For Quick Alerts
ALLOW NOTIFICATIONS  
For Daily Alerts
 

IND vs BAN: ಟೀಮ್ ಇಂಡಿಯಾ ಕ್ಯಾಂಪ್‌ ಸೇರಿದ ಅನ್‌ಕ್ಯಾಪ್ಡ್‌ ಆಟಗಾರ

ಟೀಮ್ ಇಂಡಿಯಾದ ಕೋಚ್‌ ಆಗಿ ಗೌತಮ್‌ ಗಂಭೀರ್‌ ನೇಮಕಗೊಂಡ ಬಳಿಕ ಹಲವು ರೀತಿಯ ಮಾರ್ಪಾಡುಗಳನ್ನು ನೋಡಲಾಗುತ್ತಿದೆ. ಯುವ ಆಟಗಾರರನ್ನು ಹುಡುಕುವಲ್ಲಿ ಗೌತಿ ಮುಂದಾಗಿದ್ದಾರೆ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಗೆದ್ದು ಕೊಂಡಿದ್ದು, ಏಕದಿನ ಸರಣಿಯಲ್ಲಿ ನಿರಾಸೆ ಅನುಭವಿಸಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

ಸೆಪ್ಟೆಂಬರ್‌ 19 ರಂದು ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಬಾಂಗ್ಲಾ, ಭಾರತದಲ್ಲಿ ಎರಡು ಟೆಸ್ಟ್‌ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಭಾನುವಾರ ತಂಡವನ್ನು ಪ್ರಕಟಿಸಲಾಗಿದೆ. ಗೌತಮ್ ಗಂಭೀರ್ ಟೆಸ್ಟ್ ಸರಣಿಗೆ ಅನ್‌ಕ್ಯಾಪ್ಡ್‌ ವೇಗಿಗಳಿಗೆ ನೆಟ್ಸ್‌ ಬೌಲರ್‌ ಆಗಿ ಅವಕಾಶ ಕಲ್ಪಿಸಿದ್ದಾರೆ.

Gautam Gambhir s New Discovery Yudhvir Singh Joins Team India as Net Bowler for Bangladesh Test Series

ಯಧುವಿರ್‌ಗೆ ಅವಕಾಶ

ವರದಿಯ ಪ್ರಕಾರ ಲಕ್ನೋ ಸೂಪರ್‌ ಜೈಂಟ್ಸ್ ತಂಡದ ಪರ ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ಆಟಗಾರನಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಲಭಿಸಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೆಟ್ ಬೌಲರ್ ಆಗಿ ಯುಧವೀರ್ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ಇವರು ಗಂಟೆಗೆ 140-145 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ.

ವರದಿಗಳ ಪ್ರಕಾರ ಯಧುವೀರ್‌ ಅವರಿಗೆ ಶನಿವಾರ ಕರೆ ಬಂದಿದ್ದು, ಸೆಪ್ಟೆಂಬರ್ 12 ರಂದು ಚೆನ್ನೈನಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಅವರ ಬೆಳವಣಿಗೆಗೆ ಪೂರಕವಾಗಿದ್ದು, ಯಧುವೀರ್‌ ಟೀಮ್ ಇಂಡಿಯಾದಲ್ಲಿ ಆಡುವ ಕನಸು ಇನ್ನು ಹತ್ತಿರವಾಗುವ ಸಾಧ್ಯತೆ ಇದೆ.

ಯುಧವೀರ್ ಇದುವರೆಗೆ ಲಕ್ನೋ ಪರ ಐದು ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿದ್ದಾರೆ. 26ರ ಹರೆಯದ ಯುಧವೀರ್ ಇದುವರೆಗೆ ಕೇವಲ 4 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 3 ವಿಕೆಟ್ ಪಡೆದಿದ್ದಾರೆ.

ಟೆಸ್ಟ್‌ ತಂಡ ಪ್ರಕಟ

ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಸರಣಿಗೆ ಭಾನುವಾರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಆಟಗಾರರನ್ನು ಅಳೆದು ತೂಗಿ ಮಣೆ ಹಾಕಲಾಗಿದೆ. ನಾಯಕ ರೋಹಿತ್ ಶರ್ಮ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ಯಶಸ್ವಿ ಜೈಸ್ವಾಲ್‌ ಅವರಿಗೆ ನೀಡಲಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಕನ್ನಡಿಗ ಕೆಎಲ್‌ ರಾಹುಲ್ ಅವರಿಗೆ ಅವಕಾಶ ಸಿಕ್ಕಿದೆ. ಇನ್ನು ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಸರ್ಫರಾಜ್‌ ಖಾನ್‌ ಹಾಗೂ ಧ್ರುವ್ ಜುರೇಲ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಪಿನ್ ಬೌಲರ್‌ ಆರ್‌.ಅಶ್ವಿನ್‌, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್‌ ಯಾದವ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ವೇಗಿಗಳಾದ ಮೊಹಮ್ಮದ್ ಸಿರಾಜ್‌, ಆಕಾಶ್ ದೀಪ್‌, ಜಸ್ಪ್ರಿತ್ ಬುಮ್ರಾ, ಯಶ್ ದಯಾಳ್ ಅವರಿಗೆ ಅವಕಾಶ ಸಿಕ್ಕಿದೆ.

Story first published: Monday, September 9, 2024, 7:00 [IST]
Other articles published on Sep 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+