ಐಪಿಎಲ್ 2021: ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಸಂಪೂರ್ಣ ತಂಡ

ಮುಂಬೈ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಚೆನ್ನೈನಲ್ಲಿ ಆಟಗಾರರ ಹರಾಜು ನಡೆದಿದೆ. ಎಲ್ಲಾ ಎಂಟು ಫ್ರಾಂಚೈಸಿಗಳು ಪ್ರತಿಭಾನ್ವಿತರನ್ನು ಹೆಕ್ಕಿ ತಂಡವನ್ನು ಬಲಿಷ್ಠಗೊಳಿಸಿಕೊಂಡಿವೆ. ಈ ಬಾರಿ ಒಟ್ಟು 292 ಆಟಗಾರರು ಹರಾಜು ಕಣದಲ್ಲಿದ್ದರು.
ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಯಾವೆಲ್ಲ ಆಟಗಾರರನ್ನು ಆರಿಸಿದ್ದಾರೆ ಅನ್ನೋ ಕುತೂಹಲ ಈ ಬಾರಿ ಸಾಕಷ್ಟಿತ್ತು. ಮುಂಬೈ ಉಳಿಸಿಕೊಂಡ ಆಟಗಾರರನ್ನು ಪ್ರಕಟಿಸಿದ್ದಾಗಲೇ ಆ ತಂಡ ಸಾಕಷ್ಟು ಬಲಿಷ್ಠವಾಗಿದ್ದಂತೆ ತೋರಿತ್ತು. ಅದರ ಜೊತೆಗೆ ಹರಾಜಿನ ವೇಳೆ ಇನ್ನುಳಿದ ಒಂದಿಷ್ಟು ಪ್ರತಿಭಾನ್ವಿತರನ್ನು ಆರಿಸಿ ತಂಡವನ್ನು ಸಮತೋಲನಗೊಳಿಸಿಕೊಂಡಿದೆ.
ಈ ಹರಾಜಿನಲ್ಲಿ ಮುಂಬೈ ಅತೀ ಹೆಚ್ಚಿನ ಬೆಲೆಗೆ ಆರಿಸಿದ ಆಟಗಾರನೆಂದರೆ ನೇಥನ್ ಕೌಲ್ಟರ್ ನೈಲ್. ನೈಲ್ ಅವರನ್ನು ಎಂಐ 5 ಕೋಟಿಗೆ ಖರೀದಿಸಿತ್ತು. ಇನ್ನು ಆ್ಯಡಮ್ ಮಿಲ್ನೆ 3.2 ಕೋ.ರೂ., ಪೀಯೂಶ್ ಚಾವ್ಲಾ 2.4 ಕೋ.ರೂ.ಗೆ ಖರೀದಿಸಿದೆ.
ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಸಂಪೂರ್ಣ ತಂಡ
ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆ), ಕ್ರಿಸ್ ಲಿನ್, ಅನ್ಮೋಲ್‌ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅನುಕೂಲ್ ರಾಯ್, ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್.
ಖರೀದಿಸಿದ ಆಟಗಾರರು: ನೇಥನ್ ಕೌಲ್ಟರ್ ನೈಲ್ (5 ಕೋಟಿ), ಆಡಮ್ ಮಿಲ್ನೆ (3.2 ಕೋಟಿ), ಪಿಯೂಷ್ ಚಾವ್ಲಾ (2.4 ಕೋಟಿ), ಜೇಮ್ಸ್ ನೀಶಮ್ (50 ಲಕ್ಷ), ಯುದ್‌ವೀರ್ ಚರಕ್ (20 ಲಕ್ಷ), ಮಾರ್ಕೊ ಜಾನ್ಸೆನ್ (20 ಲಕ್ಷ), ಅರ್ಜುನ್ ತೆಂಡೂಲ್ಕರ್ (20) ಲಕ್ಷ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications