ರಾಯಲ್ ಚಾಲೆಂಜರ್ಸ್ ಕೋಚ್, ಮೆಂಟರ್ ಆಗಿ ಗ್ಯಾರಿ ಕರ್ಸ್ಟನ್ ಆಯ್ಕೆ

ಬೆಂಗಳೂರು, ಆಗಸ್ಟ್ 30: ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಕೋಚ್ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಆರ್ಸಿಬಿಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಭಾರತ vs ಇಂಗ್ಲೆಂಡ್ Live Score ಕೆಳಗಿದೆ
ಗ್ಯಾರಿ ಕರ್ಸ್ಟನ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 2018ರಲ್ಲಿ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದರು. ಏಕದಿನ, ಟೆಸ್ಟ್ ಮತ್ತು ಫಸ್ಟ್ ಕ್ಲಾಸ್ ಕ್ರಿಕೆಟ್ ಎಲ್ಲಾ ಸೇರಿಸಿ ಒಟ್ಟು ಸುಮಾರು 700 ಪಂದ್ಯಗಳನ್ನಾಡಿದ ಅನುಭವ ಗ್ಯಾರಿ ಅವರಿಗಿದೆ. ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಒಟ್ಟು 40,000 ರನ್ ಸಾಧನೆಯನ್ನು ಕರ್ಸ್ಟನ್ ಹೊಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ಸಿಬಿಯ ಅಧ್ಯಕ್ಷ ಸಂಜೀವ್ ಚುರಿವಾಲಾ ಪ್ರತಿಕ್ರಿಯಿಸಿ, 'ತಂಡಕ್ಕೆ ಡೇನಿಯಲ್ ವೆಟೋರಿ ಅವರ 8 ವರ್ಷ ಸೇವೆ ಶ್ಲಾಘನೀಯ. ಮುಂದಿನ ಅವರ ಭವಿಷ್ಯಕ್ಕೆ ಮನದುಂಬಿ ಶುಭ ಹಾರೈಸುತ್ತಿದ್ದೇವೆ' ಎಂದರು.
'ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮೆಂಟರ್ ಮತ್ತು ಕೋಚ್ ಆಗಿ ಗ್ಯಾರಿ ಕರ್ಸ್ಟನ್ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ. ಕಳೆದ ಐಪಿಎಲ್ ಸೀಸನ್ ನಲ್ಲಿ ತಂಡಕ್ಕೆ ಗ್ಯಾರಿ ಅವರ ಮಾರ್ಗದರ್ಶನ ಗಮನಾರ್ಹವಾಗಿತ್ತು. ಮುಂಬರುವ ದಿನಗಳಲ್ಲಿ ಯುವ ತಂಡ ಆರ್ಸಿಬಿ ಹೆಚ್ಚು ಹೊಸತನದಿಂದ ಮಿನುಗಲಿದೆ ಎಂದು ನಾವು ಭಾವಿಸಿದ್ದೇವೆ' ಎಂದು ಸಂಜೀವ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications