Gautam Gambhir: ಗೌತಮ್ ಗಂಭೀರ್‌ನಿಂದಾಗಿ ತನ್ನ ಕ್ರಶ್‌ಗೆ ಪ್ರಪೋಸ್ ಮಾಡದ ಯುವತಿ; ಮುಂದೆ ಆಗಿದ್ದೇನು?
ಮೇ 15 ಬುಧವಾರ, 2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ತಮ್ಮ ಕಟ್ಟುನಿಟ್ಟಿನ ವ್ಯಕ್ತಿತ್ವ ಮತ್ತು ಮಾತುಗಳಿಗೆ ಹೆಸರುವಾಸಿಯಾಗಿದ್ದಾರೆ.
ಇಷ್ಟೇ ಅಲ್ಲ, ಮೈದಾನದಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿಯಿಂದ ಹಿಡಿದು ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತನಕ ಎಲ್ಲರೊಂದಿಗೆ ಗಂಭೀರ್ ಫೈಟ್ ಇಂದಿಗೂ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.

ಆದರೆ ಇದೀಗ ಹುಡುಗಿ ಅಭಿಮಾನಿಯೊಬ್ಬರ ಆಸೆಯನ್ನು ಈಡೇರಿಸುವ ಮೂಲಕ ಗೌತಮ್ ಗಂಭೀರ್ ಮತ್ತಷ್ಟು ಪ್ರಸಿದ್ಧಿಗಳಿಸಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಆಸೆ ಈಡೇರಿಸುವುದನ್ನು ಗೌತಮ್ ಗಂಭೀರ್ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮೂಲಕ ಹಂಚಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ವಾಸ್ತವವಾಗಿ, ಗೌತಮ್ ಗಂಭೀರ್ ನಗುವವರೆಗೂ ನಾನು ನನ್ನ ಕ್ರಶ್‌ಗೆ ಪ್ರಪೋಸ್ ಮಾಡುವುದಿಲ್ಲ ಎಂದು ಬರೆಯಲಾದ ಪೋಸ್ಟರ್ ಅನ್ನು ಹುಡುಗಿ ಅಭಿಮಾನಿಯೊಬ್ಬರು ಸ್ಟೇಡಿಯಂ ಒಳಗೆ ತಂದಿದ್ದರು. ಆ ಪೋಸ್ಟರ್‌ನಲ್ಲಿ 'ಕೋಪಗೊಂಡ' ಗಂಭೀರ್ ಫೋಟೋವನ್ನೂ ಸೇರಿಸಿದ್ದರು.
ಇದೀಗ ಗೌತಮ್ ಗಂಭೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಬದಿಯಲ್ಲಿ ಹುಡುಗಿ ಪೋಸ್ಟರ್ ಹಿಡಿದಿದ್ದರೆ, ಇನ್ನೊಂದು ಬದಿಯಲ್ಲಿ ಗಂಭೀರ್ ನಗುತ್ತಿರುವ ಫೋಟೋ ಇದೆ. ಅದರ ಶೀರ್ಷಿಕೆಯಲ್ಲಿ, ಗಂಭೀರ್ 'ಈಗ ಹೋಗು' ಎಂದು ಬರೆದುಕೊಂಡಿದ್ದಾರೆ.
ಅಂದರೆ ಈಗ ನೀವು ನಿಮ್ಮ ಕ್ರಶ್‌ಗೆ ಪ್ರಪೋಸ್ ಮಾಡಿ ಎಂದು ಪರೋಕ್ಷವಾಗಿ ಗಂಭೀರ್ ಹೇಳಿದ್ದಾರೆ. ಗಂಭೀರ್ ಅವರ ಈ ಪೋಸ್ಟ್‌ಗೆ ನೆಟಿಗರು ಕೂಡ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಗೌತಮ್ ಮೈದಾನದಲ್ಲಿ ತುಂಬಾ ಗಂಭೀರವಾಗಿ ಕಾಣುತ್ತಾರೆ. ಅನೇಕ ಬಾರಿ ಅವರು ಮೈದಾನದಲ್ಲಿ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಮೈದಾನದಲ್ಲಿ ಎಷ್ಟು ಸೀರಿಯಸ್ ಆಗಿ ಕಾಣುತ್ತಾರೋ, ತಂಡಕ್ಕೆ ಯಶಸ್ಸನ್ನೂ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವರ್ಷ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಗೌತಮ್ ಗಂಭೀರ್ ಮೆಂಟರ್ ಆಗಿ ಸೇರಿಕೊಂಡಿದ್ದು, ಕೆಕೆಆರ್ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಕಳೆದ ಎರಡು ವರ್ಷಗಳಲ್ಲಿ ಕೆಕೆಆರ್ ಟಾಪ್-4 ರೊಳಗೆ ಬರಲು ಸಾಧ್ಯವಾಗಲಿಲ್ಲ.
ಗೌತಮ್ ಗಂಭೀರ್ ಅವರು 2011ರಿಂದ 17ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ನಾಯಕರಾಗಿದ್ದರು. 2012 ಮತ್ತು 2014ರಲ್ಲಿ ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದರು.
2022 ಮತ್ತು 2023ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು. ಎರಡೂ ಸೀಸನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇ ಆಫ್ಸ್‌ಗೆ ಕರೆತರುವಲ್ಲಿ ಗೌತಮ್ ಗಂಭೀರ್ ಯಶ ಕಂಡಿದ್ದರು. ನವೆಂಬರ್ 21, 2023ರಂದು ಗೌತಮ್ ಗಂಭೀರ್ ಕೆಕೆಆರ್ ತಂಡಕ್ಕೆ ಮರಳುವ ಘೋಷಣೆಯನ್ನು ಅಧಿಕೃತಗೊಳಿಸಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications