ಟೀಮ್ ಇಂಡಿಯಾಕ್ಕೆ ಮುಂದಿದೆ ಅಗ್ನಿ ಪರೀಕ್ಷೆ ಎಂದು ಎಚ್ಚರಿಸಿದ ದಾದಾ
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಭಾರತ ತಂಡದ ಕೋಚ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಕಳೆದ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಹಾಗೂ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಗೆದ್ದ ತಂಡದ ಕೋಚ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಭಾರತ, ಪ್ರಶಸ್ತಿ ಗೆದ್ದಿತು. ಈ ಸಮಯದಲ್ಲಿ ಮಾಜಿ ಆಟಗಾರರು ಅಭಿನಂದಿಸಿದ್ದಾರೆ. ಆದರೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮಾತ್ರ ಗಂಭೀರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ನಿಜವಾದ ಅಗ್ನಿ ಪರೀಕ್ಷೆಗೆ ಇನ್ನು ಒಂದು ವರ್ಷ ಬಾಕಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 50 ಓವರ್‌ಗಳ ಕ್ರಿಕೆಟ್ ವಿಶ್ವಕಪ್ ರೂಪದಲ್ಲಿ ದೊಡ್ಡ ಪರೀಕ್ಷೆ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಿಜವಾದ ಪರೀಕ್ಷೆ ಆರಂಭವಾಗಲಿದೆ. ಅಲ್ಲಿನ ಪರಿಸ್ಥಿತಿಗಳು ಆಟಗಾರರನ್ನು ಪರೀಕ್ಷಿಸುತ್ತವೆ. ಈ ಪರೀಕ್ಷೆಯಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.

ಬೋರಿಯಾ ಮಜುಂದಾರ್ ಅವರ ಜೊತೆಗಿನ ಸಂದರ್ಶನದಲ್ಲಿ ಗಂಗೂಲಿ ಮಾತನಾಡಿ, 2011 ರ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯ ಗಂಭೀರ್, ಮುಖ್ಯ ಕೋಚ್ ಆಗಿ ತಂಡಕ್ಕಾಗಿ ಪ್ರಶಸ್ತಿ ಗೆಲ್ಲುವ ಒತ್ತಡ ಎದುರಿಸುತ್ತಿದ್ದಾರೆ. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಗೆ ಟ್ರೋಫಿ ಗೆಲ್ಲಲು ಕೊನೆಯ ಚಾನ್ಸ್ ಎಂದು ಹೇಳಿದ್ದಾರೆ. ಅಲ್ಲದೆ ಭಾರತ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಪ್ರದರ್ಶನವನ್ನು ಸುಧಾರಿಸಬೇಕು ಎಂದು ತಿಳಿಸಿದ್ದಾರೆ.
ಟೆಸ್ಟ್‌ನಲ್ಲಿ ತಂಡ ಹೀಗೆ ಮಾಡಬೇಕು
ಕೋಚ್ ಗಂಭೀರ್ ಅವರನ್ನು ಸೌರವ್ ಗಂಗೂಲಿ ಬೆಂಬಲಿಸಿದ್ದಾರೆ. ಗೌತಮ್ ಒಬ್ಬ ಒಳ್ಳೆಯ ಕೋಚ್. ಅವರು ತುಂಬಾ ಒಳ್ಳೆಯ ತಂಡವನ್ನು ಹೊಂದಿದ್ದಾರೆ ಮತ್ತು ಅವರು ತುಂಬಾ ಒಳ್ಳೆಯ ಕೋಚ್ ಎಂದಿದ್ದಾರೆ. ಭಾರತ ತಂಡ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಇದಕ್ಕೆ ಒಂದೇ ಒಂದು ಮಾರ್ಗ ಎಂದರೆ ತಂಡ ವಿಕೆಟ್ ಬಗ್ಗೆ ಹೆಚ್ಚಿನ ಯೋಚನೆ ಮಾಡಬಾರದು. ಇಂಗ್ಲೆಂಡ್ ಸರಣಿಯಲ್ಲಿ ತಂಡ ಆಡಿದ ಧಾಟಿಯಲ್ಲಿ ಆಡಿದರೆ ಯಶಸ್ಸು ಸಿಗುತ್ತದೆ. ಉತ್ತಮ ವಿಕೆಟ್‌ಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ" ಎಂದು ಗಂಗೂಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications