ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ವಿಶ್ವಕಪ್ ಹೀರೋ ಗೌತಮ್ ಗಂಭೀರ್

ನವದೆಹಲಿ, ಡಿಸೆಂಬರ್ 04: ಕ್ರಿಕೆಟ್ ಜಗತ್ತಿನ ಉತ್ತಮ ಆರಂಭಿಕ ಆಟಗಾರರ ಪೈಕಿ ಒಬ್ಬರೆನಿಸಿದ್ದ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಮಂಗಳವಾರ(ಡಿಸೆಂಬರ್ 04)ದಂದು ತಮ್ಮ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಕ್ರಿಕೆಟ್ ನ ಎಲ್ಲಾ ಮಾದರಿಯಿಂದ ನಿವೃತ್ತಿ ಹೊಂದುತ್ತಿರುವುದಾಗಿ ಹೇಳಿದ್ದಾರೆ.
ಗೌತಮ್ ಗಂಭೀರ್ ಅವರು ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ತಮ್ಮ ವಿದಾಯ ಭಾಷಣ ಮಾಡಿದ್ದಾರೆ.
ಮುಂಬರುವ ಐಪಿಎಲ್ 2019ಕ್ಕೂ ಗಂಭೀರ್ ಅಲಭ್ಯರಾಗಿದ್ದಾರೆ. ಆಂಧ್ರ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರದಂದು ನಡೆಯಲಿರುವ ರಣಜಿ ಪಂದ್ಯವೇ ಅವರ ಕೊನೆ ಪಂದ್ಯವಾಗಲಿದೆ.
ತಮ್ಮ 15ವರ್ಷಗಳ ವೃತ್ತಿ ಬದುಕಿನಲ್ಲಿ ಜೊತೆಗಿದ್ದ ಆಟಗಾರರು, ಕುಟುಂಬಸ್ಥರು, ಅಭಿಮಾನಿಗಳು, ಕೋಚ್ ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಫೇಸ್ ಬುಕ್ ನಲ್ಲಿ 11 ನಿಮಿಷದ ವಿಡಿಯೋ ಹಂಚಿಕೊಂಡಿರುವ ಗಂಭೀರ್ ಅವರು ತಮ್ಮ 15 ವರ್ಷಗಳ ವೃತ್ತಿ ಬದುಕಿನ ರಸ ನಿಮಿಷಗಳನ್ನು ನೆನದಿದ್ದಾರೆ. ಕಹಿ ಸಂದರ್ಭದಲ್ಲಿ ಜತೆಗಿದ್ದವರಿಗೆ ಧನ್ಯವಾದ ಹೇಳಿದ್ದಾರೆ.
37 ವರ್ಷ ವಯಸ್ಸಿನ ಗಂಭೀರ್ ಅವರು ಎರಡು ವಿಶ್ವಕಪ್ (ಐಸಿಸಿ ವಿಶ್ವಕಪ್ 2011 ಹಾಗೂ ವಿಶ್ವ ಟಿ20) ಗೆದ್ದಿದ್ದಲ್ಲದೆ, ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದನ್ನು ಅಭಿಮಾನಿಗಳು ಮರೆಯುವುದಿಲ್ಲ. ಐಪಿಎಲ್ ನಲ್ಲಿ ಎರಡು ಬಾರಿ ಕೋಲ್ಕತ್ತಾ ನೈಟ್ ರೈಡರ್ಶ್ ಗೆ ಕಪ್ ಎತ್ತಲು ನೆರವಾಗಿದ್ದರು. ಈಗ ರಾಜಕೀಯ ಪ್ರವೇಶದ ಬಗ್ಗೆ ಮಾತುಕತೆ ಕೇಳಿ ಬರುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications