For Quick Alerts
ALLOW NOTIFICATIONS  
For Daily Alerts
 

Gary Kirsten: ಭಾರತಕ್ಕೆ ವಿಶ್ವಕಪ್‌ ತಂದು ಕೊಟ್ಟ ಗ್ಯಾರಿ ಕರ್ಸ್ಟನ್ ಪಾಕ್‌ ತಂಡಕ್ಕೆ ಕೋಚ್‌

2024ರ ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (ಪಿಸಿಬಿ) ಹೊಸ ಹೆಜ್ಜೆವೊಂದನ್ನು ಇಟ್ಟಿದ್ದು, ತಮ್ಮ ನೂತನ ಕೋಚ್‌ ಸಿಬ್ಬಂದಿಯನ್ನು ಘೋಷಿಸಿದೆ.

ಸಿಮೀತ ಓವರ್‌ಗಳ ತಂಡಕ್ಕೆ (ಏಕದಿನ ಮತ್ತು ಟಿ20) ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಅವರನ್ನು ಕೋಚ್‌ ಆಗಿ ನೇಮಿಸಲಾಗಿದೆ. ಜೊತೆಗೆ ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್‌ ಜೇಸನ್‌ ಗೆಲ್ಲೆಸ್ಪಿ ಅವರನ್ನು ಟೆಸ್ಟ್ ತಂಡದ ತರುಬೇತುರದಾರರಾಗಿ ನೇಮಕ ಮಾಡಲಾಗಿದೆ. ಈ ಕುರಿತು ಲೋಹರ್‌ ನಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಪಿಸಿಬಿ ಅಧ್ಯಕ್ಷ್ಯ ಮೊಹ್ಸಿನ್‌ ನಖ್ವಿ ಅವರು ತಿಳಿಸಿದ್ದಾರೆ.

Gary Kirsten is new coach for Pakistan Cricket Team

ಆಸ್ಟ್ರೇಲಿಯಾ ಸಿಮನ್ ಕಟಿಚ್ ಮತ್ತು ಇಂಗ್ಲೆಂಡ್​ನ ಪೀಟರ್ ಮೂರ್ಸ್ ಅವರೊಂದಿಗೆ ಗ್ಯಾರಿ ಕರ್ಸ್ಟನ್ ಕೂಡ ಪಾಕ್‌ ತಂಡದ ಕೋಚ್ ಸ್ಥಾನಕ್ಕೆ ಅರ್ಜಿ ಹಾಕಿದ್ದರು. ಈ ಹಿಂದೆಯೇ ಪಾಕ್‌ ವೈಟ್‌ ಬಾಲ್‌ ತಂಡದ ಕೋಚ್‌ ಆಗುವುದು ಪಕ್ಕಾ ಎಂದು ಪಾಕ್‌ ಮಾಧ್ಯಮಗಳು ತಿಳಿಸಿದ್ದವು.

ಗ್ಯಾರಿ ಕರ್ಸ್ಟನ್ ಅವರು ದಕ್ಷಿಣ ಆಫ್ರಿಕಾದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದು, ಭಾರತ ಕಂಡ ಸರ್ವಶ್ರೇಷ್ಠ ಕೋಚ್‌ ಎನಿಸಿಕೊಂಡಿದ್ದಾರೆ. ಅಲ್ಲದೆ, ವಿಶ್ವ ಅತ್ಯುತ್ತಮ ಕೋಚ್‌ಗಳ ಸಾಲಿನ ಗ್ಯಾರಿ ಕೂಡ ನಿಲ್ಲುತ್ತಾರೆ. ಏಕೆಂದರೆ 2011ರ ಏಕದಿನ ವಿಶ್ವಕಪ್‌ ಟೂರ್ನಿ ವೇಳೆ ಎಂಎಸ್ ಧೋನಿ ನೇತೃತ್ವದ ಟೀಮ್ ಇಂಡಿಯಾಗೆ ಗ್ಯಾರಿ ಕೋಚ್‌ ಆಗಿದ್ದರು.

ಇದೇ ವೇಳೆ ಟೀಮ್‌ ಇಂಡಿಯಾ ಎರಡನೇ ಬಾರಿಗೆ ವಿಶ್ವಕಪ್‌ ಅನ್ನು ಗೆದ್ದು ಇತಿಹಾಸ ಸೃಷ್ಟಿಸಿತ್ತು. ಇಂತಹ ಐತಿಹಾಸಿ ದಿನಕ್ಕೆ ಗ್ಯಾರಿ ಕಾರಣನಾಗಿದ್ದರು.ಭಾರತ ತಂಡದ ಬಹುತೇಕ ಆಟಗಾರರ ವಿಶ್ವಾಸವನ್ನು ಗಳಿಸಿದ್ದ ಗ್ಯಾರಿ ಅವರದ್ದು ಆಕ್ರಮಣಕಾರಿ ಸ್ವಭಾವವಾಗಿರಲಿಲ್ಲ. ಆಟಗಾರರನ್ನು ವಿಶ್ವಾಸಕ್ಕೆ ಪಡೆದು ಅವರನ್ನು ಬಹಳ ನಯವಾಗಿ ಹುರಿದುಂಬಿಸುವ ಕಾರ್ಯವನ್ನು ಗ್ಯಾರಿ ಮಾಡುತ್ತಿದ್ದರು. ಈ ಎಲ್ಲಾ ವಿಚಾರಗಳು ಆಟಗಾರರ ಮೂಲಗಳಿಂದ ತಿಳಿದು ಬಂದಿತ್ತು.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗ್ಯಾರಿ ಆಟ:

1993 ರಿಂದ 2004ರ ವರೆಗೆ ದಕ್ಷಿಣ ಆಫ್ರಿಕಾವನನ್ಜು ಪ್ರತಿನಿಧಿಸಿರುವ 56 ವರ್ಷದ ಗ್ಯಾರಿ ಕರ್ಸ್ಟನ್ ಅದ್ಭುತ ಆಟವಾಡಿದ್ದಾರೆ. 176 ಟೆಸ್ಟ್‌ ಇನ್ನಿಂಗ್ಸ್‌ ಆಡಿರುವ ಗ್ಯಾರಿ 16783 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 23 ಶತಕ, 3 ದ್ವಿ ಶತಕ ಹಾಗು 34 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು 185 ಏಕದಿನ ಪಂದ್ಯವಾಡಿದ್ದು, 6798 ರನ್‌ಗಳನ್ನು ಕಲೆಹಾಕಿದ್ದಾರೆ. 13 ಶತಕಗಳು ಹಾಗು 45 ಅರ್ಧಶತಕಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ.

Story first published: Sunday, April 28, 2024, 17:07 [IST]
Other articles published on Apr 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+