ಮುಂಬೈ, ಜೂನ್ 09: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರದಂದು 2016-17ನೇ ಸಾಲಿನ ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕ್ರಿಕೆಟ್ ಪಂದ್ಯಗಳನ್ನು ನಿಗದಿ ಮಾಡಿದೆ. ಈ ಪಟ್ಟಿಯಂತೆ ಟೀಂ ಇಂಡಿಯಾ ಒಟ್ಟು 13 ಟೆಸ್ಟ್, 8 ಏಕದಿನ ಪಂದ್ಯ, 3 ಟಿ20 ಪಂದ್ಯಗಳನ್ನು ತವರು ನೆಲದಲ್ಲಿ ಆಡಲಿದೆ.
ರಾಜ್ ಕೋಟ್, ಪುಣೆ, ಧರ್ಮಶಾಲ, ರಾಂಚಿ ಹಾಗೂ ಇಂದೋರ್ ನಲ್ಲಿ ಟೆಸ್ಟ್ ಪಂದ್ಯಗಳು ಮೊದಲ ಬಾರಿಗೆ ಆಯೋಜನೆಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ.

ಭಾರತ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ಕ್ರಿಕೆಟ್ ಋತು ಆರಂಭಿಸಲಿದೆ. ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳು ಹಾಗೂ 5 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ನಂತರ ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ.
2016-17ರ ಋತುವಿಗಾಗಿ ಬಿಸಿಸಿಐ ನಿಗದಿಪಡಿಸಿರುವ ವೇಳಾಪಟ್ಟಿ
# 13 ಟೆಸ್ಟ್ ಪಂದ್ಯಗಳು, 8 ಏಕದಿನ ಪಂದ್ಯಗಳು, 3 ಟಿ20ಐ
# 918 ಪಂದ್ಯಗಳು, 1,882 ಆಡುವ ದಿನಗಳು (ರಣಜಿ, ವಿಜಯ್ ಹಜಾರೆ, ಮುಷ್ತಾಕ್ ಅಲಿ ಟ್ರೋಫಿ, ದೇವಧರ್ ಟ್ರೋಫಿ, ಇರಾನಿ ಟ್ರೋಫಿ, ಮಹಿಳಾ ಕ್ರಿಕೆಟ್, ವಿವಿಧ ವಯೋಮಿತಿ ಪಂದ್ಯಗಳು ಸೇರಿ)
# ರಾಜ್ ಕೋಟ್, ಪುಣೆ, ಧರ್ಮಶಾಲ, ರಾಂಚಿ ಹಾಗೂ ಇಂದೋರ್ ಮೊದಲ ಬಾರಿಗೆ ಟೆಸ್ಟ್ ಪಂದ್ಯ
# ಸೆಪ್ಟೆಂಬರ್ 2016 ರಿಂದ ಮಾರ್ಚ್ 2017ರ ತನಕ ಪಂದ್ಯಗಳು
ಭಾರತ vs ನ್ಯೂಜಿಲೆಂಡ್
* 3 ಟೆಸ್ಟ್ ಪಂದ್ಯಗಳು : ಇಂದೋರ್, ಕಾನ್ಪುರ, ಕೋಲ್ಕತ್ತಾ
* 5 ಏಕದಿನ ಪಂದ್ಯಗಳು : ಧರ್ಮಶಾಲ, ದೆಹಲಿ, ಮೊಹಾಲಿ, ರಾಂಚಿ, ವಿಶಾಖಪಟ್ಟಣಂ
ಭಾರತ vs ಇಂಗ್ಲೆಂಡ್
* 5 ಟೆಸ್ಟ್ : ಮೊಹಾಲಿ, ರಾಜ್ ಕೋಟ್, ಮುಂಬೈ, ವಿಶಾಖಪಟ್ಟಣಂ, ಚೆನ್ನೈ
* 3 ಏಕದಿನ ಪಂದ್ಯಗಳು : ಪುಣೆ, ಕಟಕ್, ಕೋಲ್ಕತ್ತಾ
* 3 ಟಿ20ಐ: ಬೆಂಗಳೂರು, ನಾಗ್ಪುರ, ಕಾನ್ಪುರ
ಭಾರತ vs ಆಸ್ಟ್ರೇಲಿಯಾ (ಫೆಬ್ರವರಿ- ಮಾರ್ಚ್ 2017)
4 ಟೆಸ್ಟ್ : ಬೆಂಗಳೂರು, ಧರ್ಮಶಾಲ, ರಾಂಚಿ, ಪುಣೆ
ಭಾರತ vs ಬಾಂಗ್ಲಾದೇಶ
1 ಟೆಸ್ಟ್ : ಹೈದರಾಬಾದ್
* ದುಲೀಪ್ ಟ್ರೋಫಿ ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಪಂದ್ಯವಾಗಲಿದೆ. ಕಿತ್ತಳೆ ಚೆಂಡು ಬಳಸಲಾಗುತ್ತದೆ. (ಒನ್ಇಂಡಿಯಾ ಸುದ್ದಿ)