ಗಂಗೂಲಿ ನೀಡಿದ ಹೇಳಿಕೆ ದೊಡ್ಡ ಭರವಸೆ: ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್

ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆ ವಿಶ್ವದಾದ್ಯಂತ ಎಲ್ಲ ಕ್ರಿಕೆಟಿಗರಿಗೆ ಒಳ್ಳೆಯ ಸುದ್ದಿ. ಇದು ಅತ್ಯಂತ ದೊಡ್ಡ ಭರವಸೆ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಸೌರವ್ ಗಂಗೂಲಿ ಐಪಿಎಲ್ ನಡೆಸಲು ಪ್ರಯತ್ನಿಸುತ್ತಿರುವ ಬಗ್ಗೆ ನೀಡಿದ ಹೇಳಿಕೆಯನ್ನು ಪತ್ರಿಕೆಯ ಮೂಲಕ ನಾನು ತಿಳಿದುಕೊಂಡೆ. ಎಲ್ಲರೂ ಅವರ ನಿರ್ಧಾರಕ್ಕಾಗಿ ಸಹನೆಯಿಂದ ಕಾಯುತ್ತಿದ್ದಾರೆ. ಹೀಗಾಗಿ ಗಂಗೂಲಿ ನೀಡಿದ ಹೇಳಿಕೆಗೆ ಬಹಳಷ್ಟು ಮಹತ್ವ ಇದೆ ಎಂದು ಪಠಾಣ್ ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರಭ್ ಗಂಗೂಲಿ ಅವರು ನೀಡಿರುವ ಹೇಳಿಕೆ ಭಾರತೀಯ ಕ್ರಿಕೆಟಿಗರಿಗೆ ಮಾತ್ರವಲ್ಲ, ಜಗತ್ತಿನ ಎಲ್ಲ ಕ್ರಿಕೆಟಿಗರಿಗೂ ಇದು ತುಂಬಾ ಒಳ್ಳೆಯ ಸುದ್ದಿ. ನಾನು ಸಹ ಅದನ್ನು ಎದುರು ನೋಡುತ್ತಿದ್ದೇನೆ. ಇದು ಎಲ್ಲ ಕ್ರಿಕೆಟಿಗರಿಗೆ ಸಾಕಷ್ಟು ವಿಶ್ವಾಸವನ್ನು ನೀಡಿದೆ "ಎಂದು ಹೇಳಿದ್ದಾರೆ.
ಐಪಿಎಲ್‌ನ 13 ನೇ ಆವೃತ್ತಿ ಈ ವರ್ಷ ಮಾರ್ಚ್ 29 ರಿಂದ ಆರಂಭವಾಗಬೇಕಿತ್ತು. ಆದರೆ ಕೊರೋನಾದ ವೈರಸ್‌ನ ಕಾರಣದಿಂದಾಗಿ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮುಂಡೂಡಲ್ಪಟ್ಟರೆ ಆ ಸಮಯದಲ್ಲಿ ಐಪಿಎಲ್ ಆರಂಭವಾಗುವ ನಿರೀಕ್ಷೆಯಿದೆ.
ಮತ್ತೊಂದೆಡೆ ಬಿಸಿಸಿಐ ಐಪಿಎಲ್ ನಡೆಸುವ ದಿನಾಂಕವನ್ನು ಕೂಡ ನಿರ್ಧರಿಸಿದೆ. ಇದಕ್ಕೆ ವೇಳಾಪಟ್ಟಿಯನ್ನು ಕೂಡ ಈಗಾಗಲೇ ಬಿಸಿಸಿಐ ಸಿದ್ದಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಆದರೆ ಟಿ20 ವಿಶ್ವಕಪ್ ಬಗ್ಗೆ ಐಸಿಸಿ ಮುಂದಿನ ತಿಂಗಳು ರೆಗೆದುಕೊಳ್ಳುವ ನಿರ್ಧಾರವನ್ನು ಎದುರು ನೋಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications