ಆರ್‌ಸಿಬಿ ಪರ ಕೊಹ್ಲಿ, ಎಬಿಡಿ ಮೇಲಿನ ಒತ್ತಡ ಕಡಿಮೆ ಮಾಡಬಲ್ಲ ಆಟಗಾರನನ್ನು ಹೆಸರಿಸಿದ ಗಂಭೀರ್!

ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಸಾಕಷ್ಟು ಅಭಿಪ್ರಾಯಗಳು ಕೇಳಿ ಬರುತ್ತಿದೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಲಿ ಸಂಸದ ಗೌತಮ್ ಗಂಭೀರ್ ಆರ್‌ಸಿಬಿ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ. ಆರ್‌ಸಿಬಿ ತಂಡ ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಆಸ್ಟ್ರೇಲಿಯಾ ಆಲ್‌ರೌಂಡರ್ ಕಡೆಗೆ ಗಮನ ಹರಿಸಬಹುದು ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಆರಂಭಿಕ ಜೋಡಿಯ ಬಗ್ಗೆ ಗಂಭೀರ್ ಸಲಹೆಯನ್ನು ನೀಡಿದರು. ದೇವದತ್ ಪಡಿಕ್ಕಲ್ ಜೊತೆಗೆ ವಿರಾಟ್ ಕೊಹ್ಲಿ ಆರಂಬಿಕನಾಗಿ ಕಣಕ್ಕಿಳಿಯುವುದು ಸೂಕ್ತವಾಗಿದೆ. ಅದಾದ ಬಳಿಕ ಎಬಿ ಡಿವಿಲಿಯರ್ಸ್ ಇದ್ದಾರೆ ಎಂದು ಗಂಭೀರ್ ಹೇಳಿದರು.

ಗುಣಮಟ್ಟದ ಆಟಗಾರರ ಅನಿವಾರ್ಯತೆ
"ಆರ್‌ಸಿಬಿ ತಂಡಕ್ಕೆ ಕೆಲ ಗುಣಮಟ್ಟದ ಆಟಗಾರರ ಅನಿವಾರ್ಯತೆಯಿದೆ. ಯಾಕೆಂದರೆ ಅವರು ಮೊಯೀನ್ ಅಲಿ, ಉಮೇಶ್ ಯಾದವ್ ಅವರಂತಾ ಕೆಲ ಗುಣಮಟ್ಟದ ಆಟಗಾರರನ್ನು ಬಿಟ್ಟುಕೊಟ್ಟಿದ್ದಾರೆ" ಎಂದು ಗೌತಮ್ ಗಂಭೀರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮ್ಯಾಕ್ಸ್‌ವೆಲ್‌ರತ್ತ ಚಿತ್ತ ನೆಡಬಹುದು
"ಬಹುಶಃ ಆರ್‌ಸಿಬಿ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ತರಹದ ಆಟಗಾರರತ್ತ ಗಮನಹರಿಸಬಹುದು. ಯಾಕೆಂದರೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಲಿಯರ್ಸ್ ಮೇಲಿರುವ ಸಾಕಷ್ಟು ಒತ್ತಡವನ್ನು ಕಡಿಮೆ ಮಾಡಬಲ್ಲ ಆಟಗಾರನ ಅಗತ್ಯವಿದೆ" ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಹರಾಜಿನಲ್ಲಿ ಕುತೂಹಲ
ಗುರುವಾರ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದ್ದು ಆರ್‌ಸಿಬಿ ಯಾವ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಬಹುದು ಎಂಬ ಕುತೂಹಲ ಮೂಡಿಸಿದೆ. ಆರೋನ್ ಫಿಂಚ್, ಕ್ರಿಸ್ ಮೋರಿಸ್, ಉಮೇಶ್ ಯಾದವ್ ಅವರಂತಾ ಕೆಲ ಪ್ರಮುಖ ಆಟಗಾರರನ್ನು ಆರ್‌ಸಿಬಿ ಹರಾಜಿಗೆ ಬಿಟ್ಟುಕೊಟ್ಟಿದ್ದು ಆವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದಕ್ಕೆ ಉತ್ತರ ದೊರೆಯಲಿದೆ.

ಮ್ಯಾಕ್ಸ್‌ವೆಲ್‌ಗೂ ಆರ್‌ಸಿಬಿ ಸೇರುವ ಹಂಬಲ
ಇನ್ನು ಗೌತಮ್ ಗಂಭೀರ್ ಈ ಸಲಹೆಗೂ ಮುನ್ನ ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಆರ್‌ಸಿಬಿ ತಂಡವನ್ನು ಸೇರಿಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಯ ಜೊತೆಗೆ ಆಡುವುದು ನಿಜಕ್ಕೂ ಉತ್ತಮ ಅನುಭವ ನೀಡಲಿದ ಎಎಂಬ ಮಾತನ್ನು ಮ್ಯಾಕ್ಸ್‌ವೆಲ್ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications