ಚಾಂಪಿಯನ್ಸ್ ಟ್ರೋಫಿಯ ಕಾಮೆಂಟರ್ಸ್ ಗಳಾಗಿ ಗಂಗೂಲಿ, ಪಾಂಟಿಂಗ್ ಆಯ್ಕೆ
ದುಬೈ, ಏಪ್ರಿಲ್ 18 : ಇಂಗ್ಲೆಂಡ್ ನಲ್ಲಿ ಜೂನ್ 1ರಿಂದ 18ರವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ವೀಕ್ಷಕ ವಿವರಣೆಕಾರರಾಗಿ ಭಾರತದ ಮಾಜಿ ಕ್ರಿಕೆಟಿರ್ ಸೌರವ್ ಗಂಗೂಲಿ ಹಾಗೂ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಯ್ಕೆ ಮಾಡಿದೆ.
ಮಾಜಿ ಸ್ಟಾರ್ ಕ್ರಿಕೆಟರ್ಸ್ ಗಳಾದ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್, ಶ್ರೀಲಂಕಾದ ಕುಮಾರ ಸಂಗಕ್ಕರ, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅವರು ವೀಕ್ಷಕ ವಿವರಣೆಕಾರರ ಸ್ಪರ್ಧೆಯಲ್ಲಿದ್ದರು. ಇದೇ ಚಾಂಪಿಯನ್ಸ್ ಟ್ರೋಫಿಗೆ ಭಾರತದ ಹರ್ಭಜನ್ ಸಿಂಗ್ ಅವರನ್ನು ರಾಯಬಾರಿಯನ್ನಾಗಿ ಐಸಿಸಿ ಆಯ್ಕೆ ಮಾಡಿತ್ತು.[ಚಾಂಪಿಯನ್ಸ್ ಟ್ರೋಫಿಗೆ ರಾಯಭಾರಿಗಳಾಗಿ ಹರ್ಭಜನ್ ಸೇರಿ 8 ಕ್ರಿಕೆಟರ್ಸ್ ಆಯ್ಕೆ]

'ನಾನು ಆಟಗಾರನಾಗಿ 2 ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದೇನೆ. ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ವೀಕ್ಷಕ ವಿವರಣೆಕಾರರ ತಂಡದಲ್ಲಿ ಅವಕಾಶ ದೊರೆತಿರುವುದು ಸಂತೋಷ ತಂದಿದೆ' ಎಂದು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ತಿಳಿಸಿದ್ದಾರೆ.
3 ವಾರಗಳ ಕಾಲ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಲು ಎಲ್ಲ ತಂಡಗಳಿಗೂ ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ.
ಭಾರತ ಸೇರಿದಂತೆ ಪ್ರಮುಖ 8 ತಂಡಗಳ ನಡುವೆ ಹಣಾಹಣೆ ನಡೆಯಲಿದ್ದು, ಐಸಿಸಿ ಟಿವಿ ಪಂದ್ಯಾವಳಿಗಳ ಪ್ರಸಾರದ ಹೊಣೆ ನಿರ್ವಹಿಸಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಸೆಣಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications