For Quick Alerts
ALLOW NOTIFICATIONS  
For Daily Alerts
 

ಗೌತಮ್‌ ಗಂಭೀರ್ ಹಾಗೂ ಪಿಚ್ ಕ್ಯುರೇಟರ್ ನಡುವೆ ವಾಗ್ವಾದ: ವಿಡಿಯೋ ವೈರಲ್

ಓವಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಐದನೇ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಸದ್ಯ ಓವಲ್‌ ಅಂಗಳದಲ್ಲಿ ಅಭ್ಯಾಸ ನಡೆಸಿದೆ. ಈ ವೇಳೆ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಟೀಮ್ ಇಂಡಿಯಾ ಕೋಚ್‌, ಓವಲ್‌ ಪಿಚ್ ಕ್ಯೂರಿಯೇಟರ್ ಜೊತೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ಇಬ್ಬರ ನಡುವಿನ ವಾಗ್ವಾದವನ್ನು ನಿಯಂತ್ರಿಸಲು ಸಿಬ್ಬಂದಿ ಮಧ್ಯ ಪ್ರವೇಶಿಸಬೇಕಾಗಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿವೆ. ಈ ವೇಳೆ ಇಂಗ್ಲೆಂಡ್ 2-1 ರಿಂದ ಮುನ್ನಡೆ ಸಾಧಿಸಿದೆ. ಐದನೇ ಟೆಸ್ಟ್‌ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದ್ದು ಎಲ್ಲರ ಚಿತ್ತ ಕದ್ದಿದೆ. ಇದೇ ವೇಳೆ ಟೀಮ್ ಇಂಡಿಯಾ ಕೋಚ್‌ ಗೌತಮ್ ಗಂಭೀರ್ ಹಾಗೂ ಪಿಚ್‌ ಕ್ಯುರೇಟರ್ ನಡುವಿನ ವಾಗ್ವಾದ ವಿವಾದ ಕೇಂದ್ರ ಬಿಂದು ಆಗಿದೆ.

Gautam Gambhir in Heated Oval Pitch Row with Curator Ahead of Crucial India vs England Test

ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಮಾಡುವ ವೇಳೆ ಪಿಚ್ ಕ್ಯುರಿಯೆಟರ್ ಲೀ ಫೋರ್ಟಿಸ್ ಮೈದಾನಕ್ಕೆ ಬಂದರು. ಆದರೆ ಗಂಭೀರ್ ಹಾಗೂ ಇವರ ನಡುವೆ ಏನು ಮಾತುಕತೆ ಆಗಿದೆ. ಬಳಿಕ ಗೌತಮ್‌, ನೀನು ಇಲ್ಲಿ ಕೇವಲ ಗ್ರೌಂಡ್ಸ್‌ಮನ್ ಎಂದು ಹೇಳಿದರು. ಹೀಗೆ ಮುಂದುವರೆದ ಮಾತನಾಡಿದ ಗೌತಮ್‌ ನೀನು ಹೋಗಿ ಯಾರ ಬಳಿ ದೂರು ನೀಡುತ್ತಿಯೋ ನೀಡು ಎಂದು ನೀಡು. ಇಲ್ಲಿ ನಿನ್ನ ಕೆಲಸ ಗ್ರೌಂಡ್ಸ್‌ಮನ್ ಎಂದು ಹೇಳಿದರು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಆಗಿದ್ದು ಏನು?

ಐದನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಓವಲ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ, ಗೌತಮ್ ಗಂಭೀರ್ ಹಾಗೂ ಪಿಚ್ ಕ್ಯುರೇಟರ್‌ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಇಬ್ಬರು ಪಿಚ್‌ ಬಗ್ಗೆ ಚರ್ಚೆಗಳನ್ನು ನಡೆಸಿದರು. ನೀವು ನಮಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಹೇಳುವಂತಿಲ್ಲ ಎಂದು ಗಂಭೀರ್‌ ಪಿಚ್ ಕ್ಯುರೇಟರ್‌ ಲೀ ಫೋರ್ಟಿಸ್ ಗೆ ತಿಳಿಸಿದರು. ಮಾತಿನ ಚಕಮಕಿ ದೀರ್ಘ ಸ್ವರೂಪ ಪಡೆದುಕೊಂಡಂತೆ, ಭಾರತದ ಬ್ಯಾಟಿಂಗ್ ಕೋಚ ಸೀತಾಂಶು ಕೊಟಕ್ ಬಂದು ಕ್ಯುರೇಟರ್ ಅನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಮಾತನಾಡಿದರು.

ಸೀತಾಂಶು ಕೊಟಕ್ ಹೇಳದ್ದೇನು?

ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ ಸೀತಾಂಶು ಕೊಟಕ್ ಈ ಬಗ್ಗೆ ತಿಳಿಸಿದ್ದಾರೆ. ನಾವು ಪಿಚ್ ನೋಡಲ ಹೋದಾಗ, ನಮಗೆ ಪಿಚ್‌ನಿಂದ 2.5 ಮೀಟರ್ ದೂರ ನಿಲ್ಲುವಂತೆ ಸೂಚಿಸಲಾಗಿತ್ತು. ಇದು ಹೇಳಿದ್ದು ನನಗೆ ವಿಚಿತ್ರ ಎನಿಸಿತು. ನಾವು ಪಿಚ್‌ಗೆ ಯಾವುದೇ ಹಾನಿಯನ್ನು ಮಾಡಿರಲಿಲ್ಲ. ಭಾರತೀಯ ಸಹಾಯಕ ಸಿಬ್ಬಂದಿ ಐಸ್ ಬಾಕ್ಸ್‌ ತರುತ್ತಿದ್ದಾಗ ಲೀ ಫೋರ್ಟಿಸ್ ಅವರ ಕೂಗಿದರು. ಇವರ ಈ ವರ್ತನೆಗೆ ಭಾರತದ ಕೋಚ್‌ ಗೌತಮ್ ಗಂಭೀರ್ ಆಕ್ಷೇಪ ವ್ಯಕ್ತ ಪಡಿಸಿದರು. ಅಲ್ಲದೆ ಭಾರತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನೀಡುವುದಿಲ್ಲ ಎಂದು ಬ್ಯಾಟಿಂಗ್ ಕೋಚ ಹೇಳಿದ್ದಾರೆ.

ಯಾರಿದು ಲೀ ಫೋರ್ಟಿಸ್?

ಲಂಡನ್‌ ದಿ ಓವಲ್‌ ಮುಖ್ಯ ಮೈದಾನದ ಸಿಬ್ಬಂದಿಯಾಗಿ ಲೀ ಫೋರ್ಟಿಸ್ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಮೈದಾನ ಸರ್ರೆ ಕೌಂಟಿ ಕ್ಲಬ್ ಪ್ರಧಾನ ಕಚೇರಿ. ಲೀ ಫೋರ್ಟಿಸ್ 2006ರಲ್ಲಿ ಸಹಾಯಕ ಮೈದಾನದ ಸಿಬ್ಬಂದಿಯಾಗಿ ಸೇರಿಕೊಂಡರು. ನಂತರ 2012ರಲ್ಲಿ ಬಡ್ತಿ ನೀಡಲಾಯಿತು. ಇವರು ಪಿಚ ತಯಾರಿಕೆ, ನೆಲದ ನಿರ್ವಹಣೆ, ಅಭ್ಯಾಸ ಪ್ರದೇಶಗಳ ಗುಣಮಟ್ಟದ ಉಸ್ತುವಾರಿಯಾಗಿದ್ದಾರೆ.

Story first published: Tuesday, July 29, 2025, 17:58 [IST]
Other articles published on Jul 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+