಚ್ಚಿನ ಬೌನ್ಸರ್ ಎಸೆಯುವುದು.
* ಸೊಂಟಕ್ಕಿಂತ ಮೇಲೆ ಬೇಕಂತಲೇ ಫುಲ್ ಟಾಸ್ ಎಸೆದು ಬ್ಯಾಟ್ಸ್ ಮನ್ ಗೆ ಆಘಾತ ನೀಡುವುದು.
* ಬೇಕಂತಲೇ ಪಿಚ್ ನ ಡೆಂಜರ್ ಏರಿಯಾದಲ್ಲಿ ಬೌಲರ್ ಓಡಿವುದು
* ರನ್ ಓಡುತ್ತುರುವಾಗ ಬ್ಯಾಟ್ಸ್ ಮನ್ ಗೆ ಅಡ್ಡ ಬರುವುದು.
ಡಿಆರ್ ಎಸ್ ವಿನಂತಿ(ಏಕದಿನ ಮತ್ತು ಟೆಸ್ಟ್ ಗೆ ಅನ್ವಯ)
* ಬಾಲ್ ಡೆಡ್ ಆಗುವ 15 ಸೆಕೆಂಡ್ ಮುನ್ನವೇ ಡಿಆರ್ ಎಸ್ ಗೆ ಮನವಿ ಸಲ್ಲಿಕೆ ಮಾಡಬೇಕಾಗುತ್ತದೆ.
* ಬಹಳ ಅನುಮಾನಾಸ್ಪದ ಅಥವಾ ಟೈಟ್ ಕ್ಯಾಚ್ ಗಳ ಫಲಿತಾಂಶ ವನ್ನು ಅಂಪೈರ್ ಗಳು ರಿವ್ಯೂ ಮೂಲಕ ನೀಡಿದರೆ ಫಲಿತಾಂಶ ನೀಡಿ 15 ಸೆಕೆಂಡ್ ಕಳೆಯುವುದರೊಳಗೆ ಪುನರ್ ಪರಿಶೀಲನೆಗೆ ಮನವಿ ಸಲ್ಲಿಕೆ ಮಾಡಬೇಕಾಗುತ್ತದೆ.
* ಮೂರನೇ ಅಂಪೈರ್ ಮತ್ತು ಸ್ಪೈಡರ್ ಕ್ಯಾಮ್ ಸಂಪರ್ಕ ಮೂಲಕ(3 ಪ್ರಕಾರಗಳಿಗೂ ಅನ್ವಯ)
ಮೂರನೇ ಅಂಪೈರ್ ತೀರ್ಪು ನೀಡುವಲ್ಲಿಯೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಚೆಂಡು ಮೈದಾನದ ಮೇಲಿರುವ ಸ್ಪೈಡರ್ ಕ್ಯಾಮ್ ನ ಯಾವೂದಾದರೂ ಭಾಗಕ್ಕೆ ತಾಗಿದೆಯೋ ಎಂಬ ಅನುಮಾನ ಉಂಟಾದರೆ ಫೀಲ್ಡ್ ಅಂಪೈರ್ ಟಿವಿ ಅಂಪೈರ್ ಗೆ ಇದನ್ನು ಪರಿಶೀಲನೆ ಮಾಡುವಂತೆ ಸೂಚನೆ ನೀಡಬಹುದು.
ಮಹಿಳಾ ವಿಭಾಗದ ಕ್ರಿಕೆಟ್ ನಿಯಮದಲ್ಲಿ ಐಸಿಸಿ ಯಾವ ಬದಲಾವಣೆಯನ್ನು ಮಾಡಿಲ್ಲ.(ಒನ್ ಇಂಡಿಯಾ ನ್ಯೂಸ್)