Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Divorce: ಭಾರತ ತಂಡದ ಮತ್ತೊಬ್ಬ ದಂಪತಿಗಳ ನಡುವೆ ವಿರಸ

ಕಳೆದ ಕೆಲವು ವರ್ಷಗಳಿಂದ, ಕ್ರಿಕೆಟ್ ಜಗತ್ತಿನಲ್ಲಿ ಮುರಿದ ಸಂಬಂಧಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಕಳೆದ ವರ್ಷ ಬೇರ್ಪಟ್ಟಿದ್ದರು. ಈ ವರ್ಷ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವಿಚ್ಛೇದನ ಪಡೆದರು. ಈಗ ಮತ್ತೊಂದು ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಭಾರತ ತಂಡದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ವಿರುದ್ಧ ಅವರ ಪತ್ನಿ ಗರಿಮಾ ತಿವಾರಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

ಅಮಿತ್ ಮಿಶ್ರಾ ಮತ್ತು ಅವರ ಕುಟುಂಬದ ವಿರುದ್ಧ ಗರಿಮಾ ತಿವಾರಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಪೊಲೀಸ್ ಆಯುಕ್ತರು ಕೂಡ ಆದೇಶಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ನ್ಯಾಯಲಯದಲ್ಲಿ ಮೇ 26 ರಂದು ನಡೆಯಲಿದೆ.

Garima Tiwari has made serious allegations against Amit Mishra and his family

ಅಮಿತ್ ಮಿಶ್ರಾ ಅವರು ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಹಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಪತ್ನಿ ಗರಿಮಾ ತಿವಾರಿ ನೀಡಿರುವ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿಗಳ ಪ್ರಕಾರ, ಅಮಿತ್ ಮಿಶ್ರಾ ವಿರುದ್ಧ ಗರಿಮಾ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದು, ತನ್ನ ಅತ್ತೆ ಮಾವ 10 ಲಕ್ಷ ರೂ. ಮತ್ತು ಹೋಂಡಾ ಸಿಟಿ ಕಾರು ತೆಗೆದುಕೊಂಡು ಬರುವಂತೆ ಹೇಳಿದ್ದರು. ಇದನ್ನು ನಾನು ತರಲು ನಿರಾಕರಿಸಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗರಿಮಾ ಹೇಳಿದ್ದಾರೆ. ಇದಲ್ಲದೆ, ಅಮಿತ್ ಮಿಶ್ರಾ ಅವರು ಗರಿಮಾ ಮಾಡೆಲಿಂಗ್‌ನಿಂದ ಪಡೆಯುತ್ತಿದ್ದ ಹಣವನ್ನು ಕಸಿದುಕೊಂಡ ಆರೋಪವೂ ಕೇಳಿ ಬಂದಿದೆ.

ಅಮಿತ್ ಮಿಶ್ರಾ ಮತ್ತು ಗರಿಯಾ ಏಪ್ರಿಲ್ 26, 2021 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಅಮಿತ್ ಮಿಶ್ರಾ ಕ್ರಿಕೆಟ್‌ನಿಂದ ದೂರವಿದ್ದು,ಕಾಲ್ಪುರದ ರಿಸರ್ವ್ ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗರಿಯಾ ನೀಡಿರುವ ಹೇಳಿಕೆ ಪ್ರಕಾರ, ಅಮಿತ್ ಮಿಶ್ರಾ ನನ್ನ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಅವರು ಆನೇಕ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಇದನ್ನು ನಾನು ನಾಲ್ಕು ತಿಂಗಳ ಹಿಂದೆ ವಿರೋಧಿಸಿದ್ದಕ್ಕಾಗಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು. ಸದ್ಯ ನಾನು ಅಮ್ಮನ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದಿದ್ದಾರೆ.

ಪತ್ನಿ ಗರಿಯಾ ಮಾಡಿರುವ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಅಮಿತ್ಮಿಶ್ರಾ, ತಮ್ಮ ಪತ್ನಿಯೇ ಕಿರುಕುಳ ನೀಡುತ್ತಿದ್ದು. ಬ್ಯಾಂಕ್ ಕಚೇರಿಯ ಹೊರಗೆ ಒಮ್ಮೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಇಬ್ಬರ ಆರೋಪಗಳಲ್ಲಿ ಯಾರದ್ದು ನಿಜ ಎಂಬುದು ಇನ್ನಷ್ಟೇ ಹೊರಬರಬೇಕಿದೆ.

Story first published: Tuesday, April 22, 2025, 17:06 [IST]
Other articles published on Apr 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+