ಐಪಿಎಲ್ 2018 : ಆರ್ ಸಿಬಿ ಕೋಚ್ ಆಗುವರೇ ಗ್ಯಾರಿ?
ಬೆಂಗಳೂರು, ಡಿಸೆಂಬರ್ 20: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಗ್ಯಾರಿ ಕರ್ಸ್ಟನ್ ಅವರು ಆಯ್ಕೆಯಾಗುವ ಸಾಧ್ಯತೆ ಕಂಡುಬಂದಿದೆ.
2011ರ ವಿಶ್ವಕಪ್ ಗೆಲ್ಲಲು ಭಾರತಕ್ಕೆ ನೆರವಾಗಿದ್ದ ಮಾಜಿ ಕೋಚ್ ಗ್ಯಾರಿ ಅವರು ಈ ಹಿಂದೆ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಬೆಂಗಳೂರು ಮೂಲದ ಐಪಿಎಲ್ ತಂಡದ ಮುಖ್ಯ ಕೋಚ್ ಆಗಿ 2016ರ ತನಕ ಕಾರ್ಯ ನಿರ್ವಹಿಸಿರುವ ನ್ಯೂಜಿಲೆಂಡ್ ನ ಡೇನಿಯಲ್ ವೆಟ್ಟೋರಿ ಅವರು ಕೋಚ್ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಆರ್ ಸಿಬಿ ಮೂಲಗಳು ಹೇಳಿವೆ. ಆದರೆ, ಗ್ಯಾರಿ ಆಗಮನದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
2016ರಲ್ಲಿ ಐಪಿಎಲ್ ಫೈನಲ್ ತನಕ ತಲುಪಿದ್ದ ಕೊಹ್ಲಿ ಪಡೆ, ಡೇವಿಡ್ ವಾರ್ನರ್ ಅವರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು.
ಗ್ಯಾರಿ ಕರ್ಸ್ಟನ್ ಅವರು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಹೋಬರ್ಟ್ ಹರಿಕೇನ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications