For Quick Alerts
ALLOW NOTIFICATIONS  
For Daily Alerts
 

ವಿರಾಟ್‌, ರೋಹಿತ್ 2027ರ ಏಕದಿನ ವಿಶ್ವಕಪ್‌ ಆಡ್ತಾರಾ? ಕೋಚ್‌ ಹೇಳಿದ್ದೇನು?

ಟೀಮ್ ಇಂಡಿಯಾದ ಆಟಗಾರರು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಈ ವೇಳೆ ಆಟಗಾರರ ತಮ್ಮ ಸ್ಥಿರ ಪ್ರದರ್ಶನದ ಫಲವಾಗಿ ಅಭಿಮಾನಿಗಳ ಮನ ಗೆದಿದ್ದಾರೆ. ಈ ಲೀಗ್ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್‌ ಪ್ರವಾಸ ಬೆಳೆಸಲಿದೆ. ಆ ಬಳಿಕ ಸಾಲು ಸಾಲು ಸರಣಿಗಳು ಟೀಮ್ ಇಂಡಿಯಾದ ಮುಂದಿವೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ 2027ರ ಏಕದಿನ ವಿಶ್ವಕಪ್‌ನ್ನು ರೋಹಿತ್‌ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಡ್ತಾರಾ ಎಂದು. ಈ ಪ್ರಶ್ನೆ ಕೋಚ್‌ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ.

ಟೀಮ್ ಇಂಡಿಯಾ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಈ ಟೂರ್ನಿಯ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋಲು ಕಂಡಿತ್ತು. ಈ ಕಹಿ ಘಟನೆ ಟೀಮ್ ಇಂಡಿಯಾ ಅಭಿಮಾನಿಗಳ ಮನದಲ್ಲಿ ಇನ್ನು ಹಾಗೆ ಇದೇ. ಅಭಿಮಾನಿಗಳು ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಜೋಡಿ ಟಿ20 ವಿಶ್ವಕಪ್‌ ಗೆದ್ದಿದೆ, ಚಾಂಪಿಯನ್ಸ್‌ ಟ್ರೋಫಿ ಗೆದ್ದಿದೆ ಏಕದಿನ ವಿಶ್ವಕಪ್‌ ಗೆಲ್ಲಲಿ ಎಂಬ ಆಸೆಯನ್ನು ಹೊಂದಿದ್ದಾರೆ. ಈ ಅಭಿಮಾನಿಗಳ ಆಸೆಯನ್ನು ಗಮನದಲ್ಲಿಟ್ಟುಕೊಂಡು ಕೋಚ್‌ ಗೌತಮ್‌ ಗಂಭೀರ್ ಅವರಿಗೆ ಈ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ಅವರು ಉತ್ತರ ನೀಡಿದ್ದಾರೆ.

Gautam Gambhir Hints Virat Kohli and Rohit Sharma Could Play in 2027 ODI World Cup if Fit

ಟೀಮ್ ಇಂಡಿಯಾದ ಹಿರಿಯ ಆಟಗಾರರ ಫಾರ್ಮ್‌ ಹಾಗೂ ಫಿಟ್ನೆಸ್‌ ಹಾಗಿಯೇ ಉಳಿದರೆ, ಮುಂಬರುವ ಏಕದಿನ ವಿಶ್ವಕಪ್‌ನ್ನು ಖಂಡಿತವಾಗಿಯೂ ಆಡುತ್ತಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ರೋಹಿತ್, ವಿರಾಟ್‌ ಅವರು ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಗೌತಮ್‌ ಗಂಭೀರ್ ತುಟಿ ಬಿಚ್ಚಿದ್ದಾರೆ. ಖಾಸಗಿ ಚಾನೆಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌತಮ್‌ ಗಂಭೀರ್ ಅವರಿಗೆ ಮುಂಬರುವ ವಿಶ್ವಕಪ್‌ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಅವರ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ.

ವಿರಾಟ್‌, ರೋಹಿತ್‌ ಮುಂಬವರು ವಿಶ್ವಕಪ್‌ ಆಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಅವರಿಬ್ಬರು ಎಲ್ಲಿಯವರೆಗೂ ಆಡಲು ಸಾಧ್ಯವೋ ಅಲ್ಲಿಯವರೆಗೂ ಆಡುತ್ತಾರೆ. ಅವರಿಬ್ಬರ ಪ್ರದರ್ಶನ ಉತ್ತಮವಾಗಿದ್ದು,ಫಿಟ್ನೆಸ್‌ನಿಂದ ಕೂಡಿದ್ದರೆ ಖಂಡಿತವಾಗಿಯೂ ಅವರಿಬ್ಬರೂ ಮುಂದಿನ ಬಾರಿಯ ವಿಶ್ವಕಪ್ ಆಡಬಹುದು ಎಂದು ತಿಳಿಸಿದ್ದಾರೆ. ಇನ್ನು ಇದೇ ಪ್ರಶ್ನೆಗೆ ಮುಂದುವರೆದು ಮಾತನಾಡಿರುವ ಗಂಭೀರ್‌, ವಯಸ್ಸಿನ ಕಾರಣದಿಂದಾಗಿ ಯಾವುದೇ ಆಟಗಾರರನ್ನು ಕೈ ಬಿಡುವ ಮಾತೇ ಇಲ್ಲ. ಆಟಗಾರ 40 ರಿಂದ 45ರ ವರೆಗೆ ಉತ್ತಮವಾಗಿ ಆಡುತ್ತಿದ್ದರೆ ಅವರ ಆಟವನ್ನು ತಂಡದಲ್ಲಿ ಮುಂದುವರೆಸಬಹುದು ಎಂದಿದ್ದಾರೆ.

Gautam Gambhir Hints Virat Kohli and Rohit Sharma Could Play in 2027 ODI World Cup if Fit

ಕ್ರಿಕೆಟ್ ಯಾರ ಸ್ವತ್ತು ಅಲ್ಲ

ಇನ್ನುಸತತ ಸರಣಿ ಸೋಲಿನ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಿದ ಗಂಭೀರ್, "ಕೋಚ್ ಹುದ್ದೆ ಅಲಂಕರಿಸಿ 8 ತಿಂಗಳು ಆಗಿದೆ. ನನ್ನ ಸಂಭಾವನೆಯಿಂದ ಹಿಡಿದು, ಪ್ರದರ್ಶನದ ವರೆಗೆ ಎಲ್ಲದರ ಬಗ್ಗೆಯೂ ಕಾಮೆಂಟ್ ಮಾಡುತ್ತಾರೆ. 25 ವರ್ಷಗಳಿಂದ ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತಿರುವವರು ಕ್ರಿಕೆಟ್ ತಮ್ಮ ಆಸ್ತಿ ಎಂದು ಭಾವಿಸುತ್ತಾರೆ ಎಂದಿದ್ದಾರೆ.

Story first published: Tuesday, May 6, 2025, 20:44 [IST]
Other articles published on May 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+