ಭಾರತ ತಂಡದ ಹೊಸ ಕೋಚಿಂಗ್ ಸ್ಟಾಫ್ ಘೋಷಿಸಿದ ಗೌತಮ್ ಗಂಭೀರ್!
ಜುಲೈ 22 ಸೋಮವಾರ, ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಮುನ್ನ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ, ಗಂಭೀರ್ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಟೀಮ್ ಇಂಡಿಯಾದ ಕೋಚಿಂಗ್ ಸಿಬ್ಬಂದಿಯನ್ನು ಘೋಷಿಸಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿ ಗಂಭೀರ್ ಅವರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಬೆಂಬಲ ನೀಡಲಿದ್ದಾರೆ. ಇದರೊಂದಿಗೆ ರಿಯಾನ್ ಟೆನ್ ಡೋಸ್ಚೇಟ್ ಅವರ ಬೆಂಬಲವನ್ನು ಸಹ ಪಡೆಯಲಿದ್ದಾರೆ.

ಟೀಂ ಇಂಡಿಯಾ ಕೋಚಿಂಗ್ ಸ್ಟಾಫ್
ಸುದ್ದಿಗೋಷ್ಠಿಯಲ್ಲಿ ತಮ್ಮ ಕೋಚಿಂಗ್ ಸ್ಟಾಫ್ ಬಗ್ಗೆ ಬಹಿರಂಗಪಡಿಸಿದ ಗೌತಮ್ ಗಂಭೀರ್, 'ನಾನು ಬಯಸಿದ ತಂಡವನ್ನು ಬಿಸಿಸಿಐನಿಂದ ಪಡೆದುಕೊಂಡಿದ್ದೇನೆ. ನನ್ನ ಬಹುತೇಕ ಬೇಡಿಕೆಗಳನ್ನು ಬಿಸಿಸಿಐ ಈಡೇರಿಸಿದೆ.
ನನ್ನ ಕೋಚಿಂಗ್ ಸ್ಟಾಫ್ ನಲ್ಲಿ ಅಭಿಷೇಕ್ ನಾಯರ್, ಸಾಯಿರಾಜ್ ಬಹುತುಲೆ, ಟಿ ದಿಲೀಪ್ ಇದ್ದಾರೆ. ಇದರೊಂದಿಗೆ, ರಿಯಾನ್ ಟೆನ್ ಡೋಸ್ಕೇಟ್ ಅವರನ್ನು ಕೋಚಿಂಗ್ ಸಿಬ್ಬಂದಿಯಲ್ಲಿ ಸೇರಿಸಲಾಗಿದ್ದು, ಅವರು ಶ್ರೀಲಂಕಾದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಿದರು.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ಮತ್ತು ದಕ್ಷಿಣ ಆಫ್ರಿಕಾ ಮೂಲದ ನೆದರ್ಲೆಂಡ್ಸ್ ಆಲ್‌ರೌಂಡರ್ ರಿಯಾನ್ ಟೆನ್ ಡೋಸ್ಚೇಟ್ ತಂಡದಲ್ಲಿ ಯಾವ ಕೋಚ್ ಪಾತ್ರವನ್ನು ವಹಿಸುತ್ತಾರೆ? ಎಂಬುದು ಸದ್ಯ ತಿಳಿಸಿಲ್ಲ. ಇಬ್ಬರೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ತರಬೇತುದಾರರಾಗಿದ್ದರು.
ಈ ವೇಳೆ ಗೌತಮ್ ಗಂಭೀರ್ ಐಪಿಎಲ್ 2024ರಲ್ಲಿ ಕೆಕೆಆರ್ ಮೆಂಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ಟೀಮ್ ಇಂಡಿಯಾದಲ್ಲಿ ಬೌಲಿಂಗ್ ಕೋಚ್ ಪಾತ್ರದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಾಯಿರಾಜ್ ಬಹುತುಲೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಇದ್ದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ಆಟಗಾರರಿಗೆ ಕ್ಷೇತ್ರ ರಕ್ಷಣೆಯ ಸೂಕ್ಷ್ಮತೆಗಳನ್ನು ಹೇಳಿ ಕೊಡಲಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ತೆರಳಿದ ಭಾರತ
ಜುಲೈ 27 ರಿಂದ ಶ್ರೀಲಂಕಾ ವಿರುದ್ಧ ಭಾರತ ತಂಡವು ಮೊದಲು ಟಿ20 ಸರಣಿ ಆಡಲದೆ. ಇದಕ್ಕಾಗಿ ತಂಡ ಇಂದು ಶ್ರೀಲಂಕಾಕ್ಕೆ ಭಾರತ ತೆರಳಲಿದೆ. ಇಲ್ಲಿ ಟೀಮ್ ಇಂಡಿಯಾ ಮೂರು ಟಿ20 ಪಂದ್ಯಗಳನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಮತ್ತು ಮೂರು ಏಕದಿನ ಪಂದ್ಯಗಳನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಲಿದೆ.
ಭಾರತ vs ಶ್ರೀಲಂಕಾ ಟಿ20 ಸರಣಿ
ಮೊದಲನೇ ಟಿ20- ಜುಲೈ 26- ಪಲ್ಲಕಲೆ
ಎರಡನೇ ಟಿ20- ಜುಲೈ 27- ಪಲ್ಲಕಲೆ
ಮೂರನೇ ಟಿ20- ಜುಲೈ 29- ಪಲ್ಲಕಲೆ
ಭಾರತ vs ಶ್ರೀಲಂಕಾ ಏಕದಿನ ಸರಣಿ
ಮೊದಲನೇ ಏಕದಿನ ಪಂದ್ಯ- ಆಗಸ್ಟ್ 1- ಕೊಲಂಬೊ
ಎರಡನೇ ಏಕದಿನ ಪಂದ್ಯ- ಆಗಸ್ಟ್ 4- ಕೊಲಂಬೊ
ಮೂರನೇ ಏಕದಿನ ಪಂದ್ಯ- ಆಗಸ್ಟ್ 7- ಕೊಲಂಬೊ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications