ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್‌ಗೆ ಗೌತಮ್ ಗಂಭೀರ್ ಶೇರು?

ಗೌತಮ್ ಗಂಭೀರ್ ಐಪಿಎಲ್‌ನಲ್ಲಿ ಡೆಲ್ಲಿ ಹಾಗೂ ಕೋಲ್ಕತ್ತಾ ತಂಡದ ಆಟಗಾರನಾಗಿ ನಾಯಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಕ್ರಿಕೆಟ್ ಬಿಟ್ಟು ರಾಜಕೀಯ ರಂಗಕ್ಕೆ ಧುಮುಕಿರುವ ಗಂಭೀರ್ ತಮ್ಮ ಹೇಳಿಕೆಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇದರ ಮಧ್ಯೆ ಐಪಿಎಲ್ ಅಂಗಳದಲ್ಲಿ ಮತ್ತೆ ಸದ್ದು ಮಾಡಲು ಗಂಭೀರ್ ಮುಂದಾಗಿದ್ದಾರೆ.
ಆದರೆ ಗಂಭೀರ್ ಈ ಬಾರಿ ಅಬ್ಬರಿಸಲು ಮುಂದಾಗಿರುವುದು ಆಟಗಾರನಾಗಿ ಆಲ್ಲ, ಬದಲಾಗಿ ಮಾಲೀಕನಾಗಿ. ಹೌದು ಈ ಬಾರಿ ಗೌತಮ್ ಗಂಭೀರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶೇರು ಕೊಳ್ಳಲು ಮುಂದಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡದ ಸಹಮಾಲೀಕರಾದ ಜಿಎಂಆರ್ ಗ್ರೂಪ್‌ನ ಜೊತೆಗೆ ಈ ವಿಚಾರವಾಗಿ ಗೌತಮ್ ಗಂಭೀರ್ ಮಾತುಕತೆಯನ್ನು ನಡೆಸಿದ್ದಾರೆ. ಡೆಲ್ಲಿ ಕ್ಯಾಪಿಟಲ್‌ನಲ್ಲಿ ಜಿಎಂಆರ್ ಗ್ರೂಪ್ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್ ತಲಾ 50 ಶೇಕಡಾದಷ್ಟು ಶೇರುಗಳನ್ನು ಹೊಂದಿದೆ.
ಮೂಲಗಳ ಪ್ರಕಾರ ಗೌತಮ್ ಗಂಭೀರ್ 10 ಶೇಕಡಾದಷ್ಟು ಶೇರು ಕೊಳ್ಳಲು ಮುಂದಾಗಿದ್ದಾರೆ. ಕಾನೂನು ಪ್ರಕಾರ ಮುಂದುವರಿಯಬೇಕಾದ ಕಾರಣ ಐಪಿಎಲ್ ಆಡಳಿತ ಮಂಡಳಿಯಿಂದ ಈ ಬಗ್ಗೆ ಗ್ರೀನ್ ಸಿಗ್ನಲ್‌ಗಾಗಿ ಗಂಭೀರ್ ಕಾಯುತ್ತಿದ್ದಾರೆ ತಿಳಿದು ಬಂದಿದೆ.
ಗೌತಮ್ ಗಂಭೀರ್ ಐಪಿಎಲ್‌ನ ಯಶಸ್ವೀ ನಾಯಕರಲ್ಲಿ ಒಬ್ಬರು. ಕೊಲ್ಕತ್ತಾ ನೈಟ್ ರೈಡರ್ಸ್‌ನ ನಾಯಕರಾಗಿ ಎರಡು ಬಾರಿ ಕೋಲ್ಕತ್ತಾ ಚಾಂಪಿಯನ್ ಆಗಲು ಕಾರಣರಾಗಿದ್ದರು. ಅದಕ್ಕೂ ಮುನ್ನ ಡೆಲ್ಲಿ ತಂಡವನ್ನು ಗಂಭೀರ್ ಪ್ರತಿನಿಧಿಸಿದ್ದರು. ಮತ್ತು ತಮ್ಮ ಐಪಿಎಲ್ ಕೆರಿಯರ್ ಅಂತ್ಯದ ಸಂದರ್ಭದಲ್ಲೂ ಗಂಭೀರ್ ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ದರು ಗೌತಮ್ ಗಂಭೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications