ಭಾರತದ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರೇಸ್‌ನಲ್ಲಿ ಗ್ಯಾರಿ ಕರ್ಸ್ಟನ್!

ನವದೆಹಲಿ, ಡಿಸೆಂಬರ್15: ಭಾರತದ ಪುರುಷರ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ, 2011ರ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ವಿಜೇತ ತಂಡದ ತರಬೇತುದಾರರಾಗಿದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಅವರೂ ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನದ ರೇಸ್‌ಗೆ ಇಳಿದಿದ್ದಾರೆ.
ಮೂಲಗಳ ಪ್ರಕಾರ 2008ರಿಂದ 2011ರ ವರೆಗೆ ಭಾರತದ ಪುರುಷರ ಕ್ರಿಕೆಟ್ ತಂಡದ ಕೋಚ್ ಜವಾಬ್ದಾರಿ ನಿರ್ವಹಿಸಿದ್ದ 51ರ ಹರೆಯದ ಕರ್ಸ್ಟನ್ ತೆರವಾಗಿರುವ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಗ್ಯಾರಿ ಅವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ಹೊತ್ತಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ಮಾಜಿ ತರಬೇತುದಾರರಾದ ಮೈಕ್(ಲ್) ಹಸ್ಸಿ ಅವರೂ ಇದೇ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿತ್ತು. ಆದರೆ ಹಸ್ಸಿ ಅರ್ಜಿ ಸಲ್ಲಿಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.
ಮಿಥಾಲಿ ರಾಜ್ ಅವರನ್ನು ಐಸಿಸಿ ಮಹಿಳಾ ವಿಶ್ವ ಟಿ20 ಸೆಮಿಫೈನಲ್‌ನಲ್ಲಿ ಆಡಿಸದ ವಿವಾದಕ್ಕೆ ಸಂಬಂಧಿಸಿ ಕೋಚ್ ಆಗಿದ್ದ ರಮೇಶ್ ಪೊವಾರ್ ಅವರನ್ನು ನವೆಂಬರ್ 30ರಂದು ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಮತ್ತು ಸ್ಮೃತಿ ಮಂಧಾನ ಒತ್ತಾಯಕ್ಕೆ ರಮೇಶ್ ಮತ್ತೆ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಡಿಸೆಂಬರ್ 20ರಂದು ಸಂದರ್ಶನ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications