ಐಪಿಎಲ್‌ನ ಅತ್ಯುತ್ತಮ ಕೋಚ್‌ಗಳಲ್ಲಿ ಈತ ಒಬ್ಬ: ಗುರು ಗ್ಯಾರಿಯಿಂದ ಹೊಗಳಿಸಿಕೊಂಡ ಭಾರತೀಯ ಕೋಚ್!

ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನಿಡುವ ಮೂಲಕ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ತಂಡದ ಸರ್ವಾಂಗೀಣ ಪ್ರದರ್ಶನದ ಕಾರಣದಿಂದಾಗಿ ಅರ್ಹವಾಗಿಯೇ ಹಾರ್ದಿಕ್ ಪಾಂಡ್ಯ ಪಡೆ ಚೊಚ್ಚಲ ಆವೃತ್ತಿಯಲ್ಲಿಯೇ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ತಂಡದ ಆಟಗಾರರ ಜೊತೆಗೆ ಕೋಚ್ ಆಶಿಶ್ ನೆಹ್ರಾ ಅವರ ಬೆಂಬಲದ ಬಗ್ಗೆಯೂ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿದೆ.
ಇದೀಗ ಗುಜರಾತ್ ಟೈಟನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಬಗ್ಗೆ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಗ್ಯಾರಿ ಕಿರ್ಸ್ಟನ್ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಣತಂತ್ರಗಳ ವಿಚಾರದಲ್ಲಿ ಆಶಿಶ್ ನೆಹ್ರಾ ಐಪಿಎಲ್‌ನ ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರು ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಆಶಿಶ್ ನೆಹ್ರಾಗೆ ಕೋಚ್ ಆಗಿದ್ದರು ಗ್ಯಾರಿ ಕಿರ್ಸ್ಟನ್
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಶಿಶ್ ನೆಹ್ರಾ 2011ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಭಾರತ ತಂಡದ ಕೋಚ್ ಆಗಿದ್ದವರು ಗ್ಯಾರಿ ಕಿರ್ಸ್ಟನ್ ಎಂಬುದು ಗಮನಾರ್ಹ. ಹೀಗಾಗಿ ತಮ್ಮ ಗುರುವಿನಿಂದಲೇ ಆಶಿಶ್ ನೆಹ್ರಾ ಕೋಚ್ ಹುದ್ದೆಯನ್ನು ನಿಭಾಯಿಸಿದ ರೀತಿಗೆ ಶಬ್ಬಾಶ್‌ಗಿರಿ ಪಡೆದುಕೊಂಡಿದ್ದಾರೆ.
2021ರ ಸಿಡ್ನಿ ಟೆಸ್ಟ್ ವೇಳೆ ನಡೆದಿದ್ದ ಜನಾಂಗೀಯ ನಿಂದನೆ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಹಾನೆ

ಹೃದಯವಂತ ಕೋಚ್ ಎಂದ ಗ್ಯಾರಿ
ಗ್ಯಾರಿ ಕಿರ್ಸ್ಟನ್ ಆಶಿಶ್ ನೆಹ್ರಾ ಅವರನ್ನು ಹೃದಯವಂತ ಕೋಚ್ ಎಂದು ಬಣ್ಣಿಸಿದ್ದಾರೆ. "ಆಶಿಶ್ ನನ್ನ ಆತ್ಮೀಯ ಗೆಳೆಯ. ನಾವಿಬ್ಬರು ಜೊತೆಯಾಗಿ ಸುದೀರ್ಘ ಪಯಣವನ್ನು ಮಾಡಿದ್ದೇವೆ. ಆಟಗಾರನಾಗಿ ಆಟವನ್ನು ಅರ್ಥ ಮಾಡಿಕೊಳ್ಳಲು ಆತನಿಗಿರುವ ಉತ್ಸುಕತೆಯನ್ನು ಹಾಗೂ ವೃತ್ತಿಪರತೆಯನ್ನು ನಾನು ಆನಂದಿಸುತ್ತೇನೆ. ಆತ ಹೃದಯವಂತ ಕೋಚ್. ತನ್ನ ಆಟಗಾರರ ಬಗ್ಗೆ ಯಾವಾಗಲೂ ಚಿಂತಿಸುತ್ತಿದ್ದು ಅವರಿಗೆ ಹೇಗೆ ನಾನು ಸಹಾಯ ಮಾಡಬಹುದು ಎಂದು ಯಾವಾಗಲೂ ಯೋಚಿಸುತ್ತಿರುತ್ತಾರೆ" ಎಂದು ಆಶಿಶ್ ನೆಹ್ರಾ ಬಗ್ಗೆ ಗ್ಯಾರಿ ಕಿರ್ಸ್ಟನ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಭಾರತೀಯರ ಮುಂದಾಳತ್ವ ಇರುವುದು ಮುಖ್ಯ
ಇನ್ನು ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಯಶಸ್ಸು ಸಾಧಿಸಬೇಕಾದರೆ ಭಾರತೀಯರ ಮುಂದಾಳತ್ವ ಇರುವುದು ಬಹಳ ಮುಖ್ಯ ಎಂದಿದ್ದಾರೆ ಗ್ಯಾರಿ ಕಿರ್ಸ್ಟನ್. ಐಪಿಎಲ್‌ನಂತಾ ಟೂರ್ನಿಯಲ್ಲಿ ಹೆಚ್ಚಿನ ಆಟಗಾರರು ಹಿಂದಿ ಮಾತನಾಡುವವರಾಗಿತ್ತಾರೆ. ಹಾಗಾಗಿ ಭಾರತೀಯರ ಮುಂದಾಳತ್ವ ಇರುವುದು ಮುಖ್ಯವಾಗುತ್ತದೆ. ಈ ಸಂದರ್ಭದಲ್ಲಿ ಭಾರತೀಯ ತಂಡದ ಮಾಜಿ ಕೋಚ್ ಗುಜರಾತ್ ಟೈಟನ್ಸ್ ತಂಡದಲ್ಲಿ ಕಳೆದ ಅವಧಿಯನ್ನು ತಾನು ಆನಂದಿಸಿರುವುದಾಗಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications